Serena Williams Retires: 23 ಬಾರಿ ಗ್ರ್ಯಾಂಡ್ ಸ್ಲಾಮ್ ಚಾಂಪಿಯನ್ ಆಗಿರುವ ಸೆರೆನಾ ವಿಲಿಯಮ್ಸ್ ತಮ್ಮ ವೃತ್ತಿ ಬದುಕಿಗೆ ನಿವೃತ್ತಿ ಘೋಷಿಸಿದ್ದಾರೆ. 'ವೋಗ್‌' ಮ್ಯಾಗಜಿನ್ ನ ಸೆಪ್ಟೆಂಬರ್ ಸಂಚಿಕೆಯ ಮುಖಪುಟದಲ್ಲಿ ಕಾಣಿಸಿಕೊಂಡ ನಂತರ, ಟೆನಿಸ್ ತಾರೆ ಸೆರೆನಾ ವಿಲಿಯಮ್ಸ್ ತಮ್ಮ ನಿವೃತ್ತಿಯನ್ನು ಘೋಷಿಸುವ ಪೋಸ್ಟ್ ಅನ್ನು Instagram ನಲ್ಲಿ ಹಂಚಿಕೊಂಡಿದ್ದಾರೆ. ವರ್ಷದ ಕೊನೆಯ ಗ್ರ್ಯಾಂಡ್ ಸ್ಲಾಮ್ ಟೂರ್ನಿಯಾದ ಯುಎಸ್ ಓಪನ್ ಬಳಿಕ ತಾವು ಟೆನಿಸ್‌ಗೆ ವಿದಾಯ ಹೇಳುವುದಾಗಿ ಸೆರೆನಾ ವಿಲಿಯಮ್ಸ್ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

Instagram ನಲ್ಲಿ ವಿಶೇಷ ಪೋಸ್ಟ್ ಹಂಚಿಕೊಂಡ್ ಸೆರೆನಾ
40 ವರ್ಷದ ಟೆನ್ನಿಸ್ ತಾರೆ ಸೆರೆನಾ ವಿಲಿಯಮ್ಸ್ ಅವರು ಮಂಗಳವಾರ ತನ್ನ ಅಧಿಕೃತ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಈ ಕುರಿತು ಪೋಸ್ಟ್ ಹಂಚಿಕೊಂಡಿದ್ದಾರೆ, ಜೀವನದಲ್ಲಿ ನಾವು ಬೇರೆ ದಿಕ್ಕಿನಲ್ಲಿ ಚಲಿಸಲು ನಿರ್ಧರಿಸಬೇಕಾದ ಸಮಯ ಬರುತ್ತದೆ ಎಂದು ಬರೆದಿದ್ದಾರೆ. ನೀವು ಏನನ್ನಾದರೂ ತುಂಬಾ ಪ್ರೀತಿಸಿದಾಗ ಆ ಸಮಯಗಳು ಯಾವಾಗಲೂ ಕಠಿಣವಾಗಿರುತ್ತದೆ. ನನ್ನ ಒಳ್ಳೆಯತನವೆಂದರೆ ನಾನು ಟೆನ್ನಿಸ್ ಅನ್ನು ಆನಂದಿಸುತ್ತೇನೆ. ಆದರೆ ಈಗ ಕೌಂಟ್ ಡೌನ್ ಶುರುವಾಗಿದೆ. ಸೆರೆನಾ ವಿಲಿಯಮ್ಸ್ ಅವರ ಈ ಪೋಸ್ಟ್ ಇದೀಗ ಭಾರಿ ವೈರಲ್ ಆಗಿದೆ.


ಇದನ್ನೂ ಓದಿ-‘ಈ ಆಟಗಾರನನ್ನು ಟೀಂ ಇಂಡಿಯಾಕ್ಕೆ ಸೇರಿಸಿಕೊಳ್ಳುವುದಿಲ್ಲ’: ಶಾಕಿಂಗ್ ಹೇಳಿಕೆ ಕೊಟ್ಟ ಜಡೇಜಾ


ಆಟದ ಗುಣಮಟ್ಟದಲ್ಲಿ ಕುಸಿತ
ಕಳೆದ ಸಾಕಷ್ಟು ದಿನಗಳಿಂದ ಸೆರೆನಾ ತನ್ನ ಹಳೆ ಆಟ ಪ್ರದರ್ಶಿಸುತ್ತಿರಲಿಲ್ಲ. ಸೆರೆನಾ ಈ ವರ್ಷದ ವಿಂಬಲ್ಡನ್ ಓಪನ್‌ಗೆ ಪ್ರವೇಶ ಪಡೆದರೂ ಕೂಡ ಮೊದಲ ಸುತ್ತಿನಲ್ಲೇ ಟೂರ್ನಿಯಿಂದ ನಿರ್ಗಮಿಸಿದ್ದರು. ತಮ್ಮ ಟ್ವಿಟರ್ ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಿರುವ ಸೆರೆನಾ ವಿಲಿಯಮ್ಸ್, 'ಜೀವನದಲ್ಲಿ ನಾವು ಬೇರೆ ದಿಕ್ಕಿನಲ್ಲಿ ಚಲಿಸಲು ನಿರ್ಧರಿಸುವ ಸಮಯ ಬರುತ್ತದೆ. ನೀವು ಏನನ್ನಾದರೂ ತುಂಬಾ ಪ್ರೀತಿಸಿದಾಗ ಆ ಸಮಯಗಳು ಯಾವಾಗಲೂ ಕಠಿಣವಾಗಿರುತ್ತದೆ. ನಾನು ಟೆನ್ನಿಸ್ ಅನ್ನು ಆನಂದಿಸುತ್ತೇನೆ. ಆದರೆ ಇದೀಗ ಕೌಂಟ್ ಡೌನ್ ಆರಂಭಗೊಂಡಿದೆ. ನಾನು ತಾಯಿಯಾಗುವುದರ ಮೇಲೆ, ನನ್ನ ಆಧ್ಯಾತ್ಮಿಕ ಗುರಿಗಳ ಮೇಲೆ ಮತ್ತು ಅಂತಿಮವಾಗಿ ವಿಭಿನ್ನವಾದ ನನ್ನ ಅನ್ವೇಷಣೆಯ ಮೇಲೆ ಗಮನಹರಿಸಬೇಕು, ಆದರೆ ಅಷ್ಟೇ ರೋಮಾಂಚನಕಾರಿ, ನಾನು ಮುಂಬರುವ ಕೆಲವು ವಾರಗಳನ್ನು ಆನಂದಿಸಲಿದ್ದೇನೆ' ಎಂದು ಹೇಳಿದ್ದಾಳೆ.


ಇದನ್ನೂ ಓದಿ-Asia Cup 2022 ಕ್ಕಾಗಿ ಟೀಂ ಇಂಡಿಯಾ ಘೋಷಣೆ, ರೋಹಿತ್ ಶರ್ಮಾ ನಾಯಕ


23 ಬಾರಿ ಗ್ರ್ಯಾಂಡ್ ಸ್ಲಾಮ್ ವಿಜೇತೆ ಸೆರೆನಾ
ಸೆರೆನಾ ವಿಲಿಯಮ್ಸ್ 23 ಬಾರಿ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ. ಸೆರೆನಾ 2003, 2005, 2007, 2009, 2010, 2015, 2017 ವರ್ಷಗಳಲ್ಲಿ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದರೆ, 2002, 2013, 2015 ರಲ್ಲಿ ಫ್ರೆಂಚ್ ಓಪನ್ ಮತ್ತು 2002, 2003, 2009, 2010, 2012, 2015, 2016 ರಲ್ಲಿ ವಿಂಬಲ್ಡನ್ ಗೆದ್ದಿದ್ದಾರೆ. ಇದೇ ವೇಳೆ  ಅವರು 1999, 2002, 2008, 2012, 2013, 2014 ವರ್ಷಗಳಲ್ಲಿ ಯುಎಸ್ ಓಪನ್ ವಿಜೇತರಾಗಿದ್ದಾರೆ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.