Asia Cup 2022: ಏಷ್ಯಾ ಕಪ್ 2022ಕ್ಕಾಗಿ ಟೀಂ ಇಂಡಿಯಾ ಘೋಷಣೆ ಮಾಡಲಾಗಿದೆ. ಏಷ್ಯಾ ಕಪ್ ನಲ್ಲಿ ಈ ಬಾರಿ ರೋಹಿತ್ ಶರ್ಮಾ ತಂಡವನ್ನು ಮುನ್ನಡೆಸಲಿದ್ದಾರೆ. ಆಗಸ್ಟ್ 27 ರಿಂದ UAE ನೆಲದಲ್ಲಿ ಏಷ್ಯಾ ಕಪ್ ಟೂರ್ನಿ ನಡೆಯಲಿದೆ. ಆಗಸ್ಟ್ 28 ರಂದು ಪಾಕಿಸ್ತಾನದ ವಿರುದ್ಧ ನಡೆಯಬೇಕಿರುವ ಪಂದ್ಯದ ಮೂಲಕ ಭಾರತ ತನ್ನ ಏಷ್ಯಾ ಕಪ್ ಅಭಿಯಾನವನ್ನು ಆರಂಭಿಸಲಿದೆ. ಈ ವರ್ಷ ಟಿ20 ವರ್ಲ್ಡ್ ಕಪ್ ಆಯೋಜನೆಯ ಕಾರಣ ಏಷ್ಯಾ ಕಪ್ ಅನ್ನು ಕೂಡ ಟಿ20 ಮಾದರಿಯಲ್ಲಿ ನಡೆಸಲಾಗುತ್ತಿದೆ.
ಏಷ್ಯಾ ಕಪ್ ಗಾಗಿ ಟೀಂ ಇಂಡಿಯಾ ಇಂತಿದೆ,
ಇದನ್ನೂ ಓದಿ-ಶೋಯೆಬ್ ಅಖ್ತರ್ ಆಸ್ಪತ್ರೆಗೆ ದಾಖಲು! ರಾವಲ್ಪಿಂಡಿ ಎಕ್ಸ್‌ಪ್ರೆಸ್'ಗೆ ಏನಾಗಿದೆ ಗೊತ್ತಾ..?
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಶಬ್ ಪಂತ್ (WK), ದಿನೇಶ್ ಕಾರ್ತಿಕ್ (WK), ಹಾರ್ದಿಕ್ ಪಾಂಡ್ಯ, ಆರ್ ಜಡೇಜಾ, ಆರ್ ಅಶ್ವಿನ್, ವೈ ಚಾಹಲ್, ಆರ್ ಬಿಷ್ಣೋಯ್, ಭುವನೇಶ್ವರ್ ಕುಮಾರ್ ಅರ್ಷದೀಪ್ ಸಿಂಗ್ ಮತ್ತು ಅವೇಶ್ ಖಾನ್.
🚨#TeamIndia squad for Asia Cup 2022 - Rohit Sharma (Capt ), KL Rahul (VC), Virat Kohli, Suryakumar Yadav, Deepak Hooda, R Pant (wk), Dinesh Karthik (wk), Hardik Pandya, R Jadeja, R Ashwin, Y Chahal, R Bishnoi, Bhuvneshwar Kumar, Arshdeep Singh, Avesh Khan.
— BCCI (@BCCI) August 8, 2022
ಇದನ್ನೂ ಓದಿ-CWG 2022: 40ನೇ ವಯಸ್ಸಿನಲ್ಲಿ ಕಮಾಲ್ ಮಾಡಿದ ಅಚಂತಾ ಶರತ್ ಕಮಲ್, ಭಾರತದ ಮಡಿಲಿಗೆ 22ನೇ ಚಿನ್ನ
ಏಷ್ಯಾ ಕಪ್ 2022 ಪೂರ್ಣ ವೇಳಾಪಟ್ಟಿ
>> 1ನೇ ಪಂದ್ಯ - ಆಗಸ್ಟ್ 27 ರಂದು - ಶ್ರೀಲಂಕಾ ವಿರುದ್ಧ ಅಫ್ಘಾನಿಸ್ತಾನ
>> 2ನೇ ಪಂದ್ಯ - ಆಗಸ್ಟ್ 28ರಂದು - ಭಾರತ ವಿರುದ್ಧ ಪಾಕಿಸ್ತಾನ
>> 3ನೇ ಪಂದ್ಯ - ಆಗಸ್ಟ್ 30 ರಂದು - ಬಾಂಗ್ಲಾದೇಶ ವಿರುದ್ಧ ಅಫ್ಘಾನಿಸ್ತಾನ
>> 4 ನೇ ಪಂದ್ಯ - ಆಗಸ್ಟ್ 31 ರಂದು - ಭಾರತ ವಿರುದ್ಧ ಕ್ವಾಲಿಫೈಯರ್
>> 5ನೇ ಪಂದ್ಯ - ಸೆಪ್ಟೆಂಬರ್ 1 ರಂದು - ಶ್ರೀಲಂಕಾ ವಿರುದ್ಧ ಬಾಂಗ್ಲಾದೇಶ
>> 6ನೇ ಪಂದ್ಯ - ಸೆಪ್ಟೆಂಬರ್ 2 ರಂದು - ಪಾಕಿಸ್ತಾನ ವಿರುದ್ಧ ಕ್ವಾಲಿಫೈಯರ್
>> 7ನೇ ಪಂದ್ಯ - ಸೆಪ್ಟೆಂಬರ್ 3ರಂದು - B1 ವಿರುದ್ಧ B2
>> 8ನೇ ಪಂದ್ಯ - ಸೆಪ್ಟೆಂಬರ್ 4 ರಂದು - A1 ವಿರುದ್ಧ A2
>> 9ನೇ ಪಂದ್ಯ - ಸೆಪ್ಟೆಂಬರ್ 6 ರಂದು - A1 ವಿರುದ್ಧ B1
>> 10ನೇ ಪಂದ್ಯ - ಸೆಪ್ಟೆಂಬರ್ 7 ರಂದು - A2 ವಿರುದ್ಧ B2
>> 11ನೇ ಪಂದ್ಯ - ಸೆಪ್ಟೆಂಬರ್ 8 ರಂದು - A1 ವಿರುದ್ಧ B2
>> 12ನೇ ಪಂದ್ಯ - ಸೆಪ್ಟೆಂಬರ್ 9 ರಂದು - B1 ವಿರುದ್ಧ A2
>> ಅಂತಿಮ ಪಂದ್ಯ - ಸೆಪ್ಟೆಂಬರ್ 11ಕ್ಕೆ
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.