ಟೆನ್ನಿಸ್: ಗರ್ಭಾವಸ್ಥೆಯ ನಂತರ ಮರಳುವ ಆಟಗಾರರಿಗೆ ನಿಯಮ ಬದಲಿಸಿದ WTA
ಮಹಿಳಾ ಟೆನ್ನಿಸ್ ಅಸೋಸಿಯೇಷನ್ (WTA) ಆಟಗಾರರ ಲೆಗ್ಗಿಂಗ್ಸ್ ಮತ್ತು ಕಂಪ್ರೆಶನ್ ಶರ್ಟ್ಗಳಿಗೆ ಸಂಬಂಧಿಸಿದ ನಿಯಮಗಳನ್ನು ಸಹ ಬದಲಾಯಿಸಿದೆ.
ಪ್ಯಾರಿಸ್: ಮಹಿಳಾ ಟೆನ್ನಿಸ್ ಆಟಗಾರರಿಗೆ, ಈಗ ಗರ್ಭಧಾರಣೆಯ ನಂತರ ಮತ್ತೆ ಟೆನ್ನಿಸ್ ಕೋರ್ಟ್ ಗೆ ಮರಳುವುದು ಸುಲಭವಾಗಲಿದೆ. ಮಹಿಳಾ ಟೆನ್ನಿಸ್ ಅಸೋಸಿಯೇಷನ್ (WTA) ಹಲವು ನಿಯಮಗಳ ಬದಲಾವಣೆಗೆ ಅನುಮೋದಿಸಿದೆ. ಗರ್ಭಾವಸ್ಥೆಯ ನಂತರ ಮರಳುವ ಆಟಗಾರರಿಗೆ ಇದರಿಂದ ಅನುಕೂಲವಾಗಲಿದೆ.
ಈ ನಿಯಮಗಳನ್ನು ಬದಲಿಸಲು ಪ್ರಮುಖ ಕಾರಣವೆಂದರೆ, ಸೆರೆನಾ ವಿಲಿಯಮ್ಸ್ನ ಗರ್ಭಧಾರಣೆಯ ನಂತರ ಉಂಟಾದ ವಿವಾದ. ಈ ಮೊದಲು ಟೆನಿಸ್ ನಲ್ಲಿ ನಂ.1 ಆಗಿದ್ದ ಸೆರೆನಾ ವಿಲಿಯಮ್ಸ್ ಗೆ 2018 ರ ಫ್ರೆಂಚ್ ಓಪನ್ ಪಂದ್ಯಾವಳಿಯಲ್ಲಿ ಆದ್ಯತೆ ನೀಡಲಿಲ್ಲ. ಸೆರೆನಾ ಮಗುವಿಗೆ ಜನ್ಮ ನೀಡಿ ಒಂದು ವರ್ಷಕ್ಕೂ ಅಧಿಕ ಸಮಯದವರೆಗೆ ಪಂದ್ಯಾವಳಿಯಿಂದ ಹೊರಗಿದ್ದು, ಬಳಿಕ ಹಿಂದಿರುಗಿದ್ದರು. ಆದಾಗ್ಯೂ, ಫ್ರೆಂಚ್ ಓಪನ್ ಒಂದು ತಿಂಗಳ ನಂತರ ವಿಂಬಲ್ಡನ್ ನಲ್ಲಿ ಸೆರೆನಾಗೆ 25 ನೇ ಸ್ಥಾನ ನೀಡಲಾಯಿತು, ಆ ಸಮಯದಲ್ಲಿ ಆಕೆಯ ವಿಶ್ವ ರ್ಯಾಂಕಿಂಗ್ 181 ನೇ ಸ್ಥಾನದಲ್ಲಿತ್ತು.
ಡಬ್ಲ್ಯುಟಿಎ ಬದಲಿಗೆ ನಿಯಮಗಳ ಅಡಿಯಲ್ಲಿ, ಗರ್ಭಧಾರಣೆ ಅಥವಾ ಗಂಭೀರವಾದ ಗಾಯದಿಂದಾಗಿ ಒಬ್ಬ ಆಟಗಾರನು 52 ವಾರಗಳ ಅಥವಾ ಅದಕ್ಕಿಂತ ಹೆಚ್ಚು ಅವಧಿಯ ನಂತರ ಮರಳಿದಲ್ಲಿ ಅವನು ಹಿಂದಿನ ಶ್ರೇಯಾಂಕವನ್ನು ಬಳಸಲು ಸಾಧ್ಯವಾಗುತ್ತದೆ. ಆದರೆ ಅವರು ತಮ್ಮ ಹಿಂದಿನ ಶ್ರೇಯಾಂಕವನ್ನು ಹಿಂದಿರುಗಿದ ಒಂದು ವರ್ಷದಲ್ಲಿ ಗರಿಷ್ಠ 12 ಪಂದ್ಯಾವಳಿಗಳಲ್ಲಿ ಬಳಸಲು ಸಾಧ್ಯವಾಗುತ್ತದೆ. ಆಟಗಾರನು ಆರು ತಿಂಗಳುಗಳ ನಂತರ ಹಿಂದಿರುಗಿದಲ್ಲಿ, ನಂತರ ಅವರು ಹಿಂದಿನ ಶ್ರೇಣಿಯನ್ನು ಗರಿಷ್ಠ ಎಂಟು ಪಂದ್ಯಾವಳಿಗಳಲ್ಲಿ ಮಾತ್ರ ಬಳಸಬಹುದು.
ಲೆಗ್ಗಿಂಗ್ಸ್ ಮತ್ತು ಕಂಪ್ರೆಶನ್ ಶರ್ಟ್ ಧರಿಸಲು ಅವಕಾಶ:
ಮಹಿಳೆಯರಿಗೆ ಲೆಗ್ಗಿಂಗ್ಸ್ ಮತ್ತು ಕಂಪ್ರೆಶನ್ ಶರ್ಟ್ ಧರಿಸಲು ಅನುಮತಿಸಲಾಗುವುದು ಎಂದು WTA ಘೋಷಿಸಿತು. ಆದರೆ ಇದಕ್ಕಾಗಿ ಅವರು ಮೇಲಿನಿಂದ ಸ್ಕರ್ಟ್ ಧರಿಸಬೇಕಾಗಿಲ್ಲ. ಈ ವರ್ಷ ಸೆರೆನಾ ವಿಲಿಯಮ್ಸ್ ಒಂದು ಪಂದ್ಯಾವಳಿಯಲ್ಲಿ ಲೆಗ್ಗಿಂಗ್ ಧರಿಸಿದ್ದರು, ಹಲವರು ಅದನ್ನು ಪ್ರಶ್ನಿಸಿದ್ದರು.