IND vs NZ 1st Test Most Runs Record in 3rd Days: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಈ ಪಂದ್ಯದ ಮೂರನೇ ದಿನದಂದು ಹಲವು ದೊಡ್ಡ ದಾಖಲೆಗಳು ನಿರ್ಮಾಣವಾಗಿದ್ದು, ಹಿಂದೆಂದೂ ಕಾಣದ ಶ್ರೇಷ್ಠ ದಾಖಲೆ ಕೂಡ ಈ ಪಟ್ಟಿಯಲ್ಲಿ ಸೇರ್ಪಡೆಗೊಂಡಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಈ ರಾಶಿಯವರ ಬಾಳು ಬಂಗಾರವಾಗಬೇಕಾದರೆ ಬೆರಳಲ್ಲಿ ಚಿನ್ನದ ಉಂಗುರ ಇರಲೇಬೇಕು ! ಹಳದಿ ಲೋಹವಷ್ಟೇ ಬೆಳಗುವುದು ಇವರ ಅದೃಷ್ಟ


ಮೂರನೇ ದಿನದಾಟದಲ್ಲಿ ಕಿವೀಸ್ ಯುವ ಬ್ಯಾಟ್ಸ್ ಮನ್ ರಚಿನ್ ರವೀಂದ್ರ ಶತಕ (134 ರನ್), ಟಿಮ್ ಸೌಥಿ 65 ರನ್, ವಿರಾಟ್ ಕೊಹ್ಲಿ (70 ರನ್) ಮತ್ತು ಸರ್ಫರಾಜ್ ಖಾನ್ (ಅಜೇಯ 70) ಅವರ ಬಿರುಸಿನ ಬ್ಯಾಟಿಂಗ್ ಆಕರ್ಷಣೆಯ ಕೇಂದ್ರಬಿಂದುಗಳಾದವು.  


ಅಂದಹಾಗೆ ಈ ಪಂದ್ಯದ ಮೂರನೇ ದಿನ ಒಟ್ಟು 453 ರನ್‌ಗಳು ದಾಖಲಾಗಿದ್ದು,ಇದು ಭಾರತದಲ್ಲಿ ಆಡಿದ ಯಾವುದೇ ಟೆಸ್ಟ್ ಪಂದ್ಯದ ಮೂರನೇ ದಿನದ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯಾಗಿದೆ. ಭಾರತದಲ್ಲಿ ಟೆಸ್ಟ್ ಪಂದ್ಯದ ಮೂರನೇ ದಿನದಲ್ಲಿ 450 ರನ್‌ಗಳ ಅಂಕವನ್ನು ಮುಟ್ಟಿದ್ದು ಅಥವಾ ದಾಟಿದ್ದು ಇದೇ ಮೊದಲು. ಇದಕ್ಕೂ ಮುನ್ನ ಮೂರನೇ ದಿನ ಗರಿಷ್ಠ ರನ್ ಗಳಿಸಿದ ದಾಖಲೆ 418 ರನ್ ಆಗಿತ್ತು. ಇದು 2013 ರಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊಹಾಲಿ ಟೆಸ್ಟ್ ಪಂದ್ಯದಲ್ಲಿ ಕಂಡುಬಂದಿತ್ತು.


ಇದರ ಜೊತೆಗೆ ಮತ್ತೊಂದು ದಾಖಲೆಯೂ ಸೇರಿಕೊಂಡಿದೆ. ಈ ಪಂದ್ಯದ ಮೂರನೇ ದಿನದಂದು ಗಳಿಸಿದ ರನ್ಗಳು ಭಾರತದಲ್ಲಿ ಟೆಸ್ಟ್ ಪಂದ್ಯದ ಯಾವುದೇ ದಿನದಲ್ಲಿ ಗಳಿಸಿದ ಎರಡನೇ ಅತಿ ಹೆಚ್ಚು ರನ್ಗಳ ದಾಖಲೆಯಾಗಿದೆ. ಭಾರತದಲ್ಲಿ ಒಂದೇ ಟೆಸ್ಟ್ ಪಂದ್ಯದಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು 2009 ರಲ್ಲಿ ಮಾಡಲಾಗಿತ್ತು. ಅದು ಇಂದಿಗೂ ಹಾಗೇ ಉಳಿದಿದೆ. ಬ್ರಬೋರ್ನ್‌ನಲ್ಲಿ ನಡೆದ ಭಾರತ ಮತ್ತು ಶ್ರೀಲಂಕಾ ನಡುವಿನ ಪಂದ್ಯದ ಎರಡನೇ ದಿನದಂದು ಈ ರನ್‌ಗಳನ್ನು ಗಳಿಸಲಾಯಿತು.


ಭಾರತದಲ್ಲಿ ಅತಿ ಹೆಚ್ಚು ರನ್
470 - ಭಾರತ ವಿರುದ್ಧ ಶ್ರೀಲಂಕಾ, ಬ್ರಬೋರ್ನ್, 2009 (2ನೇ ದಿನ)
453 - ಭಾರತ ವಿರುದ್ಧ ನ್ಯೂಜಿಲೆಂಡ್, ಬೆಂಗಳೂರು, 2024 (3ನೇ ದಿನ-ಇಂದು)
437 - ಭಾರತ ವಿರುದ್ಧ ಬಾಂಗ್ಲಾದೇಶ, ಕಾನ್ಪುರ್, 2024 (ದಿನ 4)
418 - ಭಾರತ ವಿರುದ್ಧ ಆಸ್ಟ್ರೇಲಿಯಾ, ಮೊಹಾಲಿ, 2013 (3ನೇ ದಿನ)
417 - ಭಾರತ ವಿರುದ್ಧ ಶ್ರೀಲಂಕಾ, ಕಾನ್ಪುರ, 2009 (1ನೇ ದಿನ)
407 - ಭಾರತ ವಿರುದ್ಧ ಬಾಂಗ್ಲಾದೇಶ, ಇಂದೋರ್, 2019 (2ನೇ ದಿನ)


ಇದನ್ನೂ ಓದಿ: ರೈಲ್ವೆ ಜಾರಿ ಮಾಡಿದೆ ಹೊಸ ಟಿಕೆಟ್ ಬುಕಿಂಗ್ ಪದ್ಧತಿ !ರೈಲು ಹೊರಡುವ ಕೆಲವೇ ನಿಮಿಷಗಳ ಮುನ್ನ ಟಿಕೆಟ್ ಮಾಡಿದರೂ ಸಿಗುವುದು ಕನ್ಫರ್ಮ್ ಟಿಕೆಟ್!ತತ್ಕಾಲ್ ಗಿಂತ ಅಗ್ಗ ಈ ಟಿಕೆಟ್


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ