ನವದೆಹಲಿ: ಬಲಿಷ್ಠ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 14 ರನ್‍ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು 2ನೇ ಕ್ವಾಲಿಫೈಯರ್ ಪ್ರವೇಶಿಸಿದೆ. ಇಂದು ಅಹಮದಾಬಾದ್‍ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಆರ್‌ಸಿಬಿ ಫೈನಲ್ ಫೈಟ್ ನಡೆಸಲಿದೆ. ಲಕ್ನೋ ವಿರುದ್ಧದ ಗೆಲುವಿನಲ್ಲಿ ಯುವ ಆಟಗಾರ ರಜತ್ ಪಾಟಿದಾರ್ ಪ್ರಮುಖ ಪಾತ್ರ ವಹಿಸಿದ್ದರು.


COMMERCIAL BREAK
SCROLL TO CONTINUE READING

ಲಕ್ನೋ ಬೌಲರ್ ಗಳನ್ನು ಮನಬಂದಂತೆ ದಂಡಿಸಿದ ರಜತ್ ಪಾಟಿದಾರ್ ಭರ್ಜರಿ ಶತಕ ಭಾರಿಸುವ ಮೂಲಕ ಸೆನ್ಸೇಷನಲ್ ಬ್ಯಾಟರ್ ಎನಿಸಿಕೊಂಡರು. ತಮಗೆ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡ ರಜತ್ 54 ಎಸೆತಳಲ್ಲಿ 7 ಸಿಕ್ಸರ್, 12 ಬೌಂಡರಿ ಇದ್ದ ಅಜೇಯ 112 ರನ್ ಗಳಿಸಿ ಮಿಂಚಿದರು. ಅವರ ಸ್ಫೋಟಕ ಆಟದ ನೆರವಿನಿಂದ ಲಕ್ನೋ ವಿರುದ್ಧ ಆರ್‌ಸಿಬಿ ಗೆಲುವು ಸಾಧಿಸಲು ಸಾಧ್ಯವಾಯಿತು.


RR vs RCB, IPL 2022: ‘ರಾಯಲ್’ ಕದನದಲ್ಲಿ ಯಾರಿಗೆ ಫೈನಲ್ ಟಿಕೆಟ್..?


ಲಕ್ನೋ ವಿರುದ್ಧ ಗೆಲುವು ಸಾಧಿಸಿದ ಬಳಿಕ ರಜತ್ ಪಾಟಿದಾರ್ ಆಟದ ಬಗ್ಗೆ ಹಿರಿಯ ಕ್ರಿಕೆಟ್ ಆಟಗಾರರಿಂದ ಮೆಚ್ಚುಗೆಯ ಮಹಾಪೂರವೇ ಹರಿದುಬಂದಿತು. ರಜತ್ ಸಿಕ್ಸರ್ ಸಿಡಿಸುವ ಮೂಲಕ ಶತಕ ಭಾರಿಸಿದಾಗ ಡಗೌಟ್‍ನಲ್ಲಿ ಕುಳಿತಿದ್ದ ವಿರಾಟ್ ಕೊಹ್ಲಿ ಎದ್ದು ನಿಂತು ಸಂಭ್ರಮಿಸಿದರು. ತಾವೇ ಶತಕ ಭಾರಿಸಿದ ರೀತಿ ಕಿಂಗ್ ಕೊಹ್ಲಿ ಸಂಭ್ರಮ ಪಟ್ಟಿದ್ದು ಕ್ರಿಕೆಟ್ ಪ್ರೇಮಿಗಳಲ್ಲಿ ಅವರ ಬಗೆಗಿನ ಗೌರವ ಮತ್ತಷ್ಟು ಹೆಚ್ಚಾಗುವಂತೆ ಮಾಡಿತು. ಇದಷ್ಟೇ ಅಲ್ಲದೆ ಪಂದ್ಯ ಮುಗಿದ ಬಳಿಕ ರಜತ್ ಸಾಧನೆಯನ್ನು ಕೊಹ್ಲಿ ಮನಸಾರೆ ಕೊಂಡಾಡಿದರು. 'ಅದ್ಭುತ ಇನ್ನಿಂಗ್ಸ್, ಅದ್ಭುತ ಆಟ'ವೆಂದು ರಜತ್ ಅವರನ್ನು ಕೊಹ್ಲಿ ಅಭಿನಂದಿಸಿದರು.


ತಮ್ಮ ಆಟಕ್ಕೆ ಶಹಬ್ಬಾಶ್‌ ಹೇಳಿದ ವಿರಾಟ್ ಕೊಹ್ಲಿಗೆ ರಜತ್ ಪಾಟಿದಾರ್ ವಿಶೇಷ ಥ್ಯಾಂಕ್ಸ್ ಹೇಳಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ‘ನನ್ನ ಮೇಲೆ ನಂಬಿಕೆ ಇರಿಸಿದ್ದಕ್ಕಾಗಿ ನಿಮಗೆ ಧನ್ಯವಾದಗಳು’ ಎಂದು ಕೊಹ್ಲಿಗೆ ಧನ್ಯವಾದ ಸಲ್ಲಿಸಿದ್ದಾರೆ. ವಿರಾಟ್ ಕೊಹ್ಲಿಯನ್ನು ಟ್ಯಾಗ್ ಮಾಡಿ ಅವರೊಂದಿಗಿರುವ ಫೋಟೋವನ್ನು ರಜತ್ ಹಂಚಿಕೊಂಡಿದ್ದಾರೆ.


ಇದನ್ನೂ ಓದಿ: RCB vs RR ಫೈನಲ್‌ ಮ್ಯಾಚ್ ಬಗ್ಗೆ ಆಘಾತಕಾರಿ ಹೇಳಿಕೆ ನೀಡಿದ ರವಿ ಶಾಸ್ತ್ರಿ


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.