39 ಸಿಕ್ಸರ್ ಮತ್ತು 14 ಬೌಂಡರಿ ಮೂಲಕ ಟಿ20 ಕ್ರಿಕೆಟ್‌ನಲ್ಲಿ ತ್ರಿಶತಕ ಬಾರಿಸಿದ ಬ್ಯಾಟ್ಸ್‌ಮನ್!ಬೌಲರ್ ಗಳಿಗೆ ಸಿಂಹ ಸ್ವಪ್ನವಾದ ದಾಂಡಿಗ
T20 ಕ್ರಿಕೆಟ್‌ನಲ್ಲಿ ತ್ರಿಶತಕ ಬಾರಿಸುವುದನ್ನು ಯೋಚಿಸುವುದು ಕೂಡಾ ಸಾಧ್ಯವಾಗುವುದಿಲ್ಲ. ಆದರೆ ಈ 20-20 ಓವರ್‌ಗಳ ಸ್ವರೂಪದಲ್ಲಿ, ಅಸಾಧ್ಯವನ್ನು ಸಾಧ್ಯ ಮಾಡಿ ತೋರಿಸಿ ದಾಖಲೆ ಬರೆಯಲಾಗಿದೆ.
Unique Cricket Records : ಕ್ರಿಕೆಟ್ ನಲ್ಲಿ ಯಾವತ್ತೂ ಹೀಗೆಯೇ ನಡೆಯುತ್ತದೆ ಎಂದು ಊಹಿಸುವುದು ಬಹಳ ಕಷ್ಟ. ಕ್ರಿಕೆಟ್‌ನಲ್ಲಿ ಯಾವ ಕ್ಷಣದಲ್ಲಿ ಏನು ಬೇಕಾದರೂ ಆಗಬಹುದು. T20 ಕ್ರಿಕೆಟ್‌ನಲ್ಲಿ ತ್ರಿಶತಕ ಬಾರಿಸುವುದನ್ನು ಯೋಚಿಸುವುದು ಕೂಡಾ ಸಾಧ್ಯವಾಗುವುದಿಲ್ಲ. ಆದರೆ ಈ 20-20 ಓವರ್‌ಗಳ ಸ್ವರೂಪದಲ್ಲಿ, ಅಸಾಧ್ಯವನ್ನು ಸಾಧ್ಯ ಮಾಡಿ ತೋರಿಸಿ ದಾಖಲೆ ಬರೆಯಲಾಗಿದೆ.
T20 ಕ್ರಿಕೆಟ್‌ನಲ್ಲಿ ತ್ರಿಶತಕ ಬಾರಿಸಿರುವುದು ಭಾರತೀಯನೇ. ಭಾರತೀಯ ಬ್ಯಾಟ್ಸ್‌ಮನ್ ಮೋಹಿತ್ ಅಹ್ಲಾವತ್ ಫೆಬ್ರವರಿ 7, 2017 ರಂದು ದೆಹಲಿಯಲ್ಲಿ T20 ಕ್ರಿಕೆಟ್‌ನಲ್ಲಿ ತ್ರಿಶತಕ ಗಳಿಸಿದರು. ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಮೋಹಿತ್ ಅಹ್ಲಾವತ್ 39 ಸಿಕ್ಸರ್ ಮತ್ತು 14 ಬೌಂಡರಿಗಳನ್ನು ಬಾರಿಸಿ ಎದುರಾಳಿ ತಂಡದ ಬೌಲರ್‌ಗಳ ಬೆವರಿಳಿಸಿ ಬಿಟ್ಟಿದ್ದರು. ಫೆಬ್ರವರಿ 7, 2017 ರಂದು, ದೆಹಲಿಯಲ್ಲಿ ಮಾವಿ XI ಮತ್ತು ಫ್ರೆಂಡ್ಸ್ XI ನಡುವೆ ಸ್ಥಳೀಯ ಕ್ರಿಕೆಟ್ ಪಂದ್ಯಾವಳಿಯ ಪಂದ್ಯವನ್ನು ಆಡಲಾಯಿತು. ಈ ಪಂದ್ಯದಲ್ಲಿ ಮಾವಿ ಇಲೆವೆನ್ ಪರ ಆಡಿದ ದೆಹಲಿ ಬ್ಯಾಟ್ಸ್‌ಮನ್ ಮೋಹಿತ್ ಅಹ್ಲಾವತ್ ಫ್ರೆಂಡ್ಸ್ ಇಲೆವೆನ್ ವಿರುದ್ಧ 72 ಎಸೆತಗಳಲ್ಲಿ 300 ರನ್ ಗಳಿಸಿದರು. ಮೋಹಿತ್ ಅಹ್ಲಾವತ್ ದೆಹಲಿ ಪರ ರಣಜಿ ಪಂದ್ಯಗಳನ್ನೂ ಆಡಿದ್ದಾರೆ. ರಿಷಬ್ ಪಂತ್‌ಗಿಂತ ಮೊದಲು ದೆಹಲಿ ಪರ ರಣಜಿ ಆಡುವ ಅವಕಾಶ ಪಡೆದಿದ್ದರು.
ಇದನ್ನೂ ಓದಿ : ದುಃಖದಲ್ಲಿ ಅಭಿಮಾನಿಗಳು.. ಕ್ರಿಕೆಟ್ ಲೋಕದಲ್ಲಿ ಶೋಕದ ಅಲೆ.. ಭಾರತ-ಆಸ್ಟ್ರೇಲಿಯಾ ಸರಣಿ ನಡುವೆ ಈ ಮಹಾನ್ ಬ್ಯಾಟ್ಸ್‌ಮನ್ ವಿಧಿವಶ
39 ಸಿಕ್ಸರ್, 14 ಬೌಂಡರಿ :
ಈ ಪಂದ್ಯದಲ್ಲಿ ಮೋಹಿತ್ ಅಹ್ಲಾವತ್ ಫ್ರೆಂಡ್ಸ್ ಇಲೆವೆನ್ ಬೌಲರ್‌ಗಳನ್ನು ಬಗ್ಗು ಬಡಿದಿದ್ದಾರೆ. 39 ಸಿಕ್ಸರ್ ಮತ್ತು 14 ಬೌಂಡರಿಗಳನ್ನು ಬಾರಿಸುವ ಮೂಲಕ ಸಿಂಹ ಸ್ವಪ್ನವಾಗಿ ಕಾಡಿದ್ದರು. 21ನೇ ವಯಸ್ಸಿನಲ್ಲಿ ಮೋಹಿತ್ ಅಹ್ಲಾವತ್ ಟಿ20 ಕ್ರಿಕೆಟ್‌ನಲ್ಲಿ ತ್ರಿಶತಕ ಬಾರಿಸಿ ಇತಿಹಾಸ ನಿರ್ಮಿಸಿದ್ದರು. ಈ ಪಂದ್ಯದಲ್ಲಿ ಮೋಹಿತ್ ಅಹ್ಲಾವತ್ ಸಿಕ್ಸರ್ ನೊಂದಿಗೆ 234 ರನ್ ಗಳಿಸಿದ್ದು ಕುತೂಹಲ ಮೂಡಿಸಿದೆ.ಅಲ್ಲದೆ, 56 ರನ್ ಗಳನ್ನು ಬೌಂಡರಿಗಳಿಂದ ಗಳಿಸಿದರು. ಈ ಪಂದ್ಯದಲ್ಲಿ ಮೋಹಿತ್ ಅಹ್ಲಾವತ್ ಮಾವಿ ಇಲೆವೆನ್‌ಗೆ ಆರಂಭಿಕರಾಗಿ ಬಂದರು. ಮೋಹಿತ್ ಅಹ್ಲಾವತ್ ಅವರ ಈ ಇನ್ನಿಂಗ್ಸ್ ಆಧಾರದ ಮೇಲೆ ಮಾವಿ ಇಲೆವೆನ್ 20 ಓವರ್‌ಗಳಲ್ಲಿ 416 ರನ್ ಗಳಿಸಿತು. ಈ ಪಂದ್ಯದಲ್ಲಿ ಫ್ರೆಂಡ್ಸ್ ಇಲೆವೆನ್ 216 ರನ್‌ಗಳಿಂದ ಸೋಲನುಭವಿಸಬೇಕಾಯಿತು.
ಮೋಹಿತ್ ಅವರ ತಂದೆ ಪವನ್ ಅಹ್ಲಾವತ್ ಕೂಡ ಕ್ರಿಕೆಟ್ ಆಡಿದ್ದಾರೆ, ಆದರೆ ಆರ್ಥಿಕ ಅಡಚಣೆಯಿಂದಾಗಿ ಅವರು ಕ್ರಿಕೆಟ್ ಬಿಟ್ಟು ಟೆಂಪೋ ಓಡಿಸಬೇಕಾಯಿತು. ಮೋಹಿತ್ ಅಹ್ಲಾವತ್ ಅವರು ಲಾಲ್ ಬಹದ್ದೂರ್ ಶಾಸ್ತ್ರಿ ಕ್ರಿಕೆಟ್ ಅಕಾಡೆಮಿಯಿಂದ ತರಬೇತಿ ಪಡೆದಿದ್ದಾರೆ. ಗೌತಮ್ ಗಂಭೀರ್ ಮತ್ತು ಅಮಿತ್ ಮಿಶ್ರಾ ಅವರಂತಹ ದಿಗ್ಗಜ ಕ್ರಿಕೆಟಿಗರು ಕೂಡಾ ಇದೇ ಅಕಾಡೆಮಿಯಿಂದ ತರಬೇತಿ ಪಡೆದವರು. ಮೋಹಿತ್ ಅಹ್ಲಾವತ್ ಅವರ ವಯಸ್ಸು ಈಗ 28 ವರ್ಷಗಳಿಗಿಂತ ಹೆಚ್ಚು.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಮೋಹಿತ್ ಅಹ್ಲಾವತ್ ದೆಹಲಿ ಮತ್ತು ಸರ್ವಿಸಸ್ ಪರ ದೇಶೀಯ ಕ್ರಿಕೆಟ್ ಆಡುತ್ತಾರೆ. ಮೋಹಿತ್ ಅಹ್ಲಾವತ್ 11 ಪ್ರಥಮ ದರ್ಜೆ ಪಂದ್ಯಗಳಲ್ಲಿ 2 ಅರ್ಧಶತಕ ಸೇರಿದಂತೆ 236 ರನ್ ಗಳಿಸಿದ್ದಾರೆ.ಮೋಹಿತ್ ಅಹ್ಲಾವತ್ 24 ಲಿಸ್ಟ್-ಎ ಪಂದ್ಯಗಳಲ್ಲಿ 554 ರನ್ ಗಳಿಸಿದ್ದಾರೆ. ಮೋಹಿತ್ ಅಹ್ಲಾವತ್ ಲಿಸ್ಟ್-ಎಯಲ್ಲಿ 2 ಅರ್ಧಶತಕಗಳನ್ನು ಗಳಿಸಿದ್ದಾರೆ.ಮೋಹಿತ್ ಅಹ್ಲಾವತ್ ಅವರು ದೇಶೀಯ ಕ್ರಿಕೆಟ್‌ನಲ್ಲಿ ತಮ್ಮ ಕೊನೆಯ ಪಂದ್ಯವನ್ನು 3 ಡಿಸೆಂಬರ್ 2023 ರಂದು ವಿಜಯ್ ಹಜಾರೆ ಟ್ರೋಫಿ ಪಂದ್ಯಾವಳಿಯ ಸಂದರ್ಭದಲ್ಲಿ ಜಾರ್ಖಂಡ್ ವಿರುದ್ಧ ಆಡಿದರು.ಈ ಪಂದ್ಯದಲ್ಲಿ ಮೋಹಿತ್ ಅಹ್ಲಾವತ್ 24 ರನ್ ಗಳಿಸಿ ಔಟಾದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ