Player in IPL history to get bids from all franchise: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ವಿಶ್ವದ ಅತಿದೊಡ್ಡ ಕ್ರಿಕೆಟ್ ಲೀಗ್ಗಳಲ್ಲಿ ಒಂದಾಗಿದೆ. ಸೌದಿ ಅರೇಬಿಯಾದ ಜೆಡ್ಡಾದಲ್ಲಿ ಎರಡು ದಿನಗಳ ಕಾಲ (ನವೆಂಬರ್ 24 ಮತ್ತು 25) ನಡೆದ IPL 2025 ಮೆಗಾ ಹರಾಜು ಹಲವಾರು ಆಶ್ಚರ್ಯಗಳ ಜೊತೆಗೆ ಕೆಲವು ಅತ್ಯಧಿಕ ಬಿಡ್ಗಳನ್ನು ಕೂಡ ಕಂಡಿತ್ತು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ವಿಶ್ವದ ಅತಿದೊಡ್ಡ ಕ್ರಿಕೆಟ್ ಲೀಗ್ಗಳಲ್ಲಿ ಒಂದಾಗಿದೆ. ಸೌದಿ ಅರೇಬಿಯಾದ ಜೆಡ್ಡಾದಲ್ಲಿ ಎರಡು ದಿನಗಳ ಕಾಲ (ನವೆಂಬರ್ 24 ಮತ್ತು 25) ನಡೆದ IPL 2025 ಮೆಗಾ ಹರಾಜು ಹಲವಾರು ಆಶ್ಚರ್ಯಗಳ ಜೊತೆಗೆ ಕೆಲವು ಅತ್ಯಧಿಕ ಬಿಡ್ಗಳನ್ನು ಕೂಡ ಕಂಡಿತ್ತು.
ಈ ವರ್ಷ, ರಿಷಬ್ ಪಂತ್ ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಮಾತ್ರವಲ್ಲದೆ ಪಂದ್ಯಾವಳಿಯ ಇತಿಹಾಸದಲ್ಲಿ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡಿದ್ದಾರೆ. ತೀವ್ರ ಬಿಡ್ಡಿಂಗ್ ವಾರ್ ಬಳಿಕ 27ರ ಹರೆಯದ ಲಕ್ನೋ ಸೂಪರ್ ಜೈಂಟ್ಸ್ 27 ಕೋಟಿ ರೂ.ಗೆ ಸಹಿ ಹಾಕಿತು.
ಇವೆಲ್ಲದರ ಹೊರತಾಗಿ, ಹಲವಾರು ವಿಭಿನ್ನ ಫ್ರಾಂಚೈಸಿಗಳಿಂದ ಬಿಡ್ಗಳನ್ನು ಆಕರ್ಷಿಸಿದ ಕೆಲವು ಆಟಗಾರರು ಇದ್ದಾರೆ. ಅದರಲ್ಲೂ ಎಲ್ಲಾ ತಂಡಗಳು ಓರ್ವ ಆಟಗಾರನಿಗಾಗಿ ಬಿಡ್ ಮಾಡಿದ್ದು ನಿಮಗೆ ತಿಳಿದಿದೆಯೇ? ಆತ ಯಾರು? ಆತನನ್ನು ಕೊನೆಗೂ ಖರೀದಿಸಿದ ತಂಡ ಯಾವುದು? ಎಂಬ ಬಗ್ಗೆ ಈ ವರದಿಯಲ್ಲಿ ತಿಳಿಯೋಣ.
ಇದುವರೆಗೆ ಎಲ್ಲಾ ಐಪಿಎಲ್ ಫ್ರಾಂಚೈಸಿಗಳಿಂದ ಬಿಡ್ಗಳನ್ನು ಆಕರ್ಷಿಸಿದ ಏಕೈಕ ಆಟಗಾರ ಎಂಎಸ್ ಧೋನಿ. ಮೊದಲ ಐಪಿಎಲ್ ಹರಾಜಿನ ಹರಾಜುದಾರರಾಗಿದ್ದ ರಿಚರ್ಡ್ ಮ್ಯಾಡ್ಲಿ ಇತ್ತೀಚೆಗೆ ಪ್ರತಿ ಫ್ರಾಂಚೈಸಿ ಹರಾಜು ಹಾಕುತ್ತಿರುವ ಆಟಗಾರ ಧೋನಿ ಎಂದು ಹೇಳಿದ್ದಾರೆ.
"ನನಗೆ ನೆನಪಿಲ್ಲ. ಆದರೆ ಸಹಜವಾಗಿಯೇ ಹಲವು ಫ್ರಾಂಚೈಸಿಗಳಿಂದ ಆಸಕ್ತಿ ಇತ್ತು. ಆರಂಭದಿಂದಲೇ ಅವರನ್ನು ಖರೀದಿಸಲು CSK ತೀರ್ಮಾನಿಸಿತ್ತು" ಎಂದು ಹೇಳಿದರು.
ಬಿಡ್ಡಿಂಗ್ ಬೆಲೆ 7 ಕೋಟಿ ತಲುಪಿದಾಗ, CSK ಮತ್ತು ಮುಂಬೈ ಇಂಡಿಯನ್ಸ್ ಹೊರತುಪಡಿಸಿ ಹೆಚ್ಚಿನ ಫ್ರಾಂಚೈಸಿಗಳು ಹಿಂದೇಟು ಹಾಕಿದವು. ಕೊನೆಯಲ್ಲಿ, ಎರಡೂ ತಂಡಗಳು 12 ಕೋಟಿಗೆ ಬಂದು ನಿಂತಿತು. ಆದರೆ ಒಂದು ಹಂತದ ನಂತರ ಮುಂಬೈ ಇಂಡಿಯನ್ಸ್ ಬಿಟ್ಟುಕೊಟ್ಟಿತು. ಆ ಬಳಿಕ CSK ಪಾಲಾದರು. ಅಂದಿನಿಂದ ಧೋನಿ ಸಿಎಸ್ಕೆ ಪರ ಆಡಿದ್ದಾರೆ. ಫ್ರಾಂಚೈಸಿ ಐದು ಬಾರಿ ಪ್ರಶಸ್ತಿ ಗೆಲ್ಲಲು ಸಹಾಯ ಮಾಡಿದ್ದಾರೆ.
2008ರಲ್ಲಿ ಐಪಿಎಲ್ಗೆ ಪಾದಾರ್ಪಣೆ ಮಾಡಿದ ಧೋನಿ 264 ಪಂದ್ಯಗಳನ್ನು ಆಡಿದ್ದಾರೆ. ಐಪಿಎಲ್ 2024 ರ ಋತುವಿನಲ್ಲಿ, 14 ಪಂದ್ಯಗಳನ್ನು ಆಡಿರುವ ಅವರು, 161 ರನ್ ಗಳಿಸಿದ್ದರು.