Team India: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC Final) ಫೈನಲ್‌ನ ಲ್ಲಿ ಟೀಂ ಇಂಡಿಯಾದ ಹೀನಾಯ ಸೋಲಿನೊಂದಿಗೆ ಭಾರತೀಯ ಕ್ರಿಕೆಟಿಗನ ವೃತ್ತಿಜೀವನ ಬಹುತೇಕ ಅಂತ್ಯಗೊಂಡಿದ್ದು, ಇದೀಗ ಈ ಆಟಗಾರನಿಗೆ ಮತ್ತೆ ಟೀಮ್ ಇಂಡಿಯಾದಲ್ಲಿ ಅವಕಾಶ ಸಿಗುವುದು ಕಷ್ಟ ಎಂಬಂತಾಗಿದೆ. ಭಾನುವಾರ ನಡೆದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ನ (ಡಬ್ಲ್ಯುಟಿಸಿ ಫೈನಲ್) ಫೈನಲ್‌ ನಲ್ಲಿ ಆಸ್ಟ್ರೇಲಿಯ ತಂಡವು ಟೀಮ್ ಇಂಡಿಯಾವನ್ನು 209 ರನ್‌ ಗಳಿಂದ ಸೋಲಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯೂಟಿಸಿ ಫೈನಲ್) ಅನ್ನು ಮೊದಲ ಬಾರಿಗೆ ವಶಪಡಿಸಿಕೊಂಡಿದೆ. 2013ರಿಂದ ಇಲ್ಲಿಯವರೆಗೆ ಟೀಂ ಇಂಡಿಯಾ ಐಸಿಸಿ ಟ್ರೋಫಿ ಗೆದ್ದಿಲ್ಲ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: WTC Final 2023: ಭಾರತಕ್ಕೆ 209 ರನ್ ಗಳ ಅಂತರದ ಸೋಲು, ವಿಶ್ವ ಟೆಸ್ಟ್ ಚಾಂಪಿಯನ್ ಪಟ್ಟ ಅಲಂಕರಿಸಿದ ಆಸೀಸ್ ಪಡೆ


ಇದೀಗ ಟೀಂ ಇಂಡಿಯಾ ಬ್ಯಾಟ್ಸ್ ಮನ್ ವೃತ್ತಿ ಜೀವನ ಅಂತ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಟೀಂ ಇಂಡಿಯಾ ಬ್ಯಾಟ್ಸ್ ಮನ್ ಚೇತೇಶ್ವರ ಪೂಜಾರ ಅವರ ರಕ್ಷಣಾತ್ಮಕ ಬ್ಯಾಟಿಂಗ್ ಬಗ್ಗೆ ಪ್ರಶ್ನೆಗಳು ಎದ್ದಿವೆ. ಕಳೆದ 10 ಟೆಸ್ಟ್ ಇನ್ನಿಂಗ್ಸ್‌ ಗಳಲ್ಲಿ ಚೇತೇಶ್ವರ ಪೂಜಾರ ಬ್ಯಾಟ್‌ ನಲ್ಲಿ ಒಮ್ಮೆಯೂ 59 ರನ್‌ಗಳಿಗಿಂತ ಹೆಚ್ಚು ರನ್ ಗಳಿಸಿಲ್ಲ, ಇದರಿಂದಾಗಿ ಟೀಂ ಇಂಡಿಯಾ ಸಂಕಷ್ಟವನ್ನು ಎದುರಿಸಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ನ (WTC ಫೈನಲ್) ಫೈನಲ್‌ ನಲ್ಲಿ, ಚೇತೇಶ್ವರ ಪೂಜಾರ ಮೊದಲ ಇನ್ನಿಂಗ್ಸ್‌ ನಲ್ಲಿ 14 ರನ್ ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 27 ರನ್ ಗಳಿಸಿ ಔಟಾದರು.


ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ನ (ಡಬ್ಲ್ಯುಟಿಸಿ ಫೈನಲ್) ಫೈನಲ್‌ ನಲ್ಲಿ, ಚೇತೇಶ್ವರ ಪೂಜಾರ ಎರಡನೇ ಇನ್ನಿಂಗ್ಸ್‌ ನಲ್ಲಿ 27 ರನ್‌ ಗಳಿಗೆ ಔಟಾದ ನಂತರ ಅಲ್ಲಿಯೇ ಕುಳಿತಿದ್ದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರನ್ನು ದಿಟ್ಟಿಸಿ ನೋಡಿದರು. ಕಳಪೆ ಪ್ರದರ್ಶನದ ನಂತರ, ಈಗ ಬ್ಯಾಟ್ಸ್‌ಮನ್‌ನ ಮೇಲೆ ಈ ಬಲವಾದ ಕ್ರಮವನ್ನು ತೆಗೆದುಕೊಳ್ಳಬಹುದು ಎಂಬುದನ್ನು ಆ ನೋಟ ಸೂಚಿಸಿತ್ತು. ಈ ಪಂದ್ಯ ಚೇತೇಶ್ವರ ಪೂಜಾರ ಅವರ ವೃತ್ತಿ ಜೀವನದ ಕೊನೆಯ ಪಂದ್ಯವಾಗುವ ಸಾಧ್ಯತೆಯೂ ಇದೆ.


ಚೇತೇಶ್ವರ ಪೂಜಾರ ಕಳೆದ ಹಲವು ವರ್ಷಗಳಿಂದ ಕೌಂಟಿ ಕ್ರಿಕೆಟ್ ಆಡುವ ಮೂಲಕ ತನ್ನನ್ನು ತಾನು ಚುರುಕುಗೊಳಿಸಿದ್ದಾರೆ, ಆದರೆ ಈ ಆಟಗಾರನು ಕೊನೆಯ ಕ್ಷಣದಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ನ ಅಂತಿಮ ಪಂದ್ಯದಲ್ಲಿ ಐಸಿಸಿ ಟ್ರೋಫಿ ಗೆಲ್ಲುವ ಭಾರತದ ಆಸೆಯನ್ನು ಹಾಳುಮಾಡಿದ್ದಾನೆ.


ಚೇತೇಶ್ವರ ಪೂಜಾರ ಅವರ ಈ ಕಳಪೆ ಪ್ರದರ್ಶನದ ನಂತರ, ಅವರ ವೃತ್ತಿಜೀವನದ ಅಂತಿಮ ದಿನಗಳು ಪ್ರಾರಂಭವಾಗಿದೆ ಎಂದು ಹೇಳಲಾಗುತ್ತಿದೆ. ಆಸ್ಟ್ರೇಲಿಯ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ ನಲ್ಲಿ (ಡಬ್ಲ್ಯೂಟಿಸಿ ಫೈನಲ್) ಸೋಲು ಕಂಡ ಭಾರತದ ಬಲ ಅಗ್ರ ಕ್ರಮಾಂಕವಾಗಿತ್ತು. ಆದರೆ ಅದೇ ಕ್ರಮಾಂಕದಲ್ಲಿ ವೈಫಲ್ಯತೆ ಕಂಡುಬಂದಿತ್ತು.


ಇದನ್ನೂ ಓದಿ: ವಿಶ್ವಕಪ್’ಗೂ ಮುನ್ನ Team Indiaಗೆ ಸಿಹಿಸುದ್ದಿ: 2 ವರ್ಷಗಳ ಬಳಿಕ ಗ್ರ್ಯಾಂಡ್ ಎಂಟ್ರಿ ಕೊಡ್ತಿದ್ದಾನೆ ಈ ಮಾರಕ ಬೌಲರ್!


ಇದೀಗ ಚೇತೇಶ್ವರ ಪೂಜಾರ ಮೂರನೇ ಸ್ಥಾನದ ಬಗ್ಗೆಯೂ ಪ್ರಶ್ನೆಗಳು ಎದ್ದಿವೆ. ಚೇತೇಶ್ವರ ಪೂಜಾರ ಕೊನೆಯ ಬಾರಿಗೆ 14 ಡಿಸೆಂಬರ್ 2022 ರಂದು ಬಾಂಗ್ಲಾದೇಶ ಪ್ರವಾಸದಲ್ಲಿ ಶತಕ ಗಳಿಸಿದ್ದರು. ನಂತರ ಚಿತ್ತಗಾಂಗ್‌ ನಲ್ಲಿಯೇ ಪೂಜಾರ 102 ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿದ್ದರು. ಆದರೆ ಈ ಇನ್ನಿಂಗ್ಸ್‌ ನಿಂದ ಅವರು ಒಂದೇ ಒಂದು ಶತಕವನ್ನು ಗಳಿಸಿಲ್ಲ. ಮೂರನೇ ಕ್ರಮಾಂಕದಲ್ಲಿ ಪೂಜಾರ ಬದಲಿಗೆ ಮಯಾಂಕ್ ಅಗರ್ವಾಲ್ ಉತ್ತಮ ಆಯ್ಕೆಯಾಗಬಲ್ಲರು ಎಂಬುದು ಈಗೆಲ್ಲರ ಮಾತಾಗಿದೆ. ಚೇತೇಶ್ವರ ಪೂಜಾರ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ ಇದುವರೆಗೆ 19 ಶತಕ ಮತ್ತು 34 ಅರ್ಧ ಶತಕಗಳನ್ನು ಗಳಿಸಿದ್ದಾರೆ. 103 ಟೆಸ್ಟ್‌ ಗಳಲ್ಲಿ 43.61 ಸರಾಸರಿಯಲ್ಲಿ 7,195 ರನ್ ಗಳಿಸಿದ್ದಾರೆ. ಅವರ ಅತ್ಯುತ್ತಮ ಸ್ಕೋರ್ 206 ಆಗಿದೆ. ಟೆಸ್ಟ್ ವೃತ್ತಿಜೀವನದಲ್ಲಿ 3 ದ್ವಿಶತಕಗಳನ್ನು ಗಳಿಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ