ವೃಷಭ ರಾಶಿಯಲ್ಲಿ ರೂಪುಗೊಂಡ ಬುಧಾದಿತ್ಯ ಯೋಗದಿಂದಾಗಿ ನಾಲ್ಕು ರಾಶಿಯವರ ಮುಂದಿನ ದಿನಗಳು ಶುಭಕರವಾಗಿರುತ್ತದೆ.
ಬೆಂಗಳೂರು : ವೈದಿಕ ಜ್ಯೋತಿಷ್ಯದ ಪ್ರಕಾರ, ಗ್ರಹಗಳ ರಾಜನಾದ ಸೂರ್ಯನು ಪ್ರಸ್ತುತ ವೃಷಭ ರಾಶಿಯಲ್ಲಿದ್ದಾನೆ. ಜೂನ್ 15, 2023 ರವರೆಗೆ ಈ ರಾಶಿಯಲ್ಲಿಯೇ ಸೂರ್ಯನ ಸಂಚಾರ. ಮತ್ತೊಂದೆಡೆ, ಜೂನ್ 7, 2023 ರಂದು, ಗ್ರಹಗಳ ರಾಜಕುಮಾರ ಬುಧ ಕೂಡಾ ತನ್ನ ರಾಶಿಯನ್ನು ಬದಲಾಯಿಸಿ ವೃಷಭ ರಾಶಿಯನ್ನು ಪ್ರವೇಶಿಸಿದ್ದಾನೆ. ಇದರಿಂದ ವೃಷಭ ರಾಶಿಯಲ್ಲಿ ಬುಧಾದಿತ್ಯ ರಾಜಯೋಗ ಉಂಟಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಜ್ಯೋತಿಷ್ಯದಲ್ಲಿ, ಬುಧಾದಿತ್ಯ ರಾಜಯೋಗವು ಯಶಸ್ಸು, ಗೌರವ, ಸಂಪತ್ತು ಮತ್ತು ಖ್ಯಾತಿಯನ್ನು ತರುತ್ತದೆ ಎಂದು ಹೇಳಲಾಗಿದೆ. ಸೂರ್ಯನು ವೃಷಭ ರಾಶಿಯಲ್ಲಿ ಇರುವವರೆಗೂ, ಈ ಬುಧಾದಿತ್ಯ ಯೋಗ ಇರುತ್ತದೆ. ಬುಧಾದಿತ್ಯ ಯೋಗ ಎಲ್ಲಾ ರಾಶಿಯವರಿಗೆ ಫಲಪ್ರದವಾಗದಿದ್ದರೂ, 4 ರಾಶಿಯವರ ಭಾಗ್ಯವನ್ನು ಮಾತ್ರ ಅತಿಯಾಗಿ ಬೆಳಗಲಿದೆ.
ವೃಷಭ ರಾಶಿಯಲ್ಲಿ ರೂಪುಗೊಂಡ ಬುಧಾದಿತ್ಯ ಯೋಗದಿಂದಾಗಿ ನಾಲ್ಕು ರಾಶಿಯವರ ಮುಂದಿನ ದಿನಗಳು ಶುಭಕರವಾಗಿರುತ್ತದೆ. ಈ ರಾಶಿಯವರು ವೃತ್ತಿ ಮತ್ತು ವ್ಯವಹಾರದಲ್ಲಿ ಬಹಳಷ್ಟು ಪ್ರಯೋಜನಗಳನ್ನು ಪಡೆಯುತ್ತಾರೆ. ಯಶಸ್ಸು, ಸಂಪತ್ತು ಮತ್ತು ಖ್ಯಾತಿ ಹುಡುಕಿಕೊಂಡು ಬರುತ್ತದೆ.
ವೃಷಭ ರಾಶಿ : ಸೂರ್ಯ ಮತ್ತು ಬುಧ ಸಂಕ್ರಮಣದಿಂದ ಬುಧಾದಿತ್ಯ ಯೋಗವು ವೃಷಭ ರಾಶಿಯವರ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಹುದ್ದೆ ಮತ್ತು ಜವಾಬ್ದಾರಿ ಹೆಚ್ಚಾಗಬಹುದು. ಯಶಸ್ಸು ಒಂದರ ಹಿಂದೆ ಒಂದರಂತೆ ಬರುತ್ತದೆ. ಬುದ್ಧಿವಂತ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ಲಾಭವಾಗುವುದು
ಮಿಥುನ ರಾಶಿ : ಬುಧನು ಮಿಥುನ ರಾಶಿಯ ಅಧಿಪತಿಯಾಗಿದ್ದು, ಬುಧಾದಿತ್ಯ ರಾಜಯೋಗವು ಈ ರಾಶಿಯವರಿಗೆ ಲಾಭವನ್ನು ನೀಡುತ್ತದೆ. ಈ ರಾಶಿಯವರು ವಿದೇಶದಿಂದ ಲಾಭ ಪಡೆಯುತ್ತಾರೆ. ಈ ಹೊತ್ತಿನಲ್ಲಿ ಎಲ್ಲಾ ಕೆಲಸಗಳಲ್ಲಿಯೂ ಲಾಭವೇ ಆಗುವುದು. ಹಾಗಾಗಿ ಯಾವುದೇ ಕೆಲಸ ಮಾಬೇಕಾದರೆ ಅಂಜಿಕೆ ಅಳುಕಿಲ್ಲದೆ ಆರಂಭಿಸಬಹುದು. ಯಾಕೆಂದರೆ ಈ ಸಮಯದಲ್ಲಿ ನಿಮಗೆ ಸೋಲುವ ಭಯ ಇರುವುದಿಲ್ಲ.
ಕರ್ಕಾಟಕ ರಾಶಿ : ಬುಧಾದಿತ್ಯ ಯೋಗವು ಕರ್ಕ ರಾಶಿಯವರಿಗೆ ಬಹಳಷ್ಟು ಪ್ರಯೋಜನಗಳನ್ನು ನೀಡುತ್ತದೆ. ಸೂರ್ಯ-ಬುಧ ಸಂಯೋಗದಿಂದ ಈ ರಾಶಿಯವರಿಗೆ ಸಂಪತ್ತಿನ ಯೋಗವನ್ನು ಉಂಟುಮಾಡುತ್ತದೆ. ಆದಾಯ ಹೆಚ್ಚಲಿದೆ. ಉದ್ಯೋಗದಲ್ಲಿ ಪ್ರಗತಿ ಕಂಡುಬರಲಿದೆ. ವ್ಯಾಪಾರದಲ್ಲಿ ಲಾಭ ಇರುತ್ತದೆ.
ಕುಂಭ ರಾಶಿ : ಬುಧಾದಿತ್ಯ ಯೋಗವು ಕುಂಭ ರಾಶಿಯವರಿಗೆ ಅನುಕೂಲಕರ ಫಲಿತಾಂಶಗಳನ್ನು ನೀಡುತ್ತದೆ. ಖಾಸಗಿ ವಲಯದಲ್ಲಿ ಕೆಲಸ ಮಾಡುವವರಿಗೆ ಅನುಕೂಲವಾಗಲಿದೆ. ವೃತ್ತಿಜೀವನದಲ್ಲಿ ಹೊಸ ಎತ್ತರವನ್ನು ಮುಟ್ಟುತ್ತಾರೆ. ಹೆಚ್ಚಿನ ಲಾಭಗಳನ್ನು ಪಡೆಯುತ್ತಾರೆ. ( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)