ರಾತ್ರಿ 10 ಪೆಗ್-ಬೆಳಿಗ್ಗೆ ಎದ್ದು ಶತಕ: ಸರಾಸರಿಯಲ್ಲಿ ಸಚಿನ್’ಗಿಂತಲೂ ಮುಂದಿದ್ದ ಈ ಕ್ರಿಕೆಟಿಗನ ವೃತ್ತಿಜೀವನ 23ಕ್ಕೆ ಅಂತ್ಯ!
Vinod Kambli: ವಿನೋದ್ ಕಾಂಬ್ಳಿ ಅವರ ಕ್ರಿಕೆಟ್’ಗಿಂತಲೂ ಹೆಚ್ಚು ವಿವಾದಗಳ ಬಗ್ಗೆ ಚರ್ಚೆಯಲ್ಲಿದ್ದಾರೆ. 16 ನೇ ವಯಸ್ಸಿನಲ್ಲಿ, ಹ್ಯಾರಿಸ್ ಶೀಲ್ಡ್ ಟ್ರೋಫಿಯಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರೊಂದಿಗೆ ಅಜೇಯ 664 ರನ್ ಜೊತೆಯಾಟವನ್ನು ಹಂಚಿಕೊಂಡ ನಂತರ ಕಾಂಬ್ಳಿ ರಾತ್ರೋರಾತ್ರಿ ಸ್ಟಾರ್ ಆದರು. 1993 ರಲ್ಲಿ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯದ ಮೂಲಕ ಸ್ಟಾರ್ ಎನಿಸಿಕೊಂಡಿದ್ದ ಕಾಂಬ್ಳಿಗೆ ಆ ಪಟ್ಟವನ್ನು ನಿಭಾಯಿಸಲು ಸಾಧ್ಯವಾಗಲಿಲ್ಲ.
Vinod Kambli: ಭಾರತದ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಕೆಲ ದಿನಗಳಿಂದ ಚರ್ಚೆಯಲ್ಲಿದ್ದಾರೆ. ಇತ್ತೀಚೆಗಷ್ಟೇ ಪತ್ನಿಯ ಮೇಲೆ ಹಲ್ಲೆ ನಡೆಸಿದ ಆರೋಪ ಕೇಳಿಬಂದಿತ್ತು. ಕುಡಿದ ಅಮಲಿನಲ್ಲಿ ಪತ್ನಿಯನ್ನು ನಿಂದಿಸಿ ಅಡುಗೆ ಮನೆಯಲ್ಲಿದ್ದ ಪ್ಯಾನ್’ನಿಂದ ಹೊಡೆದಿದ್ದಾರೆ ಎಂದು ಆರೋಪಿಸಲಾಗಿದೆ. ವಿನೋದ್ ಕಾಂಬ್ಳಿ ವಿರುದ್ಧದ ಪ್ರಕರಣವೂ ಪೊಲೀಸರಿಗೆ ತಲೆನೋವು ತಂದಿದೆ.
ವಿನೋದ್ ಕಾಂಬ್ಳಿ ಅವರ ಕ್ರಿಕೆಟ್’ಗಿಂತಲೂ ಹೆಚ್ಚು ವಿವಾದಗಳ ಬಗ್ಗೆ ಚರ್ಚೆಯಲ್ಲಿದ್ದಾರೆ. 16 ನೇ ವಯಸ್ಸಿನಲ್ಲಿ, ಹ್ಯಾರಿಸ್ ಶೀಲ್ಡ್ ಟ್ರೋಫಿಯಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರೊಂದಿಗೆ ಅಜೇಯ 664 ರನ್ ಜೊತೆಯಾಟವನ್ನು ಹಂಚಿಕೊಂಡ ನಂತರ ಕಾಂಬ್ಳಿ ರಾತ್ರೋರಾತ್ರಿ ಸ್ಟಾರ್ ಆದರು. 1993 ರಲ್ಲಿ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯದ ಮೂಲಕ ಸ್ಟಾರ್ ಎನಿಸಿಕೊಂಡಿದ್ದ ಕಾಂಬ್ಳಿಗೆ ಆ ಪಟ್ಟವನ್ನು ನಿಭಾಯಿಸಲು ಸಾಧ್ಯವಾಗಲಿಲ್ಲ.
ಇದನ್ನೂ ಓದಿ: ಇತಿಹಾಸ ಪ್ರಸಿದ್ದ ದೇವಸ್ಥಾನವೇ ಟಾರ್ಗೆಟ್: ಶನಿ ಮಹಾತ್ಮನ ಪೂಜೆಗೆ ಮಾಂಸದ ಹಾರ ತಂದ ಖದೀಮರು
ವಿವಾದಗಳು ಮತ್ತು ಕಳಪೆ ಪ್ರದರ್ಶನದಿಂದಾಗಿ, ಅವರ ವೃತ್ತಿಜೀವನವು ಹೆಚ್ಚು ಕಾಲ ಉಳಿಯಲು ಸಾಧ್ಯವಾಗಲಿಲ್ಲ. ವಿನೋದ್ ಕಾಂಬ್ಳಿ ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನು 1995 ರಲ್ಲಿ ಕೇವಲ 23 ನೇ ವಯಸ್ಸಿನಲ್ಲಿ ಆಡಿದ್ದರು. ಇದರ ನಂತರ ಅವರ ಟೆಸ್ಟ್ ವೃತ್ತಿಜೀವನ ಕೊನೆಗೊಂಡಿತು.
ಆದರೆ ವಿನೋದ್ ಕಾಂಬ್ಳಿ ಅವರ ODI ವೃತ್ತಿಜೀವನವು 1991 ರಲ್ಲಿ ಪ್ರಾರಂಭವಾಗಿ, 2000 ರಲ್ಲಿ ಕೊನೆಗೊಂಡಿತು. 1996 ರ ವಿಶ್ವಕಪ್ ನಂತರ ಹೊರಗುಳಿದ ನೋದ್ ಕಾಂಬ್ಳಿ ಒಂಬತ್ತು ಬಾರಿ ಪುನರಾಗಮನ ಮಾಡಿದ್ದರು. ಆದರೆ ಟೀಮ್ ಇಂಡಿಯಾದಲ್ಲಿ ಹೆಚ್ಚು ಕಾಲ ಉಳಿಯಲು ಸಾಧ್ಯವಾಗಲಿಲ್ಲ.
ಹ್ಯಾರಿಸ್ ಶೀಲ್ಡ್ ಟ್ರೋಫಿ ಪಂದ್ಯದಲ್ಲಿ ವಿನೋದ್ ಕಾಂಬ್ಳಿ 349 ರನ್ ಮತ್ತು ಸಚಿನ್ ತೆಂಡೂಲ್ಕರ್ 326 ರನ್ ಗಳಿಸಿದ್ದರು. ಈ ಪಂದ್ಯದಲ್ಲಿ ಕಾಂಬ್ಳಿ ಕೇವಲ 37 ರನ್ ನೀಡಿ 6 ವಿಕೆಟ್ ಪಡೆದಿದ್ದರು. ಹಲವಾರು ಮಾಧ್ಯಮಗಳ ವರದಿಗಳ ಪ್ರಕಾರ, ಸಚಿನ್ ಮತ್ತು ಕಾಂಬ್ಳಿ ಅವರ ಮಾರ್ಗದರ್ಶಕ ರಮಾಕಾಂತ್ ಅಚ್ರೇಕರ್, ಕಾಂಬ್ಳಿ ಅವರನ್ನು ತೆಂಡೂಲ್ಕರ್’ಗಿಂತ ಹೆಚ್ಚು ಪ್ರತಿಭಾವಂತ ಎಂದು ಪರಿಗಣಿಸಿದ್ದಾರೆ. ಆದರೆ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟ ನಂತರ ಅವರು ತಮ್ಮನ್ನು ನಿಭಾಯಿಸಲು ಸಾಧ್ಯವಾಗಲಿಲ್ಲ. ಅವರ ಕೆಟ್ಟ ಚಟ, ಮದ್ಯದ ಅಮಲು, ಪಾರ್ಟಿಗಳ ಮೇಲಿನ ಮೋಹ ಮತ್ತು ಕೆಟ್ಟ ನಡವಳಿಕೆಯಿಂದಾಗಿ ಅವರ ವೃತ್ತಿಜೀವನವು ಅಕಾಲಿಕವಾಗಿ ಕೊನೆಗೊಂಡಿತು ಎಂದು ಹೇಳಲಾಗುತ್ತದೆ.
ವಿನೋದ್ ಕಾಂಬ್ಳಿ ತಮ್ಮ ಅಂತರಾಷ್ಟ್ರೀಯ ವೃತ್ತಿಜೀವನವನ್ನು ಅಬ್ಬರದಿಂದ ಪ್ರಾರಂಭಿಸಿದರು. ಕಾಂಬ್ಳಿ ತಮ್ಮ ಮೊದಲ 7 ಟೆಸ್ಟ್ ಪಂದ್ಯಗಳಲ್ಲಿ 4 ಶತಕಗಳನ್ನು ಗಳಿಸಿದ್ದರು. ಮೂರು ಮತ್ತು ನಾಲ್ಕನೇ ಟೆಸ್ಟ್ ಪಂದ್ಯಗಳಲ್ಲಿ ಸತತ ಎರಡು ದ್ವಿಶತಕಗಳನ್ನು ಗಳಿಸಿದರು. ಕಾಂಬ್ಳಿ ಇಂಗ್ಲೆಂಡ್ ವಿರುದ್ಧ ವಾಂಖೆಡೆಯಲ್ಲಿ 224 ಮತ್ತು ಜಿಂಬಾಬ್ವೆ ವಿರುದ್ಧ 227 ರನ್ ಗಳಿಸಿದ್ದರು. ಇದರ ನಂತರ, ಅವರು ಶ್ರೀಲಂಕಾ ವಿರುದ್ಧ ಸತತ ಎರಡು ಶತಕಗಳನ್ನು ಗಳಿಸಿದರು.
10 ಟೆಸ್ಟ್ ಪಂದ್ಯಗಳಲ್ಲಿ ಕೇವಲ ಎರಡು ಅರ್ಧ ಶತಕಗಳನ್ನು ಗಳಿಸಿದರು. 17 ಟೆಸ್ಟ್‌ಗಳಲ್ಲಿ 54.20 ಸರಾಸರಿಯಲ್ಲಿ 1084 ರನ್ ಗಳಿಸಿದ ನಂತರ ಕಾಂಬ್ಳಿ ಅವರ ಟೆಸ್ಟ್ ವೃತ್ತಿಜೀವನವು ಕೇವಲ 23 ನೇ ವಯಸ್ಸಿನಲ್ಲಿ ಕೊನೆಗೊಂಡಿತು.
ಇದನ್ನೂ ಓದಿ: ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರ ಪತಿ ದೇವಿಸಿಂಗ್ ಆರ್ ಶೇಖಾವತ್ ಇನ್ನಿಲ್ಲ
ವಿನೋದ್ ಕಾಂಬ್ಳಿ 1991 ರಿಂದ 2000ದ ನಡುವೆ 104 ಟೆಸ್ಟ್ ಪಂದ್ಯಗಳ 97 ಇನ್ನಿಂಗ್ಸ್‌ಗಳಲ್ಲಿ 32.59 ಸರಾಸರಿಯಲ್ಲಿ 2477 ರನ್ ಗಳಿಸಿದ್ದಾರೆ. 1996 ರಲ್ಲಿ ಭಾರತ ವಿಶ್ವಕಪ್ ಸೋಲಿನ ನಂತರ ಅವರನ್ನು ತಂಡದಿಂದ ಕೈಬಿಡಲಾಯಿತು. ಇದಾದ ನಂತರವೂ ಅವರು 9 ಬಾರಿ ತಂಡಕ್ಕೆ ಮರಳಿದ್ದರು. ಆದರೆ ಪ್ರತಿ ಬಾರಿಯೂ ಪ್ರದರ್ಶನ ನೀಡಲು ವಿಫಲರಾದರು. ಆದ್ದರಿಂದ ಅಂತಿಮವಾಗಿ 28 ನೇ ವಯಸ್ಸಿನಲ್ಲಿ, ಅವರಿಗೆ ಅಂತರರಾಷ್ಟ್ರೀಯ ಕ್ರಿಕೆಟ್‌ನ ಬಾಗಿಲು ಶಾಶ್ವತವಾಗಿ ಮುಚ್ಚಲ್ಪಟ್ಟಿತು. ಆದರೆ, ಆಟಗಾರರು, ಆಯ್ಕೆಗಾರರು ಮತ್ತು ಕ್ರಿಕೆಟಿಗರ ಮಂಡಳಿಯಿಂದಾಗಿ ತಮ್ಮ ವೃತ್ತಿಜೀವನ ನಾಶವಾಯಿತು ಎಂದು ಕಾಂಬ್ಳಿ ನಂತರ ಆರೋಪಿಸಿದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.