Viral Video: ಬದುಕಿದ್ರೆ ದುಡಿದು ತಿನ್ನುವೆ ಮಾರಾಯ...ವಧುವಿನ ಮುಖ ಕಂಡು ಭಯದಿಂದ ಎದ್ನೋಬಿದ್ನೋ ಅಂತಾ ಓಡಿಹೋದ ವರ!

Groom runs away after seeing the bride: ವೀಡಿಯೊದಲ್ಲಿ, ವಧು-ವರರು ಮದುವೆ ಮಂಟಪದಲ್ಲಿ ಒಟ್ಟಿಗೆ ಕುಳಿತಿರುವುದನ್ನು ಕಾಣಬಹುದು. ಕುಟುಂಬ ಸದಸ್ಯರು ಅವರ ಬಳಿಯೇ ಇದ್ದಾರೆ. ವರ ತನ್ನ ವಧುವಿಗೆ ಸಿಂಧೂರ ಇಡುವ ಕ್ರಮಕ್ಕೆ ಮುಂದಾಗುತ್ತಿದ್ದಾನೆ. ಆದರೆ ಏನಾಯಿತೋ ಏನೋ? ಆ ವರ ಅಲ್ಲಿಂದ ಎದ್ನೋ ಬಿದ್ನೋ ಅಂತಾ ಓಡಿ ಹೋಗಿದ್ದಾನೆ.

Written by - Bhavishya Shetty | Last Updated : Feb 24, 2023, 05:09 PM IST
    • ವರರು ಮದುವೆ ಮಂಟಪದಲ್ಲಿ ಒಟ್ಟಿಗೆ ಕುಳಿತಿರುವುದನ್ನು ಕಾಣಬಹುದು.
    • ಕುಟುಂಬ ಸದಸ್ಯರು ಅವರ ಬಳಿಯೇ ಇದ್ದಾರೆ. ವರ ತನ್ನ ವಧುವಿಗೆ ಸಿಂಧೂರ ಇಡುವ ಕ್ರಮಕ್ಕೆ ಮುಂದಾಗುತ್ತಿದ್ದಾನೆ.
    • ಆದರೆ ಏನಾಯಿತೋ ಏನೋ? ಆ ವರ ಅಲ್ಲಿಂದ ಎದ್ನೋ ಬಿದ್ನೋ ಅಂತಾ ಓಡಿ ಹೋಗಿದ್ದಾನೆ
Viral Video: ಬದುಕಿದ್ರೆ ದುಡಿದು ತಿನ್ನುವೆ ಮಾರಾಯ...ವಧುವಿನ ಮುಖ ಕಂಡು ಭಯದಿಂದ ಎದ್ನೋಬಿದ್ನೋ ಅಂತಾ ಓಡಿಹೋದ ವರ! title=
Viral Video

Groom runs away after seeing the bride: ಮದುವೆ ಎಂಬುದು ಪ್ರತಿಯೊಬ್ಬರ ಜೀವನದಲ್ಲಿ ನಡೆಯುವ ಒಂದು ಅದ್ಭುತ ಸನ್ನಿವೇಶ. ಇದು ಕೆಲವರಿಗೆ ಸುಖ ಸಂತೋಷವನ್ನು ನೀಡಿದರೆ, ಇನ್ನೂ ಕೆಲವರಿಗೆ ದುಃಖವನ್ನು ನೀಡುತ್ತದೆ. ಇನ್ನು ಆ ಮದುವೆಯಲ್ಲಿ ಭಾಗಿಯಾದವರಿಗೆ ಮೋಜು ಮತ್ತು ನಗುವಿನ ದಿನವಾಗಿರುತ್ತದೆ. ಆದರೆ ಇಲ್ಲೊಬ್ಬ ವರನಿಗೆ ಮಾತ್ರ ಈ ಜೀವನವೇ ಸಾಕು ಎನ್ನುವಂತಾಗಿದೆ.

ಇದನ್ನೂ ಓದಿ:  Kiccha Sudeep: ಅಭಿಮಾನಿಗಳಿಗೆ ಬಂತು ಕಿಚ್ಚನ ವಿಶೇಷ ಕರೆಯೋಲೆ: ಏನದು ಗೊತ್ತಾ..!

ಇತ್ತೀಚೆಗೆ, ಸುಂದರವಾದ ಜೋಡಿಯ ವೀಡಿಯೊ Instagram ರೀಲ್ಸ್‌ನಲ್ಲಿ ಕಾಣಿಸಿಕೊಂಡಿತ್ತು. ಆದರೆ ಅದು ಎಲ್ಲರಿಗೂ ಆಶ್ಚರ್ಯವನ್ನುಂಟು ಮಾಡಿದೆ. ಇದಕ್ಕೆ ಕಾರಣ ಇಲ್ಲಿ ನಡೆದ ಘಟನೆ. ಮುಂದೆ ಏನಾಯಿತು ಎಂಬುದನ್ನು ಯಾರೂ ನಂಬಲು ಸಾಧ್ಯವಾಗಲಿಲ್ಲ.

ವೀಡಿಯೊದಲ್ಲಿ, ವಧು-ವರರು ಮದುವೆ ಮಂಟಪದಲ್ಲಿ ಒಟ್ಟಿಗೆ ಕುಳಿತಿರುವುದನ್ನು ಕಾಣಬಹುದು. ಕುಟುಂಬ ಸದಸ್ಯರು ಅವರ ಬಳಿಯೇ ಇದ್ದಾರೆ. ವರ ತನ್ನ ವಧುವಿಗೆ ಸಿಂಧೂರ ಇಡುವ ಕ್ರಮಕ್ಕೆ ಮುಂದಾಗುತ್ತಿದ್ದಾನೆ. ಆದರೆ ಏನಾಯಿತೋ ಏನೋ? ಆ ವರ ಅಲ್ಲಿಂದ ಎದ್ನೋ ಬಿದ್ನೋ ಅಂತಾ ಓಡಿ ಹೋಗಿದ್ದಾನೆ.

ವರನು ಸಿಂಧೂರವನ್ನು ಹಚ್ಚಲು ನಿಂತ ತಕ್ಷಣ, ವಧು ತನ್ನ ಸಮತೋಲನವನ್ನು ಕಳೆದುಕೊಂಡು ಪಕ್ಕಕ್ಕೆ ಬೀಳುತ್ತಾಳೆ. ಇದನ್ನು ನೋಡಿದ ವರನು ಇದ್ದಕ್ಕಿದ್ದಂತೆ ಯಾವುದೋ ಪ್ರೇತವನ್ನು ಕಂಡ ಹಾಗೆ ಬಹಳ ಆಶ್ಚರ್ಯದಿಂದ ಪ್ರತಿಕ್ರಿಯಿಸಿ, ತನ್ನ ಪೇಟ ಮತ್ತು ಹಾರವನ್ನು ಎಸೆದು ಓಡಿಹೋಗಿದ್ದಾನೆ.

ವಿಡಿಯೋ ನೋಡಿ: https://youtube.com/shorts/iUiZuRiu1f0?feature=share

ಇದನ್ನೂ ಓದಿ: IND vs AUS: ಭಾರತ-ಆಸ್ಟ್ರೇಲಿಯಾ ಸರಣಿಯ ನಡುವೆ ನಿವೃತ್ತಿ ಘೋಷಿಸಿದ ಆಟಗಾರ! ಅಭಿಮಾನಿಗಳು ಶಾಕ್

ಇನ್ನು ಮದುವೆ ಮಂಟಪದಲ್ಲಿ ನಿಖರವಾಗಿ ಏನಾಯಿತು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಅಥವಾ ವಧುವಿಗೆ ಏನಾಯಿತು ಎಂಬುದು ಯಾರಿಗೂ ತಿಳಿದಿಲ್ಲ. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಸುಮಾರು ಹನ್ನೆರಡು ಸಾವಿರ ಮಂದಿ ಈ ವಿಡಿಯೋವನ್ನು ಶೇರ್ ಮಾಡಿದ್ದಾರೆ ಮತ್ತು ಲೈಕ್ ಮಾಡಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News