“ಒತ್ತಡಕ್ಕೆ ಮಣಿದು ಹಾರ್ದಿಕ್ ಪಾಂಡ್ಯಗೆ ಟಿ20 ವಿಶ್ವಕಪ್’ನಲ್ಲಿ ಸ್ಥಾನ ನೀಡಿದ ಸಮಿತಿ”: ಅಚ್ಚರಿ ಸಂಗತಿ ಬಿಚ್ಚಿಟ್ಟ ರಿಪೋರ್ಟ್
Indian Team Squad For T20 World Cup 2024: 20 ತಂಡಗಳ ಈ ಟೂರ್ನಿಯಲ್ಲಿ ಭಾರತ ತನ್ನ ಮೊದಲ ಪಂದ್ಯವನ್ನು ಜೂನ್ 5 ರಂದು ಐರ್ಲೆಂಡ್ ವಿರುದ್ಧ ಆಡಬೇಕಿದೆ. ಅದಾದ ಬಳಿಕ ಟೀಂ ಇಂಡಿಯಾ ಕೇವಲ ನಾಲ್ಕು ದಿನಗಳ ನಂತರ ಅಂದರೆ ಜೂನ್ 9 ರಂದು ಪಾಕಿಸ್ತಾನವನ್ನು ಎದುರಿಸಲಿದೆ.
Indian Team Squad For T20 World Cup 2024: ಜೂನ್ 2 ರಿಂದ ಅಮೆರಿಕ ಮತ್ತು ವೆಸ್ಟ್ ಇಂಡೀಸ್’ನಲ್ಲಿ ನಡೆಯಲಿರುವ T20 ವಿಶ್ವಕಪ್ 2024ಕ್ಕಾಗಿ ಟೀಂ ಇಂಡಿಯಾ ಈಗಾಗಲೇ ಪ್ರಕಟಗೊಂಡಿದೆ. ಈ ತಂಡದಲ್ಲಿ ಬಿಸಿಸಿಐ ರೋಹಿತ್ ಶರ್ಮಾಗೆ ನಾಯಕತ್ವವನ್ನು ನೀಡಿದರೆ, ಹಾರ್ದಿಕ್ ಪಾಂಡ್ಯಗೆ ಉಪನಾಯಕತ್ವ ನೀಡಲಾಗಿದೆ.
20 ತಂಡಗಳ ಈ ಟೂರ್ನಿಯಲ್ಲಿ ಭಾರತ ತನ್ನ ಮೊದಲ ಪಂದ್ಯವನ್ನು ಜೂನ್ 5 ರಂದು ಐರ್ಲೆಂಡ್ ವಿರುದ್ಧ ಆಡಬೇಕಿದೆ. ಅದಾದ ಬಳಿಕ ಟೀಂ ಇಂಡಿಯಾ ಕೇವಲ ನಾಲ್ಕು ದಿನಗಳ ನಂತರ ಅಂದರೆ ಜೂನ್ 9 ರಂದು ಪಾಕಿಸ್ತಾನವನ್ನು ಎದುರಿಸಲಿದೆ. ಮೂರನೇ ಪಂದ್ಯವನ್ನು ಅಮೆರಿಕ ವಿರುದ್ಧ ಜೂನ್ 12 ರಂದು ಮತ್ತು ಜೂನ್ 15 ರಂದು ಕೆನಡಾ ವಿರುದ್ಧ ಆಡಬೇಕಾಗಿದೆ.
ಅಜಿತ್ ಟಿ ಅಗರ್ಕರ್ ನೇತೃತ್ವದ ಹಿರಿಯ ಆಯ್ಕೆ ಸಮಿತಿ ಭಾರತ ತಂಡವನ್ನು ಪ್ರಕಟಿಸಿದಾಗ, ಈ ತಂಡದ ಆಯ್ಕೆಯ ಬಗ್ಗೆ ಹಲವು ಪ್ರಶ್ನೆಗಳು ಎದ್ದಿದ್ದವು. ಅದರಲ್ಲೂ ಹಾರ್ದಿಕ್ ಪಾಂಡ್ಯರನ್ನು ಉಪನಾಯಕನನ್ನಾಗಿ ಮಾಡಿರುವ ನಿರ್ಧಾರ ಅನೇಕರಲ್ಲಿ ಸಾಕಷ್ಟು ಅಚ್ಚರಿ ಮೂಡಿಸಿದ್ದವು.
ಮೂಲಗಳ ಪ್ರಕಾರ, ಟಿ20 ವಿಶ್ವಕಪ್’ಗೆ ಭಾರತ ತಂಡವನ್ನು ಆಯ್ಕೆ ಮಾಡಲು ಆಯ್ಕೆ ಸಮಿತಿಯು ಅಹಮದಾಬಾದ್’ನಲ್ಲಿ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ನೇತೃತ್ವದಲ್ಲಿ ಸಭೆ ನಡೆಸಿದಾಗ, ಅಗರ್ಕರ್ ಮತ್ತು ನಾಯಕ ರೋಹಿತ್ ಸೇರಿದಂತೆ ಅನೇಕ ಆಯ್ಕೆಗಾರರು ಹಾರ್ದಿಕ್ ಅವರನ್ನು ತಂಡದಲ್ಲಿ ಆಯ್ಕೆ ಮಾಡುವುದು ಬೇಡ ಎಂದಿದ್ದರಂತೆ. ಆದರೆ ಇದೀಗ ಬಹಿರಂಗಗೊಂಡ ವರದಿಯ ಪ್ರಕಾರ, ರೋಹಿತ್ ಮತ್ತು ಅಗರ್ಕರ್ ಇಚ್ಛೆಯ ಹೊರತಾಗಿಯೂ ಒತ್ತಡದ ಮೇರೆಗೆ ಹಾರ್ದಿಕ್’ನನ್ನು ಆಯ್ಕೆ ಮಾಡಲಾಗಿದೆ. ಆಯ್ಕೆ ಮಾಡಿದ್ದು ಮಾತ್ರವಲ್ಲದೆ ಉಪನಾಯಕತ್ವವನ್ನೂ ನೀಡಲಾಗಿದೆ. ಅಂದಹಾಗೆ ಆ ಒತ್ತಡವೇನು? ಯಾರಿಂದ ಒತ್ತಡವಿತ್ತು ಎಂಬುದು ಸ್ಪಷ್ಟವಾಗಿಲ್ಲ.
ಇನ್ನೊಂದೆಡೆ ಐಪಿಎಲ್’ನಲ್ಲಿ ರೋಹಿತ್ ಶರ್ಮಾ ತೋರಿರುವ ಕಳಪೆ ಪ್ರದರ್ಶನ ಅವರ ಸ್ಥಾನಕ್ಕೆ ಕುತ್ತು ತಂದಿದೆ ಎಂಬುದು ಸುಳ್ಳಲ್ಲ. ವಿಶ್ವಕಪ್ ಬಳಿಕ ರೋಹಿತ್ ನಿವೃತ್ತಿ ಪಡೆಯದಿದ್ದರೂ, ತಂಡಕ್ಕೆ ಮತ್ತೆ ಆಯ್ಕೆ ಮಾಡುವ ಸಾಧ್ಯತೆ ಕಡಿಮೆ ಇದೆ.
ಇದನ್ನೂ ಓದಿ: ಟೆಸ್ಟ್ ಕ್ರಿಕೆಟ್ ಚರಿತ್ರೆಯಲ್ಲಿ ಒಂದೇ ಒಂದು ಬಾರಿಯೂ ಔಟ್ ಆಗಿಲ್ಲ ಈ ನಾಲ್ವರು ಆಟಗಾರರು! ಯಾರವರು ಗೊತ್ತಾ?
ಐಪಿಎಲ್’ನಲ್ಲಿ ಹಾರ್ದಿಕ್ ಕಳಪೆ ಪ್ರದರ್ಶನ:
ಐಪಿಎಲ್ 2024ರಲ್ಲಿ ಹಾರ್ದಿಕ್ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ ಪ್ರದರ್ಶನ ನಿರಾಶಾದಾಯಕ ಪ್ರದರ್ಶನ ನೀಡಿತ್ತು. ಅಷ್ಟೇ ಅಲ್ಲದೆ, ತಂಡವು ಅಧಿಕೃತವಾಗಿ ಪ್ಲೇಆಫ್ ರೇಸ್’ನಿಂದ ಹೊರಬಿದ್ದಿದೆ. 13 ಪಂದ್ಯಗಳಲ್ಲಿ ನಾಲ್ಕು ಗೆಲುವು ಸಾಧಿಸಿದ್ದ ಮುಂಬೈ, ಪಾಯಿಂಟ್ ಟೇಬಲ್’ನಲ್ಲಿ ಒಂಬತ್ತನೇ ಸ್ಥಾನದಲ್ಲಿತ್ತು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.