ನವದೆಹಲಿ : ಚೆನ್ನೈ ಸೂಪರ್ ಕಿಂಗ್ಸ್ (CSK) ಐಪಿಎಲ್‌ನ ಅತ್ಯಂತ ಯಶಸ್ವಿ ತಂಡಗಳಲ್ಲಿ ಒಂದಾಗಿದೆ. ಶ್ರೇಷ್ಠ ನಾಯಕ ಮಹೇಂದ್ರ ಸಿಂಗ್ ಧೋನಿ (Mahendra Singh Dhoni) ನಾಯಕತ್ವದಲ್ಲಿ ಸಿಎಸ್‌ಕೆ ನಾಲ್ಕು ಬಾರಿ ಐಪಿಎಲ್ ಟ್ರೋಫಿಯನ್ನು (IPL 2022) ತನ್ನ ಮುಡಿಗೇರಿಸಿಕೊಂಡಿದೆ. ಐಪಿಎಲ್ ಮೆಗಾ ಹರಾಜಿನಲ್ಲಿ ಸಿಎಸ್‌ಕೆ ತಂಡ ತನ್ನ ಹಳೆಯ ಆಟಗಾರರ ಮೇಲೆ ಮಾತ್ರ ಬಾಜಿ ಕಟ್ಟಿದೆ. 14 ಕೋಟಿ ರೂ. ಖರ್ಚು ಮಾಡಿ ತನ್ನ ತಂಡಕ್ಕೆ ಸೇರಿಸಿಕೊಂಡಿದೆ. 


COMMERCIAL BREAK
SCROLL TO CONTINUE READING

 ಈ ಆಟಗಾರರನ್ನು ಮತ್ತೆ ಖರೀದಿಸಿದ CSK : 
ಐಪಿಎಲ್ ಮೆಗಾ ಹರಾಜಿನಲ್ಲಿ (Ipl Mega Auction) ಸಿಎಸ್ ಕೆ ತಂಡ ಅತ್ಯಂತ ಜಾಣತನದಿಂದ ಆಟಗಾರರ ಮೇಲೆ ಹಣ ಹಾಕಿದೆ. ತಮ್ಮ ಹಳೆಯ ಆಟಗಾರರನ್ನು ಖರೀದಿಸುವಲ್ಲಿ ತಂಡ ಹೆಚ್ಚಿನ ಉತ್ಸಾಹ ತೋರಿಸಿತ್ತು. ಸ್ಟಾರ್ ಆಲ್ ರೌಂಡರ್ ದೀಪಕ್ ಚಹಾರ್ (Deepak Chahar) ಅವರನ್ನು ಖರೀದಿಸಲು CSK 14 ಕೋಟಿ ಬಿಡ್ ಮಾಡಿದೆ. ರಾಬಿನ್ ಉತ್ತಪ್ಪ ಅವರನ್ನು 2 ಕೋಟಿಗೆ ಖರೀದಿಸಲಾಗಿದೆ. ವೆಸ್ಟ್ ಇಂಡೀಸ್‌ನ ಮಾರಕ ಆಲ್‌ರೌಂಡರ್ ಡ್ವೇನ್ ಬ್ರಾವೋ ಅವರನ್ನು4 ಕೋಟಿ  40 ಲಕ್ಷ  ರೂಪಾಯಿಗಳಿಗೆ ಖರೀದಿಸಲಾಗಿದೆ. ಬಲಿಷ್ಠ ಬ್ಯಾಟ್ಸ್ ಮನ್ ಅಂಬಟಿ ರಾಯುಡು ಅವರನ್ನು 6 ಕೋಟಿ 75 ಲಕ್ಷಕ್ಕೆ ತಂಡ ಸೇರಿಸಿಕೊಂಡಿದೆ. ಇವರೆಲ್ಲರೂ ಮ್ಯಾಚ್ ವಿನ್ನರ್ ಆಟಗಾರರೇ.  CSK ಟ್ರೋಫಿ ಗೆಲ್ಲುವಲ್ಲಿ ಇವರೂ ಬಹಳ ಮುಖ್ಯ ಪಾತ್ರ ವಹಿಸಿದ್ದರು. ಈ ನಿಟ್ಟಿನಲ್ಲಿ ತಂಡದ ಮ್ಯಾನೇಜ್ಮೆಂಟ್ ಈ ಆಟಗಾರರ ಮೇಲೆ ಮತ್ತೆ ಬಾಜಿ ಕಟ್ಟಿದೆ. 


ಇದನ್ನೂ ಓದಿ : IPL 2022 Mega Auction : ವಿಕೆಟ್ ಕೀಪರ್ ಖರೀದಿಯಲ್ಲಿ ಎಡವಿದ ಮೂರು ತಂಡಗಳು..!


ಹಳೇ ಹುಲಿಗಳ ಸೈನ್ಯ ಕಟ್ಟಿದ CSK :
CSKಯ  IPL 2022ರ ತಂಡದಲ್ಲಿ  ಹೆಚ್ಚಿನ ಆಟಗಾರರು 35 ವರ್ಷಕ್ಕಿಂತ ಮೇಲ್ಪಟ್ಟವರು.  ಆದರೆ ಈ ಆಟಗಾರರ ಫಿಟ್‌ನೆಸ್ ಯುವ ಆಟಗಾರರನ್ನೂ ನಾಚಿಸುವಂತಿದೆ.  ಇನ್ನು ನಾಯಕ ಮಹೇಂದ್ರ ಸಿಂಗ್ ಧೋನಿ (Mahendra Singh Dhoni) ತಮ್ಮ ತಂಡದಲ್ಲಿ ಅನೇಕ ಯುವ ಆಟಗಾರರಿಗೆ ಸ್ಥಾನ ನೀಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡ ಯುವಕರ ಅನುಭವ ಹಾಗೂ ಉತ್ಸಾಹದೊಂದಿಗೆ ಮೈದಾನಕ್ಕಿಳಿಯಲಿದೆ.


CSK ನಾಲ್ವರು ಆಟಗಾರರನ್ನು ಉಳಿಸಿಕೊಂಡಿದೆ :
ಐಪಿಎಲ್ ರಿಟೆನ್ಶನ್ ನಲ್ಲಿ ಸಿಎಸ್ ಕೆ ತಂಡ ನಾಲ್ವರು ಆಟಗಾರರನ್ನು ಉಳಿಸಿಕೊಂಡಿದೆ. ನಂಬರ್ ಒನ್ ಸ್ಥಾನದಲ್ಲಿರುವ ನಾಯಕ ಮಹೇಂದ್ರ ಸಿಂಗ್ ಧೋನಿಯನ್ನು  12 ಕೋಟಿ ರೂ., ಸ್ಟಾರ್ ಆಲ್ ರೌಂಡರ್ ರವೀಂದ್ರ ಜಡೇಜಾ (Ravindra Jadeja) ಅವರನ್ನು 16 ಕೋಟಿ ರೂ., ಅಪಾಯಕಾರಿ ಬ್ಯಾಟ್ಸ್ ಮನ್ ರುತುರಾಜ್ ಗಾಯಕ್ ವಾಡ್  ಅವರನ್ನು  6 ಕೋಟಿ ರೂ.ಗೆ ಹಾಗೂ ಇಂಗ್ಲೆಂಡ್ ನ ಡ್ಯಾಶಿಂಗ್ ಆಲ್ ರೌಂಡರ್ ಮೊಯಿನ್ ಅಲಿ ಅವರನ್ನು8 ಕೋಟಿ ರೂ. ಗೆ  ಉಳಿಸಿಕೊಳ್ಳಲಾಗಿದೆ. 


ಇದನ್ನೂ ಓದಿ : IPL 2022 RCB Team: ಈ ಬಾರಿ ಐಪಿಎಲ್ ನಲ್ಲಿ ಕಣಕ್ಕಿಳಿಯಲಿದೆ RCB ಬಲಿಷ್ಠ ಪ್ಲೇಯಿಂಗ್ XI


ಚೆನ್ನೈ ಬ್ಯಾಟ್ಸ್‌ಮನ್‌ಗಳು : ಎಂಎಸ್ ಧೋನಿ, ರಿತುರಾಜ್ ಗಾಯಕ್ವಾಡ್, ರಾಬಿನ್ ಉತ್ತಪ್ಪ, ಅಂಬಟಿ ರಾಯುಡು, ಡೆವೊನ್ ಕಾನ್ವೇ, ಸುಭ್ರಾಂಶು ಸೇನಾಪತಿ, ಸಿ ಹರಿ ನಿಶಾಂತ್, ನಾರಾಯಣ ಜಗದೀಸನ್.


ಚೆನ್ನೈ ಆಲ್‌ರೌಂಡರ್‌ಗಳು : ರವೀಂದ್ರ ಜಡೇಜಾ, ಮೊಯಿನ್ ಅಲಿ, ಡ್ವೇನ್ ಬ್ರಾವೋ, ಶಿವಂ ದುಬೆ, ರಾಜ್ಯವರ್ಧನ್ ಹಂಗರ್‌ಗೇಕರ್, ಡ್ವೇನ್ ಪ್ರಿಟೋರಿಯಸ್, ಮಿಚೆಲ್ ಸ್ಯಾಂಟ್ನರ್, ಕ್ರಿಸ್ ಜೋರ್ಡಾನ್ ಮತ್ತು ಕೆ ಭಗತ್ ವರ್ಮಾ.


ಚೆನ್ನೈ ಬೌಲರ್‌ಗಳು : ದೀಪಕ್ ಚಹಾರ್, ಕೆಎಂ ಆಸಿಫ್, ತುಷಾರ್ ದೇಶಪಾಂಡೆ, ಮಹಿಷ್ ತೀಕ್ಷಾ, ಸಿಮರ್‌ಜಿತ್ ಸಿಂಗ್, ಆಡಮ್ ಮಿಲ್ನೆ, ಮುಖೇಶ್ ಚೌಧರಿ ಮತ್ತು ಪ್ರಶಾಂತ್ ಸೋಲಂಕಿ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ