ನವದೆಹಲಿ : ಐಪಿಎಲ್ ಮೆಗಾ ಹರಾಜಿನ (IPL Mega Auction) ಬಳಿಕ ಇದೀಗ ಎಲ್ಲರ ಕಣ್ಣು ಐಪಿಎಲ್ 2022ರ (IPL 2022) ಮೇಲಿದೆ. ಎಲ್ಲಾ ತಂಡಗಳು ತಮ್ಮ ಕಾರ್ಯತಂತ್ರಕ್ಕೆ ಅನುಗುಣವಾಗಿ ತಂಡವನ್ನು ಸಿದ್ಧಪಡಿಸಿವೆ. ಹಲವು ಆಟಗಾರರ ಮೇಲೆ ಸಾಕಷ್ಟು ಹಣ ಸುರಿಸಲಾಗಿದೆ. ಇನ್ನು ಕೆಲವು ಆಟಗಾರರು ಬಿಕರಿಯಾಗದೆ ಉಳಿದಿದ್ದಾರೆ. ಆದರೆ ಎಲ್ಲಾ ತಂಡಗಳು ಆಟಗಾರರನ್ನು ಖರೀದಿಸುವಲ್ಲಿ ದೊಡ್ಡ ತಪ್ಪು ಮಾಡಿದೆ.
ವಿಕೆಟ್‌ಕೀಪರ್‌ಗಳನ್ನು ಖರೀದಿಸುವಲ್ಲಿ ಎಡವಟ್ಟು :
ಐಪಿಎಲ್ ಮೆಗಾ ಹರಾಜಿನಲ್ಲಿ (IPL Mega Auction) ಎಲ್ಲಾ ತಂಡಗಳು ಆಟಗಾರರನ್ನು ಖರೀದಿಸುವಲ್ಲಿ ದೊಡ್ಡ ತಪ್ಪು ಮಾಡಿದೆ. ಎಲ್ಲಾ ತಂಡಗಳ ವಿಕೆಟ್‌ಕೀಪರ್‌ಗಳಿಗೆ (Wicketkeeper) ಅತ್ಯಂತ ಕಡಿಮೆ ಹಣವನ್ನು ಖರ್ಚು ಮಾಡಲಾಗಿದೆ. ಎಲ್ಲಾ ತಂಡಗಳು ಬಲಿಷ್ಠ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್‌ಗಳನ್ನು ಹೊಂದಿವೆ. ಆದರೆ ಈ ವಿಕೆಟ್‌ಕೀಪರ್ ಗಾಯಗೊಂಡರೆ, ಬದಲಿಗೆ ಇನ್ನೊಬ್ಬ ಸ್ಟಾರ್ ವಿಕೆಟ್‌ಕೀಪರ್ ಇಲ್ಲ. ಮುಂಬೈ ಇಂಡಿಯನ್ಸ್ (Mumbai Indians) ಸೂಪರ್‌ಸ್ಟಾರ್ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಇಶಾನ್ ಕಿಶನ್ (Ishan kishan) ಅವರನ್ನು 15 ಕೋಟಿ 25 ಲಕ್ಷ ರೂಪಾಯಿಗಳಿಗೆ ಖರೀದಿಸಿದೆ. ಆದರೆ ಐಪಿಎಲ್ (IPL) ಸಮಯದಲ್ಲಿ ಒಂದು ವೇಳೆ ಇಶಾನ್ ಹೊರಗುಳಿದರೆ, ಅವರ ಸ್ಥಾನವನ್ನು 20 ವರ್ಷದ ಆರ್ಯನ್ ಜುಯಲ್ ತುಂಬ ಬೇಕಾಗುತ್ತದೆ. ಆರ್ಯನ್ ಜುಯಲ್‌ಗೆ ಐಪಿಎಲ್‌ನಲ್ಲಿ ಆಡಿದ ಅನುಭವವಿಲ್ಲ.
ಇದನ್ನೂ ಓದಿ : IPL 2022 RCB Team: ಈ ಬಾರಿ ಐಪಿಎಲ್ ನಲ್ಲಿ ಕಣಕ್ಕಿಳಿಯಲಿದೆ RCB ಬಲಿಷ್ಠ ಪ್ಲೇಯಿಂಗ್ XI
ಕೆಕೆಆರ್ ತಂಡದಲ್ಲಿ ಈ ಸಮಸ್ಯೆ :
ಕೆಕೆಆರ್ ತಂಡವು (KKR) ಎರಡು ಬಾರಿ ಐಪಿಎಲ್ ಪ್ರಶಸ್ತಿಯನ್ನು ಗೆದ್ದಿದೆ. ಮೊದಲು ದಿನೇಶ್ ಕಾರ್ತಿಕ್ (Dinesh Kartik) ಅವರಂತಹ ಬಲಿಷ್ಠ ಬ್ಯಾಟ್ಸ್‌ಮನ್ ಈ ತಂಡದಲ್ಲಿದ್ದರು. ಆದರೆ ಕೆಕೆಆರ್ ತಂಡ ಈ ಆಟಗಾರನನ್ನು ರಿಲೀಜ್ ಮಾಡಿ ಖರೀದಿ ಮಾಡಲೇ ಇಲ್ಲ. ಐಪಿಎಲ್ ಮೆಗಾ ಹರಾಜಿನಲ್ಲಿ ಇಂಗ್ಲೆಂಡ್‌ನ ವಿಕೆಟ್‌ಕೀಪರ್ ಸ್ಯಾಮ್ ಬಿಲ್ಲಿಂಗ್ಸ್ (Sam Billings) ಅವರನ್ನು ಕೆಕೆಆರ್ ಖರೀದಿಸಿದೆ. ಬಿಲ್ಲಿಂಗ್ ಕೇವಲ 22 ಐಪಿಎಲ್ (IPL) ಪಂದ್ಯಗಳನ್ನು ಆಡಿ 309 ರನ್ ಗಳಿಸಿದ್ದಾರೆ. ಅವರಿಗೆ ಐಪಿಎಲ್‌ನಲ್ಲಿ ಹೆಚ್ಚು ವಿಕೆಟ್ ಕೀಪಿಂಗ್ ಮಾಡಿ ಅನುಭವವಿಲ್ಲ. ಎರಡನೇ ವಿಕೆಟ್ ಕೀಪರ್ ಆಗಿ, ಶೆಲ್ಡನ್ ಜಾಕ್ಸನ್ ಅವರನ್ನುತಂಡ ಖರೀದಿಸಿದೆ. ಶೆಲ್ಡನ್ ಇನ್ನೂ ಟೀಂ ಇಂಡಿಯಾಗೆ (Team India) ಪದಾರ್ಪಣೆ ಮಾಡಿಲ್ಲ. ಕೋಲ್ಕತ್ತಾ 60 ಲಕ್ಷ ರೂಪಾಯಿ ನೀಡಿ ಶೆಲ್ಡನ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ.
ಆರ್‌ಸಿಬಿಯಲ್ಲಿ ಕೇವಲ ಒಬ್ಬ ಸ್ಟಾರ್ ವಿಕೆಟ್‌ಕೀಪರ್ :
RCB ಮೂರು ವಿಕೆಟ್‌ಕೀಪರ್‌ಗಳನ್ನು ಖರೀದಿಸಿದೆ. ಅವರಲ್ಲಿ ದಿನೇಶ್ ಕಾರ್ತಿಕ್ (Dinesh Karthik) ಅನುಭವಿ ಯಾಗಿದ್ದಾರೆ. ಇತರ ಇಬ್ಬರೂ ಯಾರೆಂದರೆ ಅನುಜ್ ರಾವತ್ ಮತ್ತು ಲವ್ನೀತ್ ಸಿಸೋಡಿಯಾ. ಇವರಿಬ್ಬರೂ ದೇಶೀಯ ಕ್ರಿಕೆಟ್‌ನಲ್ಲಿ ಆಡಿದ್ದು, ಐಪಿಎಲ್‌ನಲ್ಲಿ ಹೆಚ್ಚಿನ ಅವಕಾಶಗಳನ್ನು ಪಡೆದಿಲ್ಲ. ಹೀಗಿರುವಾಗ ದಿನೇಶ್ ಕಾರ್ತಿಕ್ ಗಾಯಗೊಂಡರೆ ಆರ್‌ಸಿಬಿಗೆ ಸಂಕಷ್ಟ ಎದುರಾಗಬಹುದು.
ಇದನ್ನೂ ಓದಿ : IPL 2022 Mega Auction: ಮುಂಬೈ ಇಂಡಿಯನ್ಸ್ ತಂಡಕ್ಕೆ ಗೆ 30 ಲಕ್ಷ ರೂ.ಗೆ ಹರಾಜಾದ ಅರ್ಜುನ್ ತೆಂಡೂಲ್ಕರ್..!
ಎಲ್ಲಾ ತಂಡಗಳು ಖರೀದಿಸಿದ ವಿಕೆಟ್‌ಕೀಪರ್‌ಗಳು
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB)
ದಿನೇಶ್ ಕಾರ್ತಿಕ್
ಅನುಜ್ ರಾವತ್
ಲವನೀತ್ ಸಿಸೋಡಿಯಾ
ಕೋಲ್ಕತ್ತಾ ನೈಟ್ ರೈಡರ್ಸ್ (KKR)
ಶೆಲ್ಡನ್ ಜಾಕ್ಸನ್
ಸ್ಯಾಮ್ ಬಿಲ್ಲಿಂಗ್ಸ್
ಬಾಬಾ ಇಂದರ್ಜಿತ್
ಪಂಜಾಬ್ ಕಿಂಗ್ಸ್ (PBKS)
ಪ್ರಭಾಸಿಮ್ರಾನ್ ಸಿಂಗ್
ಜಾನಿ ಬೈರ್‌ಸ್ಟೋವ್
ಜಿತೇಶ್ ಶರ್ಮಾ
ಚೆನ್ನೈ ಸೂಪರ್ ಕಿಂಗ್ಸ್ (CSK)
ಮಹೇಂದ್ರ ಸಿಂಗ್ ಧೋನಿ
ಅಂಬಾತಿ ರಾಯುಡು
ಎನ್ ಜಗದೀಸನ್
ದೆಹಲಿ ಕ್ಯಾಪಿಟಲ್ಸ್ (DC)
ರಿಷಬ್ ಪಂತ್
ಟಿಮ್ ಶಿಫರ್ಟ್
ಕೆಎಸ್ ಭರತ್
ರಾಜಸ್ಥಾನ್ ರಾಯಲ್ಸ್ (RR)
ಸಂಜು ಸ್ಯಾಮ್ಸನ್
ಜೋಸ್ ಬಟ್ಲರ್
ಧ್ರುವ ಜುರೆಲ್
ಮುಂಬೈ ಇಂಡಿಯನ್ಸ್ (MI)
ಇಶಾನ್ ಕಿಶನ್
ಆರ್ಯನ್ ಜುಯಲ್
ಸನ್‌ರೈಸರ್ಸ್ ಹೈದರಾಬಾದ್ (SRH)
ನಿಕೋಲಸ್ ಪೂರನ್
ಗ್ಲೆನ್ ಫಿಲಿಪ್ಸ್
ವಿಷ್ಣು ವಿನೋದ್
ಲಕ್ನೋ ಸೂಪರ್ ಜೈಂಟ್ಸ್ (LSG)
ಕೆಎಲ್ ರಾಹುಲ್
ಕ್ವಿಂಟನ್ ಡಿ ಕಾಕ್
ಗುಜರಾತ್ ಟೈಟಾನ್ಸ್ (GT)
ಮ್ಯಾಥ್ಯೂ ವೇಡ್
ವೃದ್ಧಿಮಾನ್ ಸಹಾ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.