IND vs AUS 3rd Test: ಟೀಂ ಇಂಡಿಯಾ ಟೆಸ್ಟ್ ಗೂ ಮೊದಲು ಇಂದೋರ್‌ನಲ್ಲಿ ಅಭ್ಯಾಸವನ್ನು ಪ್ರಾರಂಭಿಸಿದೆ. ಉಭಯ ತಂಡಗಳ ನಡುವಿನ ಈ ಪಂದ್ಯ ಹೋಳ್ಕರ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯದ ಪ್ಲೇಯಿಂಗ್ 11 ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಇಂದೋರ್ ಟೆಸ್ಟ್ ಪಂದ್ಯದಲ್ಲಿ ಆಡಲು ಇಬ್ಬರು ಆಟಗಾರರ ನಡುವೆ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿದೆ. ಈ ಇಬ್ಬರೂ ಆಟಗಾರರು ಟೀಮ್ ಇಂಡಿಯಾದ ಅಭ್ಯಾಸ ಅವಧಿಯಲ್ಲಿ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರ ಮುಂದೆ ಒಟ್ಟಿಗೆ ಅಭ್ಯಾಸ ಮಾಡಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Garlic : ಈ ಸಮಸ್ಯೆಯಿದ್ದರೆ ಬೆಳ್ಳುಳ್ಳಿಯನ್ನು ಅಪ್ಪಿತಪ್ಪಿಯೂ ತಿನ್ನಬಾರದು


ಓಪನರ್ ಸ್ಥಾನಕ್ಕೆ ಸ್ಪರ್ಧಿಗಳಾದ ಕೆಎಲ್ ರಾಹುಲ್ ಮತ್ತು ಶುಭಮನ್ ಗಿಲ್ ಅವರು ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್‌ಗೆ ಮುಂಚಿತವಾಗಿ ತರಬೇತಿ ಅವಧಿಯಲ್ಲಿ ಒಟ್ಟಿಗೆ ಬ್ಯಾಟಿಂಗ್ ಅಭ್ಯಾಸ ನಡೆಸಿದ್ದಾರೆ. ಟೆಸ್ಟ್‌ನಲ್ಲಿ ದೀರ್ಘಾವಧಿಯ ಕಳಪೆ ಪ್ರದರ್ಶನ ಹಿನ್ನೆಲೆಯಲ್ಲಿ ಉಪನಾಯಕತ್ವದಿಂದ ರಾಹುಲ್ ಅವರನ್ನು ತೆಗೆದುಹಾಕಲಾಗಿದೆ. ಇನ್ನೊಂದೆಡೆ ಫಾರ್ಮ್‌ನಲ್ಲಿರುವ ಗಿಲ್‌’ಗಿಂತ ರಾಹುಲ್‌ಗೆ ಆದ್ಯತೆ ನೀಡುವ ಬಗ್ಗೆ ಕ್ರಿಕೆಟ್ ಜಗತ್ತಿನಲ್ಲಿ ಜನರ ಅಭಿಪ್ರಾಯವು ಭಿನ್ನವಾಗಿದೆ.


47 ಟೆಸ್ಟ್ ಪಂದ್ಯಗಳನ್ನು ಆಡಿದ ರಾಹುಲ್ 33.44 ಸರಾಸರಿಯಲ್ಲಿ ಮಾತ್ರ ರನ್ ಗಳಿಸಲು ಶಕ್ತರಾಗಿದ್ದಾರೆ. ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರ ಮೇಲ್ವಿಚಾರಣೆಯಲ್ಲಿ ಇಬ್ಬರೂ ಬ್ಯಾಟ್ಸ್‌ಮನ್‌ಗಳು ಎರಡು ನೆಟ್‌ಗಳಲ್ಲಿ ಸುಮಾರು 30 ನಿಮಿಷಗಳ ಕಾಲ ಬ್ಯಾಟ್ ಮಾಡಿದ್ದಾರೆ.


ತಂಡದ ಮ್ಯಾನೇಜ್‌ಮೆಂಟ್‌ಗೆ ರಾಹುಲ್‌ನ ಸಾಮರ್ಥ್ಯದ ಮೇಲೆ ನಂಬಿಕೆ ಇದೆ ಮತ್ತು ಅವರಿಗೆ ಹೆಚ್ಚುವರಿ ಅವಕಾಶಗಳನ್ನು ನೀಡುತ್ತಿದೆ ಆದರೆ ಪ್ರತಿ ವೈಫಲ್ಯದಿಂದ ಬ್ಯಾಟ್ಸ್‌ಮನ್‌ನ ಮೇಲೆ ಒತ್ತಡ ಹೆಚ್ಚುತ್ತಿದೆ. ಮತ್ತೊಂದೆಡೆ, ಗಿಲ್ ಪ್ರಸ್ತುತ ಋತುವಿನಲ್ಲಿ ಎಲ್ಲಾ ಸ್ವರೂಪಗಳಲ್ಲಿ ಪ್ರಭಾವ ಬೀರಿದ್ದಾರೆ. ಮಾಜಿ ಕ್ರಿಕೆಟಿಗರು ಸೇರಿದಂತೆ ಅವರ ಬೆಂಬಲಿಗರು ಅವರಿಗೆ ಆಡಲು ಅವಕಾಶ ನೀಡಲು ಇದಕ್ಕಿಂತ ಉತ್ತಮ ಸಮಯವ ಬೇಕಾಗಿಲ್ಲ ಎಂದು ಭಾವಿಸಿದ್ದಾರೆ. ಅಭ್ಯಾಸದ ವೇಳೆ ಗಿಲ್ ಆಕ್ರಮಣಕಾರಿ ವರ್ತನೆ ತೋರಿದರೆ, ರಾಹುಲ್ ತಮ್ಮ ರಕ್ಷಣೆಯತ್ತ ಹೆಚ್ಚು ಗಮನ ಹರಿಸುತ್ತಿರುವುದನ್ನು ಕಾಣಬಹುದು.


ಇದನ್ನೂ ಓದಿ: ಟೀಂ ಇಂಡಿಯಾದ ಪ್ಲೇಯಿಂಗ್ 11 ರಹಸ್ಯ ಬಹಿರಂಗ: ಈ ಆಟಗಾರ ಇಂದೋರ್ ಟೆಸ್ಟ್ನಲ್ಲಿ ಆಡುವುದು ಖಚಿತ!


ದೆಹಲಿಯಲ್ಲಿ ನಡೆದ ಎರಡನೇ ಟೆಸ್ಟ್‌ನಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಉತ್ತಮ ಸಂಪರ್ಕದಲ್ಲಿ ಕಾಣಿಸಿಕೊಂಡರು. ಆದರೆ ಉತ್ತಮ ಆರಂಭವನ್ನು ದೊಡ್ಡ ಇನ್ನಿಂಗ್ಸ್‌ಗೆ ಪರಿವರ್ತಿಸಲು ವಿಫಲರಾದರು. ನೆಟ್‌ನಲ್ಲಿ ಒಟ್ಟಿಗೆ ಬ್ಯಾಟಿಂಗ್‌ಗೆ ಇಳಿದ ಈ ಇಬ್ಬರೂ ಬ್ಯಾಟ್ಸ್‌ಮನ್‌ಗಳು ಸ್ಪಿನ್ನರ್‌ಗಳ ವಿರುದ್ಧ ಆಕ್ರಮಣಕಾರಿ ಧೋರಣೆ ಅನುಸರಿಸಿದ್ದರು. ಎಡಗೈ ಸ್ಪಿನ್ನರ್‌ಗಳ ವಿರುದ್ಧ ಕೊಹ್ಲಿ ನೇರ ಬೌಂಡರಿಗಳನ್ನು ಗುರಿಯಾಗಿಸಿಕೊಂಡರೆ, ರೋಹಿತ್ ಪುಲ್, ಸ್ವೀಪ್ ಮತ್ತು ರಿವರ್ಸ್ ಸ್ವೀಪ್ ಸೇರಿದಂತೆ ಭರ್ಜರಿ ಆಟವನ್ನಾಡಿದರು. ಸರಣಿಯಲ್ಲಿ ಬ್ಯಾಟ್ ಮತ್ತು ಬಾಲ್ ಎರಡರಿಂದಲೂ ಕೊಡುಗೆ ನೀಡಿದ ಅಶ್ವಿನ್, ಇಂದು ಸ್ವೀಪಿಂಗ್ ಶಾಟ್‌ಗಳನ್ನು ಅಭ್ಯಾಸ ಮಾಡಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ