ನವದೆಹಲಿ: ಇಂಗ್ಲೆಂಡ್ ಮತ್ತು ಭಾರತ ನಡುವಿನ ಐದನೇ ಟೆಸ್ಟ್ ಪಂದ್ಯ, ಕೊರೊನಾ ಭೀತಿಯಿಂದಾಗಿ ರದ್ದಾಗಿತ್ತು, ಈಗ ಪಂದ್ಯವು ಜುಲೈ 2022 ರಲ್ಲಿ ನಡೆಯಲಿದೆ ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಶುಕ್ರವಾರ ಹೇಳಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಭಾರತೀಯ ಕ್ರಿಕೆಟ್ ನಲ್ಲಿ ಕ್ರಾಂತಿ ಹುಟ್ಟುಹಾಕಿದ ಶ್ರೇಯ ಸೌರವ್ ಗಂಗೂಲಿಗೆ ಸಲ್ಲುತ್ತದೆ - ನಾಸೀರ್ ಹುಸೇನ್


ಈ ವರ್ಷದ ಆರಂಭದಲ್ಲಿ ಮ್ಯಾಂಚೆಸ್ಟರ್‌ನಲ್ಲಿ ಟೆಸ್ಟ್ ಪಂದ್ಯವನ್ನು ಆಯೋಜಿಸಲಾಗಿತ್ತು, ಆದರೆ ಐದು ಪಂದ್ಯಗಳ ಸರಣಿಯ ಅಂತಿಮ ಪಂದ್ಯವನ್ನು ಈಗ ಎಡ್ಜ್‌ಬಾಸ್ಟನ್‌ನಲ್ಲಿ ಆಡಲಾಗುವುದು ಎಂದು ಇಸಿಬಿ ದೃಡಪಡಿಸಿದೆ.ಟೆಸ್ಟ್ ಪಂದ್ಯವು ಮುಂದಿನ ವರ್ಷ ಯುಕೆ ಗೆ ಭಾರತದ ವೈಟ್ ಬಾಲ್ ಪ್ರವಾಸದ ಒಂದು ಭಾಗವಾಗಿರುತ್ತದೆ.


ಇದನ್ನೂ ಓದಿ: "ಕೊಹ್ಲಿ ಪ್ರಸ್ತುತ ಭಾರತೀಯ ತಂಡದಲ್ಲಿ ಹೋರಾಟದ ಮನೋಭಾವವನ್ನು ಹುಟ್ಟುಹಾಕಿದ್ದಾರೆ


ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಮತ್ತು ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿಯ (BCCI) ನಡುವಿನ ಒಪ್ಪಂದದ ನಂತರ, ಐದನೇ ಪಂದ್ಯವು ಜುಲೈ 1, 2022 ರಿಂದ ಎಡ್ಜ್‌ಬಾಸ್ಟನ್‌ನಲ್ಲಿ ನಡೆಯುತ್ತದೆ ಎಂದು"ಇಸಿಬಿಯಿಂದ ಅಧಿಕೃತ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.


ಭಾರತದ ಎರಡನೇ ಫಿಸಿಯೋ ವೈರಸ್‌ಗೆ ತುತ್ತಾದ ನಂತರ ಟಾಸ್‌ಗೆ ಕೆಲವು ಗಂಟೆಗಳ ಮೊದಲು ಐದನೇ ಟೆಸ್ಟ್ ಅನ್ನು ಸ್ಥಗಿತಗೊಳಿಸಲಾಯಿತು. ನಿರ್ಧಾರವನ್ನು ಅಮಾನತುಗೊಳಿಸುವ ಮೊದಲು 5 ಪಂದ್ಯಗಳ ಸರಣಿಯಲ್ಲಿ ಭಾರತ 2-1 ಮುನ್ನಡೆ ಸಾಧಿಸಿತ್ತು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.