MSD Retires: BCCI ಹಾಗೂ ಅಧ್ಯಕ್ಷ Sourav Ganguly ಹೇಳಿದ್ದೇನು?

ಕ್ರೀಡಾ ಜಗತ್ತಿನ ಮಹತ್ವದ ಬೆಳವಣಿಗೆಯೊಂದರಲ್ಲಿ Dhoni ಹಾಗೂ Raina ಒಂದೇ ದಿನ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿ ತಮ್ಮ ಅಭಿಮಾನಿಗಳು ನಿಬ್ಬೇರಗಾಗುವಂತೆ ಮಾಡಿದ್ದಾರೆ. ಉಭಯ ದಿಗ್ಗಜ ಆಟಗಾರರು ಸಾಮಾಜಿಕ ಮಾಧ್ಯಮದ ಮೂಲಕ ತಮ್ಮ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದಾರೆ.

Last Updated : Aug 16, 2020, 09:21 AM IST
MSD Retires: BCCI ಹಾಗೂ ಅಧ್ಯಕ್ಷ Sourav Ganguly ಹೇಳಿದ್ದೇನು? title=

ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(BCCI) ಅಧ್ಯಕ್ಷ ಸೌರವ್ ಗಂಗೂಲಿ(Sourav Ganguly), ಶನಿವಾರ ತಮ್ಮ ವೃತ್ತಿ ಜೀವನಕ್ಕೆ ವಿದಾಯ ಹೇಳಿರುವ ಮಾಜಿ ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಕುರಿತು ಹೊಗಳಿಕೆಯ ಮಾತುಗಳನ್ನು ಆಡಿದ್ದಾರೆ. ಒಂದೇ ದಿನ ಮಹೇಂದ್ರ ಸಿಂಗ್ ಧೋನಿ (Mahendra Singh Dhoni) ಹಾಗೂ ಸುರೇಶ ರೈನಾ(Suresh Raina) ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿ ತಮ್ಮ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಉಭಯ ದಿಗ್ಗಜ ಆಟಗಾರರು ಸಾಮಾಜಿಕ ಮಾಧ್ಯಮದ ಮೂಲಕ ತಮ್ಮ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದಾರೆ.

BCCI ವತಿಯಿಂದ ಹೇಳಿಕೆ ಬಿಡುಗಡೆ ಮಾಡಿರುವ ಸೌರವ್ ಗಂಗೂಲಿ, "ಯುಗವೊಂದು ಅಂತ್ಯವಾಗಿದೆ. ಭಾರತ ಹಾಗೂ ವಿಶ್ವಕಪ್ ಕ್ರಿಕೆಟ್ ಗೆ ಅವರು ಅಭೂತಪೂರ್ವ ಆಟಗಾರರಾಗಿದ್ದರು. ಅವರ ನಾಯಕತ್ವದ ಕ್ಷಮತೆ ಇತರರಿಗಿಂತ ಭಿನ್ನವಾಗಿತ್ತು. ಅದನ್ನು ತಲಪುವುದು ಅದರಲ್ಲೂ ವಿಶೇಷವಾಗಿ ಸಣ್ಣ ಫಾರ್ಮ್ಯಾಟ್ ಕ್ರಿಕೆಟ್ ನಲ್ಲಿ ತುಂಬಾ ಕಷ್ಟಸಾಧ್ಯ" ಎಂದಿದ್ದಾರೆ.

"ಆರಂಭಿಕ ಕರಿಯರ್ ನಲ್ಲಿ ODI ನಲ್ಲಿ ಅವರ ಬ್ಯಾಟಿಂಗ್ ಶೈಲಿ ಪ್ರತಿಯೊಬ್ಬರಿಗೂ ರೋಮಾಂಚನಗೊಳಿಸಿತ್ತು. ಆದರೆ, ಪ್ರತಿ ಒಳ್ಳೆಯ ಸಂಗತಿಗೂ ಕೂಡ ಒಂದು ಅಂತ್ಯ ಇರುತ್ತದೆ ಹಾಗೂ ಇದು ಅತ್ಯದ್ಭುತವಾಗಿದೆ. ತಂಡದಲ್ಲಿ ವಿಕೆಟ್ ಕೀಪರ್ ಬರುವಿಕೆಗೆ ಹಾಗೂ ದೇಶದಲ್ಲಿ ತನ್ನದೇ ಆದ ಛಾಪು ಮೂಡಿ ಮೂಡಿಸಲು ಗುಣಮಟ್ಟ ನಿರ್ಧರಿಸಿದ್ದಾರೆ. ಅವರಲ್ಲಿದ್ದ ನೇತೃತ್ವ ಶೈಲಿ ತುಂಬಾ ಕಡಿಮೆ ಜನರಲ್ಲಿ ಇರುತ್ತದೆ. ಅವರದ್ದೊಂದು ಅದ್ಭುತ ಕರಿಯರ್. ನಾನು ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ" ಎಂದು ಗಂಗೂಲಿ ಹೇಳಿದ್ದಾರೆ.

2004ರಲ್ಲಿ ಮಾಹಿ ಏಕದಿನ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದರು. ಬಳಿಕ ಅವರು ವಿಶ್ವ ಕ್ರಿಕೆಟ್ ನಲ್ಲಿ ಎಲ್ಲರಿಗಿಂತ ಸಫಲ ನಾಯಕರಾಗಿ ಹೊರಹೊಮ್ಮಿದರು. ಅವರ ನೇತೃತ್ವದಲ್ಲಿ ಭಾರತ 2007ರ ಟಿ-20 ವಿಶ್ವ ಕಪ್ ನಲ್ಲಿ ಪಾಕಿಸ್ತಾನವನ್ನು ಸೋಲಿಸಿ ಚಾಂಪಿಯನ್ ಆಗಿ ಹೊರಹೊಮ್ಮಿತು. ಬಳಿಕ ನಾಲ್ಕು ವರ್ಷಗಳ ಬಳಿಕ 2011 ರ ಅವರು ಭಾರತಕ್ಕೆ ವಿಶ್ವಕಪ್ ತಂದು ಕೊಟ್ಟರು. ಇದಾದ ಎರಡು ವರ್ಷಗಳ ಬಳಿಕ ಧೋನಿ ನೇತೃತ್ವದಲ್ಲಿ ಭಾರತ ತಂಡ ಇಂಗ್ಲೆಂಡ್ ನಲ್ಲಿ ನಡೆದ ICC ಚಾಂಪಿಯನ್ಸ್ ಟ್ರೋಫಿ ತನ್ನದಾಗಿಸಿಕೊಂಡಿತ್ತು.

ಧೋನಿ ನಿವುರ್ತ್ತಿಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಸಿಸಿಐ ಸಚಿವ ಜಯ್ ಷಾ, "ಎಂ.ಎಸ್ ಧೋನಿ ಆಧುನಿಕ ಯುಗದ ಮಹಾನ್ ಕ್ರಿಕೆಟ್ ಆಟಗಾರರಲ್ಲಿ ಒಬ್ಬರು. ಇದೊಂದು ವೈಯಕ್ತಿಕ ನಿರ್ಣಯವಾಗಿದ್ದು, ಅವರ ನಿರ್ಣಯವನ್ನು ನಾವು ಗೌರವಿಸುತ್ತೇವೆ. ಮಾಹಿ ನಮ್ಮೆಲ್ಲರಿಗೂ ಪ್ರೀತಿಪಾತ್ರರು ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅವರ ವೃತ್ತಿ ಜೀವನ ಅಸಾಧಾರಣವಾಗಿತ್ತು" ಎಂದಿದ್ದಾರೆ 

"ಧೋನಿ ನಾಯಕತ್ವ ಎಂದಿಗೂ ಪ್ರೇರಣಾದಾಯಕ ಹಾಗೂ ಮೆಚ್ಚುಗೆಗೆ ಪಾತ್ರವಾಗಿತ್ತು. ಆಟಕ್ಕೆ ಪದಾರ್ಪಣೆ ಮಾಡಿದ ದಿನದಿಂದಲೂ ಕೂಡ ಅವರು ಆಟದಲ್ಲಿ ಶ್ರೀಮಂತಿಕೆಯನ್ನು ಸಾಧಿಸುತ್ತಲೇ ಹೋದರು. IPLಗಾಗಿ ಹಾಗೂ ಅವರ ಮುಂಧಿನ ಭವಿಷ್ಯಕ್ಕಾಗಿ ನಾನು ಶುಭಾಷಯಗಳನ್ನು ಕೋರುತ್ತೇನೆ " ಎಂದು ಜಯ್ ಷಾ ಹೇಳಿದ್ದಾರೆ.

ಓರ್ವ ನಾಯಕನಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ಕೀರ್ತಿ ಧೋನಿಗೆ ಸಲ್ಲುತ್ತದೆ. ಭಾರತೀಯ ಕ್ರಿಕೆಟ್ ತಂಡದ ನಾಯಕನಾಗಿ ಧೋನಿ ಒಟ್ಟು 332 ಪಂದ್ಯಗಳನ್ನು ಆಡಿದ್ದಾರೆ. ಭಾರತಕ್ಕಾಗಿ ಅವರು ಒಟ್ಟು 350 ODI, 90 ಟೆಸ್ಟ್ ಹಾಗೂ 98 T20 ಪಂದ್ಯಗಳನ್ನು ಆಡಿದ್ದಾರೆ.

Trending News