KL Rahul, LSG vs PBKS: ಲಕ್ನೋ ಸೂಪರ್ ಜೈಂಟ್ಸ್ ನಾಯಕ ಕೆಎಲ್ ರಾಹುಲ್ ಇಂದು ಶಾಕಿಂಗ್ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾರೆ. ಲಕ್ನೋದ ಭಾರತರತ್ನ ಶ್ರೀಅಟಲ್ ಬಿಹಾರಿ ವಾಜಪೇಯಿ ಏಕನಾ ಸ್ಟೇಡಿಯಂನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಲಕ್ನೋ ತಂಡ ಕಾದಾಟ ನಡೆಸುತ್ತಿದೆ. ಈ ಪಂದ್ಯ ಆರಂಭಕ್ಕೂ ಮುನ್ನ ನಡೆದ ಟಾಸ್’ಗೆ ರಾಹುಲ್ ಆಗಮಿಸಿರಲಿಲ್ಲ. ಈ ಬೆಳವಣಿಗೆ ಕಂಡ ಕ್ರಿಕೆಟ್ ಪ್ರಿಯರು ಶಾಕ್ ಆಗಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ನಿತ್ಯ ಈ ರಸವನ್ನು ನೀರಿಗೆ ಬೆರೆಸಿ ಕುಡಿಯಿರಿ: ಅಸಾಧ್ಯವೆನಿಸುವ ಹಠಮಾರಿ ಹೊಟ್ಟೆಯ ಬೊಜ್ಜು ಕರಗುತ್ತೆ


ರಾಹುಲ್ ಬದಲಿಗೆ, ವೆಸ್ಟ್ ಇಂಡೀಸ್‌’ನ ನಿಕೋಲಸ್ ಪೂರನ್ ತಂಡದ ನಾಯಕತ್ವ ವಹಿಸಿಕೊಂಡು, ಶಿಖರ್ ಧವನ್ ಅವರೊಂದಿಗೆ ಟಾಸ್ ಮಾಡಿದರು.


ರಾಹುಲ್ ಟಾಸ್‌’ಗೆ ಏಕೆ ಬರಲಿಲ್ಲ?


ಟಾಸ್ ಸಂದರ್ಭದಲ್ಲಿ ಲಕ್ನೋದ ಹಂಗಾಮಿ ನಾಯಕ ನಿಕೋಲಸ್ ಪುರನ್ ರಾಹುಲ್ ಬಗ್ಗೆ ಮಾಹಿತಿ ನೀಡಿದರು. ರಾಹುಲ್ ನಾಯಕತ್ವ ವಹಿಸುತ್ತಿಲ್ಲ, ಆದರೆ ಅವರು ಬ್ಯಾಟಿಂಗ್ ಮಾಡುತ್ತಾರೆ. ಅವರ ಜಾಗದಲ್ಲಿ ಮತ್ತೊಬ್ಬ ಆಟಗಾರ ಪ್ರಭಾವಿ ಆಟಗಾರನಾಗಿ ಫೀಲ್ಡಿಂಗ್ ಮಾಡಲಿದ್ದಾರೆ. ಅವರು ಇತ್ತೀಚೆಗೆಯಷ್ಟೇ ಗಾಯದಿಂದ ಚೇತರಿಸಿಕೊಂಡು ಕಂಬ್ಯಾಕ್ ಮಾಡಿದ್ದಾರೆ. ಅವರಿಗೆ ಕೊಂಚ ಒತ್ತಡ ಕಡಿಮೆ ಮಾಡುವ ಹಿನ್ನಲೆಯಲ್ಲಿ ತಂಡವು ಇಂತಹ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಪೂರನ್ ಹೇಳಿದ್ದಾರೆ.


ಇದನ್ನೂ ಓದಿ:  ಓದಿದ್ದು ಬಿಟೆಕ್… ಆಗಿದ್ದು ಕ್ರಿಕೆಟರ್! ಟೀಂ ಇಂಡಿಯಾದ ಟೆಸ್ಟ್ ಗೇಮ್ ಚೇಂಜರ್ ಈ ಸ್ಟಾರ್ ಬೌಲರ್: ಯಾರವರು ಅಂತ ಗೊತ್ತಾಯ್ತ?


ಟಾಸ್ ಗೆದ್ದ ನಿಕೋಲಸ್ ಪೂರನ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಬಳಿಕ ಆರಂಭಿಕರಾಗಿ ಕ್ವಿಂಟನ್ ಡಿ ಕಾಕ್ ಜೊತೆ ಆಗಮಿಸಿದ ರಾಹುಲ್, 9 ಎಸೆತಗಳಲ್ಲಿ 15 ರನ್ ಗಳಿಸಿದರು. ಈ ಸಂದರ್ಭದಲ್ಲಿ 1 ಬೌಂಡರಿ ಹಾಗೂ 1 ಸಿಕ್ಸರ್‌ ಬಾರಿಸಿದ ಅವರು, ಅರ್ಷದೀಪ್ ಸಿಂಗ್ ಬೌಲಿಂಗ್’ಗೆ ವಿಕೆಟ್ ಒಪ್ಪಿಸಿದ್ದಾರೆ.  


 


ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ