ನಿತ್ಯ ಈ ರಸವನ್ನು ನೀರಿಗೆ ಬೆರೆಸಿ ಕುಡಿಯಿರಿ: ಅಸಾಧ್ಯವೆನಿಸುವ ಹಠಮಾರಿ ಹೊಟ್ಟೆಯ ಬೊಜ್ಜು ಸುಲಭವಾಗಿ ಕರಗುತ್ತೆ!

Apple Cider Vinegar for Weight Loss: ಈ ಸಂಶೋಧನೆಯ ಸಂದರ್ಭದಲ್ಲಿ ಆ ಜನರಿಗೆ ಯೋಗ ಅಥವಾ ವ್ಯಾಯಾಮ ಮಾಡುವಂತೆ ಸೂಚಿಸಲಾಗಿಲ್ಲ, ತೂಕ ಇಳಿಕೆಗೆ ಸಂಬಂಧಿಸಿದ ಯಾವುದೇ ಔಷಧಿಯನ್ನೂ ಕೂಡ ನೀಡಿಲ್ಲ. ಆದರೂ ಅವರ ತೂಕ ಇಳಿಕೆಯಲ್ಲಿ ಬದಲಾವಣೆ ಕಂಡುಬಂದಿದೆ.

Written by - Bhavishya Shetty | Last Updated : Mar 30, 2024, 09:22 PM IST
    • ಆಪಲ್ ಸೈಡರ್ ವಿನೆಗರ್ ತೂಕ ನಷ್ಟಕ್ಕೆ ತುಂಬಾ ಪರಿಣಾಮಕಾರಿ
    • ಈ ಅಧ್ಯಯನವನ್ನು ಮಾರ್ಚ್ 12 ರಂದು BMJ ನ್ಯೂಟ್ರಿಷನ್‌’ನಲ್ಲಿ ಪ್ರಕಟಿಸಲಾಗಿದೆ
    • ಆಪಲ್ ಸೈಡರ್ ವಿನೆಗರ್ ಬಳಕೆಗೂ ಮುನ್ನ ಇದನ್ನು ನೆನಪಿನಲ್ಲಿಟ್ಟುಕೊಳ್ಳಿ
ನಿತ್ಯ ಈ ರಸವನ್ನು ನೀರಿಗೆ ಬೆರೆಸಿ ಕುಡಿಯಿರಿ: ಅಸಾಧ್ಯವೆನಿಸುವ ಹಠಮಾರಿ ಹೊಟ್ಟೆಯ ಬೊಜ್ಜು ಸುಲಭವಾಗಿ ಕರಗುತ್ತೆ!  title=
Apple Cider Vinegar for Weight Loss

Apple Cider Vinegar for Weight Loss: "ತೂಕ ನಷ್ಟ" ಎಂಬುದು ಇಂಟರ್ನೆಟ್‌’ನಲ್ಲಿ ಹುಡುಕಲಾದ ಅತ್ಯಂತ ಜನಪ್ರಿಯ ಕೀವರ್ಡ್‌’ಗಳಲ್ಲಿ ಒಂದಾಗಿದೆ. ಬೊಜ್ಜು ಎಂಬುದು ಇತ್ತೀಚಿನ ದಿನಗಳಲ್ಲಿ ಜನರ ದೊಡ್ಡ ಆರೋಗ್ಯ ಸಮಸ್ಯೆಗಳಲ್ಲಿ ಒಂದಾಗಿದೆ. ಇದಕ್ಕಾಗಿ, ಅನೇಕ ಜನರು ಯೋಗ, ಔಷಧಿಗಳಂತಹ ವಿವಿಧ ಕ್ರಮಗಳನ್ನು ಅಳವಡಿಸಿಕೊಳ್ಳುತ್ತಾರೆ.

ಆದರೆ ಆಪಲ್ ಸೈಡರ್ ವಿನೆಗರ್ ತೂಕ ನಷ್ಟಕ್ಕೆ ತುಂಬಾ ಪರಿಣಾಮಕಾರಿ ಎಂಬುದು ನಿಮಗೆ ತಿಳಿದಿದೆಯೇ? ಈ ಬಗ್ಗೆ ಸಂಶೋಧನೆಯೊಂದು ಮಹತ್ವದ ಮಾಹಿತಿಯನ್ನು ನೀಡಿದೆ.

ಇದನ್ನೂ ಓದಿ: RCB ವಿರುದ್ಧ ಅಬ್ಬರಿಸಿದ ಖುಷಿಗೆ ಸ್ಟೇಡಿಯಂನಲ್ಲೇ ಪ್ರೇಯಸಿಗೆ ಕಿಸ್ ಕೊಟ್ಟ ವೆಂಕಟೇಶ್ ಅಯ್ಯರ್! ಆ ಸುಂದರಿ ಯಾರು ಗೊತ್ತಾ?

ಈ ಸಂಶೋಧನೆಯ ಸಂದರ್ಭದಲ್ಲಿ ಆ ಜನರಿಗೆ ಯೋಗ ಅಥವಾ ವ್ಯಾಯಾಮ ಮಾಡುವಂತೆ ಸೂಚಿಸಲಾಗಿಲ್ಲ, ತೂಕ ಇಳಿಕೆಗೆ ಸಂಬಂಧಿಸಿದ ಯಾವುದೇ ಔಷಧಿಯನ್ನೂ ಕೂಡ ನೀಡಿಲ್ಲ. ಆದರೂ ಅವರ ತೂಕ ಇಳಿಕೆಯಲ್ಲಿ ಬದಲಾವಣೆ ಕಂಡುಬಂದಿದೆ.

ಈ ಅಧ್ಯಯನವನ್ನು ಮಾರ್ಚ್ 12 ರಂದು BMJ ನ್ಯೂಟ್ರಿಷನ್‌’ನಲ್ಲಿ ಪ್ರಕಟಿಸಲಾಗಿದೆ. ಬೊಜ್ಜು ಅಥವಾ ಅಧಿಕ ತೂಕದಿಂದ ಬಳಲುತ್ತಿರುವ ಲೆಬನಾನ್‌’ನ 120 ಜನರ ಮೇಲೆ ಈ ಅಧ್ಯಯನವನ್ನು ಮಾಡಲಾಗಿದೆ. ವಯಸ್ಸು 12 ರಿಂದ 25 ವರ್ಷಗಳು ಮತ್ತು ಅವರಲ್ಲಿ ಸುಮಾರು ಮಂದಿ ಮಹಿಳೆಯರು. ವಿಶೇಷವೆಂದರೆ ಈ ಸಂಶೋಧನೆ ನಡೆಸಿದವರು ಯಾವುದೇ ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರಲಿಲ್ಲ. ಜೊತೆಗೆ ಪ್ರತಿಯೊಬ್ಬರೂ ಸಾಮಾನ್ಯ ಆಹಾರವನ್ನು ತೆಗೆದುಕೊಂಡಿದ್ದರು.

ಈ ಸಂಶೋಧನೆಯು 12 ವಾರಗಳವರೆಗೆ ನಡೆದಿತ್ತು. ಈ ಸಂದರ್ಭದಲ್ಲಿ ಪ್ರತಿ ವ್ಯಕ್ತಿಗೆ ಖಾಲಿ ಹೊಟ್ಟೆಯಲ್ಲಿ ಆಪಲ್ ಸೈಡರ್ ವಿನೆಗರ್ ಬೆರೆಸಿದ ಒಂದು ಕಪ್ ನೀರನ್ನು ನೀಡಲಾಗಿದೆ. ವಿಶೇಷವೆಂದರೆ ನೀರಿನಲ್ಲಿ ಏನು ನೀಡಲಾಗುತ್ತಿದೆ ಎಂಬುದು ಸಹ ಅವರಿಗೆ ತಿಳಿದಿರಲಿಲ್ಲ. ಒಟ್ಟು ಜನರನ್ನು ಮೂರು ಗುಂಪುಗಳಾಗಿ ವಿಂಗಡಿಸಿ, ಅದರಲ್ಲಿ ಗ್ರೂಪ್ 1 ಗೆ ಪ್ರತಿದಿನ 5 ಎಂಎಲ್, ಗ್ರೂಪ್ 2ಗೆ 10 ಎಂಎಲ್ ಮತ್ತು ಗ್ರೂಪ್ 3 ಗೆ ಪ್ರತಿದಿನ 15 ಎಂಎಲ್ ನೀಡಲಾಯಿತು.

12 ವಾರಗಳ ನಂತರ ತೂಕವನ್ನು ಗಮನಿಸಿದಾಗ, ಗುಂಪು 1 ರ ಜನರ ನಡುವೆ ಸುಮಾರು 5 ಕೆಜಿ ಮತ್ತು ಗುಂಪು 2 ಮತ್ತು 3 ರ ಜನರ ನಡುವೆ 7 ಕೆಜಿಯಷ್ಟು ವ್ಯತ್ಯಾಸ ಕಂಡುಬಂದಿತ್ತು. ಈ ಮೂಲಕ ತೂಕ ನಷ್ಟಕ್ಕೆ ಆಪಲ್ ಸೈಡರ್ ವಿನೆಗರ್ ಉತ್ತಮ ಎಂಬುದು ತಿಳಿದುಬಂದಿದೆ.

ಆಪಲ್ ಸೈಡರ್ ವಿನೆಗರ್ ಬಳಕೆಗೂ ಮುನ್ನ ಇದನ್ನು ನೆನಪಿನಲ್ಲಿಟ್ಟುಕೊಳ್ಳಿ:

ಈ ಸಂಶೋಧನೆಯ ಆಧಾರದ ಮೇಲೆ, ತೂಕ ಇಳಿಸಿಕೊಳ್ಳಲು ಆಪಲ್ ಸೈಡರ್ ವಿನೆಗರ್ ಅನ್ನು ಬಳಕೆ ಮಾಡಬಹುದು. ಆದರೆ ಈ ವಿನೆಗರ್ ತುಂಬಾ ಆಮ್ಲೀಯ. ಇದನ್ನು ಯಾವಾಗಲೂ ನೀರಿಗೆ ಬೆರೆಸಿಯೇ ಕುಡಿಯಿರಿ. ಒಂದು ಚಮಚ ಆಪಲ್ ಸೈಡರ್ ವಿನೆಗರ್ ಅನ್ನು ಒಂದು ಲೋಟ ನೀರಿನಲ್ಲಿ ಬೆರೆಸಿ ಕುಡಿಯಬಹುದು. ಇನ್ನೊಂದು ವಿಚಾರವೆಂದರೆ ಆಪಲ್ ಸೈಡರ್ ವಿನೆಗರ್ ಹಲ್ಲುಗಳಿಗೆ ಹಾನಿಕಾರ. ಅದನ್ನು ಕುಡಿದ ನಂತರ, ತಕ್ಷಣವೇ ಬಾಯಿಯನ್ನು ನೀರಿನಿಂದ ಚೆನ್ನಾಗಿ ತೊಳೆಯಿರಿ.

ಇದನ್ನೂ ಓದಿ: ಸಂದರ್ಶನಕ್ಕೆ ಬಂದ ನಿರೂಪಕಿಯ ಅಂದಕ್ಕೆ ಫಿದಾ ಆಗಿ ಆಕೆಯನ್ನೇ ಮದ್ವೆಯಾದ ಟೀಂ ಇಂಡಿಯಾದ ಫಾಸ್ಟ್ ಬೌಲರ್ ಈತ!

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee News Kannada ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.)

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News