Umesh Yadav: ಮಹಿಳಾ ದಿನದಂದೇ ಹೆಣ್ಣು ಮಗುವಿಗೆ ತಂದೆಯಾದ ಟೀಂ ಇಂಡಿಯಾದ ಸ್ಟಾರ್ ಆಲ್’ರೌಂಡರ್!
Umesh Yadav: ಉಮೇಶ್ ಯಾದವ್ ಪತ್ನಿ ತಾನ್ಯಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಉಮೇಶ್ ಯಾದವ್ ಸಾಮಾಜಿಕ ಜಾಲತಾಣಗಳ ಮೂಲಕ ಕ್ರಿಕೆಟ್ ಅಭಿಮಾನಿಗಳಿಗೆ ಈ ಸಿಹಿ ಮಾಹಿತಿ ನೀಡಿದ್ದಾರೆ. ಇತ್ತೀಚಿಗೆ ಉಮೇಶ್ ಯಾದವ್ ಅವರ ತಂದೆಯ ಸಾವಿನಿಂದ ದುಃಖಿತರಾಗಿದ್ದರು. ಆದರೆ ಈಗ ಅವರ ಮನೆಗೆ ಪುಟ್ಟ ದೇವತೆ ಆಗಮಿಸಿದ್ದು, ನೋವು ಕಳೆಯುವಂತಾಗಿದೆ.
Umesh Yadav: ಟೀಂ ಇಂಡಿಯಾದ ವೇಗದ ಬೌಲರ್ ಉಮೇಶ್ ಯಾದವ್ ಅವರಿಗೆ ಹೋಳಿ ಹಬ್ಬದ ದಿನ ಬಹಳ ವಿಶೇಷವಾಗಿದೆ. ಮಾರ್ಚ್ 8 ರ ಈ ದಿನಾಂಕವನ್ನು ಮಹಿಳಾ ದಿನಾಚರಣೆ ಎಂದು ಆಚರಣೆ ಮಾಡುತ್ತೇವೆ. ಇಂತಹ ಸಂದರ್ಭದಲ್ಲಿಯೇ ಉಮೇಶ್ ಯಾದವ್ ಮನೆಗೆ ಹೆಣ್ಣು ಮಗುವೊಂದು ಕಾಲಿಟ್ಟಿದೆ.
ಇದನ್ನೂ ಓದಿ: ಟೆಸ್ಟ್ ಪಂದ್ಯದ ಮಧ್ಯೆ ಪತ್ನಿ ಜೊತೆ ಭರ್ಜರಿಯಾಗಿ ಹೋಳಿ ಆಡಿದ ಟೀಂ ಇಂಡಿಯಾದ ಈ ಸ್ಟಾರ್ ಬೌಲರ್: ಫೋಟೋ ನೋಡಿ
ಉಮೇಶ್ ಯಾದವ್ ಪತ್ನಿ ತಾನ್ಯಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಉಮೇಶ್ ಯಾದವ್ ಸಾಮಾಜಿಕ ಜಾಲತಾಣಗಳ ಮೂಲಕ ಕ್ರಿಕೆಟ್ ಅಭಿಮಾನಿಗಳಿಗೆ ಈ ಸಿಹಿ ಮಾಹಿತಿ ನೀಡಿದ್ದಾರೆ. ಇತ್ತೀಚಿಗೆ ಉಮೇಶ್ ಯಾದವ್ ಅವರ ತಂದೆಯ ಸಾವಿನಿಂದ ದುಃಖಿತರಾಗಿದ್ದರು. ಆದರೆ ಈಗ ಅವರ ಮನೆಗೆ ಪುಟ್ಟ ದೇವತೆ ಆಗಮಿಸಿದ್ದು, ನೋವು ಕಳೆಯುವಂತಾಗಿದೆ.
ಉಮೇಶ್ ಯಾದವ್ ಮತ್ತು ತಾನ್ಯಾ 2013 ರಲ್ಲಿ ವಿವಾಹವಾಗಿದ್ದರು. 2021ರಲ್ಲಿಯೂ ಉಮೇಶ್ ಮೊದಲ ಮಗುವಿಗೆ ತಂದೆಯಾದರು. ಇದೀಗ ಮನೆಗೆ ಪುಟ್ಟ ದೇವತೆಯೊಬ್ಬಳು ಬಂದಿದ್ದು, ಕುಟುಂಬಸ್ಥರ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ.
ಉಮೇಶ್ ಯಾದವ್ ಸೇರಿದಂತೆ ಟೀಮ್ ಇಂಡಿಯಾದ ಅನೇಕ ಸ್ಟಾರ್ ಆಟಗಾರರ ಮನೆಯಲ್ಲಿ ಲಕ್ಷ್ಮೀ (ಹೆಣ್ಣು ಮಗು) ಈಗಾಗಲೇ ಜನಿಸಿದ್ದಾಳೆ ಎನ್ನಬಹುದು. ಎಂಎಸ್ ಧೋನಿ, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ, ರವೀಂದ್ರ ಜಡೇಜಾ ಇವರೆಲ್ಲರೂ ಸಹ ಹೆಣ್ಣು ಮಗುವಿನ ಪೋಷಕರು. ಇದೀಗ ಆ ಪಟ್ಟಿಗೆ ಉಮೇಶ್ ಯಾದವ್ ಕೂಡ ಸೇರ್ಪಡೆಯಾಗಿದ್ದಾರೆ.
ಇದನ್ನೂ ಓದಿ: MS Dhoni: ಎಂಎಸ್ ಧೋನಿ ಇನ್’ಸ್ಟಾಗ್ರಾಂನಲ್ಲಿ ಫಾಲೋ ಮಾಡೋದು ಈ 4 ಜನರನ್ನು ಮಾತ್ರ… ಅವರು ಯಾರಂದ್ರೆ..!
ಉಮೇಶ್ ಯಾದವ್ ಬಗ್ಗೆ ಮಾತನಾಡುವುದಾದರೆ, ಈ ಆಟಗಾರ ಇಂದೋರ್ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾದ ಪ್ಲೇಯಿಂಗ್ XI ನಲ್ಲಿ ಸ್ಥಾನ ಪಡೆದಿದ್ದರು. ಯಾದವ್ ಮೊದಲ ಇನ್ನಿಂಗ್ಸ್‌ನಲ್ಲಿ 3 ವಿಕೆಟ್ ಪಡೆಯುವ ಮೂಲಕ ಭಾರತ ತಂಡವನ್ನು ಗೆಲುವಿನ ಹಾದಿಗೆ ತಂದು ನಿಲ್ಲಿಸಿದ್ದರು. ಆದರೆ ಅಂತಿಮವಾಗಿ ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ಗೆದ್ದಿತು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.