Astro Tips: ಈ ಹಿಟ್ಟಿನಿಂದ ತಯಾರಿಸಿದ ಹಣತೆಯಲ್ಲಿ ದೀಪ ಬೆಳಗಿದರೆ ಇಷ್ಟಾರ್ಥಗಳು ಒಂದೇ ದಿನದಲ್ಲೇ ಈಡೇರುತ್ತವೆ…!

Flour Deepam Astro Tips: ಜ್ಯೋತಿಷ್ಯದಲ್ಲಿ, ಹಿಟ್ಟಿನ ದೀಪವನ್ನು ಶುದ್ಧ ಮತ್ತು ಪವಿತ್ರವೆಂದು ಪರಿಗಣಿಸಲಾಗುತ್ತದೆ. ದೇವರ ಮುಂದೆ ಹಿಟ್ಟಿನ ದೀಪವನ್ನು ಬೆಳಗಿಸುವುದರಿಂದ ವ್ಯಕ್ತಿಯ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ ಎಂದು ಹೇಳಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿನ ಪ್ರತಿಯೊಂದು ಸಮಸ್ಯೆಗೆ ಹಿಟ್ಟಿನಿಂದ ಮಾಡಿದ ದೀಪವನ್ನು ಬೆಳಗಿಸಬೇಕು.

Written by - Bhavishya Shetty | Last Updated : Mar 8, 2023, 10:47 PM IST
    • ಧನಾತ್ಮಕವಾಗಿಸಲು ಪೂಜೆಯ ಸಮಯದಲ್ಲಿ ದೀಪಗಳನ್ನು ಬೆಳಗಿಸಲಾಗುತ್ತದೆ.
    • ಸಾಮಾನ್ಯವಾಗಿ ಜನರು ಹಿತ್ತಾಳೆ, ಉಕ್ಕು ಅಥವಾ ಮಣ್ಣಿನ ದೀಪಗಳನ್ನು ಬಳಸುತ್ತಾರೆ.
    • ಆದರೆ ಜ್ಯೋತಿಷ್ಯದಲ್ಲಿ ಹಿಟ್ಟಿನ ದೀಪದ ವಿಶೇಷ ಮಹತ್ವವನ್ನು ಹೇಳಲಾಗಿದೆ.
Astro Tips: ಈ ಹಿಟ್ಟಿನಿಂದ ತಯಾರಿಸಿದ ಹಣತೆಯಲ್ಲಿ ದೀಪ ಬೆಳಗಿದರೆ ಇಷ್ಟಾರ್ಥಗಳು ಒಂದೇ ದಿನದಲ್ಲೇ ಈಡೇರುತ್ತವೆ…! title=
Flour Lamp

Flour Deepam Astro Tips: ಹಿಂದೂ ಧರ್ಮದಲ್ಲಿ ದೇವಾನುದೇವತೆಗಳ ಆರಾಧನೆಗೆ ವಿಶೇಷ ಮಹತ್ವವಿದೆ. ಅವರ ಆಶೀರ್ವಾದ ಪಡೆಯಲು ಮತ್ತು ವಾತಾವರಣವನ್ನು ಧನಾತ್ಮಕವಾಗಿಸಲು ಪೂಜೆಯ ಸಮಯದಲ್ಲಿ ದೀಪಗಳನ್ನು ಬೆಳಗಿಸಲಾಗುತ್ತದೆ. ಸಾಮಾನ್ಯವಾಗಿ ಜನರು ಹಿತ್ತಾಳೆ, ಉಕ್ಕು ಅಥವಾ ಮಣ್ಣಿನ ದೀಪಗಳನ್ನು ಬಳಸುತ್ತಾರೆ. ಆದರೆ ಜ್ಯೋತಿಷ್ಯದಲ್ಲಿ ಹಿಟ್ಟಿನ ದೀಪದ ವಿಶೇಷ ಮಹತ್ವವನ್ನು ಹೇಳಲಾಗಿದೆ.

ಜ್ಯೋತಿಷ್ಯದಲ್ಲಿ, ಹಿಟ್ಟಿನ ದೀಪವನ್ನು ಶುದ್ಧ ಮತ್ತು ಪವಿತ್ರವೆಂದು ಪರಿಗಣಿಸಲಾಗುತ್ತದೆ. ದೇವರ ಮುಂದೆ ಹಿಟ್ಟಿನ ದೀಪವನ್ನು ಬೆಳಗಿಸುವುದರಿಂದ ವ್ಯಕ್ತಿಯ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ ಎಂದು ಹೇಳಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿನ ಪ್ರತಿಯೊಂದು ಸಮಸ್ಯೆಗೆ ಹಿಟ್ಟಿನಿಂದ ಮಾಡಿದ ದೀಪವನ್ನು ಬೆಳಗಿಸಬೇಕು. ಅದರ ಪರಿಣಾಮವು ತ್ವರಿತವಾಗಿ ಗೋಚರಿಸುತ್ತದೆ. ಅಲ್ಲದೆ, ಇದು ಸಮಸ್ಯೆಯನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: Mars transit 2023 : ಈ ನಾಲ್ಕು ರಾಶಿಯವರಿಗೆ 69 ದಿನಗಳ ಕಾಲ ಹಣದ ಮಳೆ ಸುರಿಯುತ್ತದೆ..! 

ಯಾವ ಸಮಸ್ಯೆಗೆ ಯಾವ ದೀಪ ಹಚ್ಚಬೇಕು?

ಗೋಧಿ ಹಿಟ್ಟಿನ ದೀಪ: ನೀವು ಯಾವುದಾದರು ವಿವಾದದಲ್ಲಿ ಸಿಲುಕಿಕೊಂಡಿದ್ದರೆ, ಅದರಿಂದ ಮುಕ್ತಿ ಪಡೆಯಲು ಗೋಧಿ ಹಿಟ್ಟಿನ ದೀಪವನ್ನು ತಯಾರಿಸಿ, ದೇವಸ್ಥಾನದಲ್ಲಿ ಬೆಳಗಿಸಿ.

ಉದ್ದಿನ ಹಿಟ್ಟು ದೀಪ: ನೀವು ಶತ್ರು ದಾಳಿಯಿಂದ ಗೆಲ್ಲಲು ಬಯಸಿದರೆ, ಉದ್ದಿನ ಹಿಟ್ಟಿನಿಂದ ಮಾಡಿದ ದೀಪವನ್ನು ಬೆಳಗಿಸಿ., ಈ ಮೂಲಕ ನಿಮಗೆ ವಿಶೇಷ ಲಾಭಗಳು ದೊರೆಯುತ್ತವೆ.

ಹೆಸರು ಬೇಳೆ ಹಿಟ್ಟಿನ ದೀಪ: ಮನೆಯಲ್ಲಿ ಭಿನ್ನಾಭಿಪ್ರಾಯ, ಘರ್ಷಣೆ ಇದ್ದರೆ, ಅದನ್ನು ನಿವಾರಿಸಿ ಶಾಂತಿಯನ್ನು ಕಾಪಾಡಿಕೊಳ್ಳಲು ಬಯಸಿದರೆ, ಇದಕ್ಕಾಗಿ ಹೆಸರು ಬೇಳೆ ಹಿಟ್ಟಿನಿಂದ ಮಾಡಿದ ದೀಪವನ್ನು ಬೆಳಗಿಸಬೇಕೆಂದು ಜ್ಯೋತಿಷ್ಯದಲ್ಲಿ ಉಲ್ಲೇಖಿಸಲಾಗಿದೆ. ಇದರಿಂದ ಮನೆಯಲ್ಲಿ ನೆಮ್ಮದಿಯ ವಾತಾವರಣ ಇರುತ್ತದೆ.

ದೀಪವನ್ನು ಬೆಳಗಿಸುವಾಗ ಈ ನಿಯಮಗಳನ್ನು ಪಾಲಿಸಿ:

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹಿಟ್ಟಿನ ದೀಪವನ್ನು 11 ದಿನ, 21 ದಿನ ಮತ್ತು 31 ದಿನಗಳ ಕ್ರಮದಲ್ಲಿ ಬೆಳಗಿಸಲಾಗುತ್ತದೆ. 1 ದೀಪದಿಂದ ಪ್ರಾರಂಭಿಸಿ, 11 ದೀಪಗಳನ್ನು ಬೆಳಗಿಸಲಾಗುತ್ತದೆ. ಪ್ರತಿದಿನ ಒಂದೊಂದು ದೀಪವನ್ನು ಹೆಚ್ಚಿಸಿ 11 ರವರೆಗೆ ಬೆಳಗಿಸಿ, ನಂತರ ಒಂದೊಂದಾಗಿ ಇಳಿಸಿ. ಈ ಮೂಲಕ 21 ದಿನ ಪೂರ್ಣವಾಗುತ್ತದೆ.

ಇದನ್ನೂ ಓದಿ: Chanakya Niti : ಮನೆಯಲ್ಲಿ ಲಕ್ಷ್ಮಿದೇವಿ ನೆಲಸಲು ಅನುಸರಿಸಿ ಚಾಣಕ್ಯನ ಈ ನೀತಿಗಳನ್ನು!

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News