Indian Cricketers Tilak Controversy: ಭಾರತೀಯ ಕ್ರಿಕೆಟಿಗರಾದ ಮೊಹಮ್ಮದ್ ಸಿರಾಜ್ ಮತ್ತು ಉಮ್ರಾನ್ ಮಲಿಕ್ ತಮ್ಮ ಹಣೆಯ ಮೇಲೆ ತಿಲಕ ಇಡುವುದನ್ನು ನಿರಾಕರಿಸಿದ್ದಾರೆ ಎಂದು ಸದ್ಯ ಭಾರೀ ಚರ್ಚೆಯಲ್ಲಿದ್ದಾರೆ. ಕ್ರಿಕೆಟ್ ಅಭಿಮಾನಿಗಳ ಗುಂಪು ವಿಂಗಡಣೆಡಯಾಗಿ ಒಂದು ಗುಂಪು ಅವರು ಮಾಡಿದ್ದು ಸರಿ ಎಂದರೆ, ಇನ್ನೊಂದು ತಂಡ ಹಾಗೆ ಮಾಡಬಾರದಿತ್ತು ಎಂದಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: IND vs PAK: 17 ವರ್ಷಗಳ ಬಳಿಕ ಪಾಕಿಸ್ತಾನಕ್ಕೆ ತೆರಳಲಿದೆ ಟೀಂ ಇಂಡಿಯಾ? ಬಹ್ರೇನ್ ನಿಂದ ಬರಲಿದೆ ಅಂತಿಮ ನಿರ್ಧಾರ


ಭಾರತೀಯ ತಂಡವು ಹೋಟೆಲ್‌ಗೆ ಭೇಟಿ ನೀಡುತ್ತಿರುವ ವೀಡಿಯೊ ಇಂಟರ್ನೆಟ್‌ನಲ್ಲಿ ವೈರಲ್ ಆಗಿದೆ. ಈ ಸಂದರ್ಭದಲ್ಲಿ ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್ ಮತ್ತು ಇನ್ನಿಬ್ಬರು ಆಟಗಾರರು ತಮ್ಮ ಹಣೆಯ ಮೇಲೆ ತಿಲಕವನ್ನು ಹಾಕದಂತೆ ಹೋಟೆಲ್ ಸಿಬ್ಬಂದಿಗೆ ವಿನಂತಿಸುತ್ತಿರುವುದನ್ನು ಕಾಣಬಹುದು. ಈ ದೃಶ್ಯ ಅಂತರ್ಜಾಲದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು “ಹಾಗೆ ಮಾಡಬಾರದಿತ್ತು. ತಿಲಕ ಭಾರತದಲ್ಲಿ ಹಿಂದೂ ಸಂಪ್ರದಾಯದ ಒಂದು ಭಾಗವಾಗಿದೆ. ಅತಿಥಿಗಳನ್ನು ಸ್ವಾಗತಿಸಲು ಹಚ್ಚಲಾಗುತ್ತದೆ” ಎಂದು ಹೇಳಿದ್ದಾರೆ.


ಆದರೆ ಇನ್ನೊಂದು ಗುಂಪು ಅವರು ಮಾಡಿದ್ದು ಸರಿ, ತಮ್ಮ ಧರ್ಮದ ಅನುಸಾರವಾಗಿ ನಡೆದುಕೊಂಡಿದ್ದಾರೆ ಎಂದು ಹೇಳುತ್ತಿದ್ದಾರೆ. ಆದರೆ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್ ಮತ್ತು ಸಹಾಯಕ ಸಿಬ್ಬಂದಿ ಸಹ ತಿಲಕ ಇಡುವುದನ್ನು ಏಕೆ ನಿರಾಕರಿಸಿದ್ದಾರೆ ಎಂದು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.


ಸಿರಾಜ್, ಉಮ್ರಾನ್ ಮತ್ತು ರಾಥೋರ್ ತಿಲಕವನ್ನು ನಿರಾಕರಿಸುತ್ತಿರುವುದನ್ನು ವಿಡಿಯೋ:


India Cricket: ಟೀಂ ಇಂಡಿಯಾದ ಈ ಸೂಪರ್ಸ್ಟಾರ್ ಟೆಸ್ಟ್ ಪದಾರ್ಪಣೆ ಖಚಿತ: ಆಸೀಸ್ ಉಡೀಸ್ ಆಗೋದು ಕನ್ಫರ್ಮ್!


ನಾಗ್ಪುರದಲ್ಲಿ ನಡೆಯಲಿರುವ ಮೊದಲನೇ ಟೆಸ್ಟ್ ಗಾಗಿ ಸಿರಾಜ್ ಪ್ಲೇಯಿಂಗ್ ಇಲೆವೆನ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜೊತೆಗ ಇಡೀ ಸರಣಿಯಲ್ಲಿ ಭಾರತಕ್ಕೆ ಪ್ರಮುಖ ಪಾತ್ರ ವಹಿಸಲಿದ್ದಾರೆ. ಜಸ್ಪ್ರೀತ್ ಬುಮ್ರಾ ಕನಿಷ್ಠ ಮೊದಲ ಎರಡು ಟೆಸ್ಟ್‌ಗಳಿಗೆ ಲಭ್ಯವಿಲ್ಲದ ಕಾರಣ, ಸಿರಾಜ್‌ಗೆ ಆ ಸ್ಥಾನವನ್ನು ತುಂಬಲಿದ್ದಾರೆ. ಇನ್ನು, ಮೊಹಮ್ಮದ್ ಶಮಿ ಅವರ ಹೆಗಲ ಮೇಲೆ ಹೆಚ್ಚುವರಿ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕಾಗುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ