Indian Players: ಏಕದಿನ ಪಂದ್ಯಗಳಲ್ಲಿ ಎಂದಿಗೂ ಔಟ್ ಆಗದ ಮೂರು ಭಾರತೀಯ ಬ್ಯಾಟ್ಸ್ಮನ್ಗಳಿವರು
ಭಾರತೀಯ ಕ್ರಿಕೆಟ್ ತಂಡದಲ್ಲಿ ಅನೇಕ ಆಟಗಾರರು ಪ್ರವೇಶ ಪಡೆಯುತ್ತಾರೆ. ಆದರೆ ಕೆಲವೇ ಆಟಗಾರರಷ್ಟೇ ಉತ್ತಮ ಅವಕಾಶಗಳನ್ನು ಪಡೆಯುತ್ತಾ ಮುಂದುವರೆಯುತ್ತಾರೆ. ಆದರೆ ಕೆಲವು ಆಟಗಾರರು ತಮ್ಮ ಉತ್ತಮ ಪ್ರದರ್ಶನದ ಹೊರತಾಗಿಯೂ ತಂಡದಿಂದ ಹೊರಗುಳಿಯುತ್ತಾರೆ.
ನವದೆಹಲಿ: ಕ್ರಿಕೆಟ್ ಇತಿಹಾಸದಲ್ಲಿ ಉತ್ತಮ ರನ್ ಕಲೆಹಾಕಿರುವ ಮತ್ತು ಶತಕಗಳಿಸಿರುವ ಹಲವು ಬ್ಯಾಟ್ಸ್‌ಮನ್‌ಗಳು ಇದ್ದಾರೆ. ಇದಲ್ಲದೆ ತಮ್ಮ ಏಕದಿನ ವೃತ್ತಿಜೀವನದಲ್ಲಿ ಎಂದಿಗೂ ಔಟ್ ಆಗದ ಕೆಲವು ಅದೃಷ್ಟ ಬ್ಯಾಟ್ಸ್‌ಮನ್‌ಗಳು ಇದ್ದಾರೆ ಎಂಬುದು ನಿಮಗೆ ತಿಳಿದಿದೆಯೇ? ಏಕದಿನ ಪಂದ್ಯಗಳಲ್ಲಿ ಎಂದಿಗೂ ಔಟ್ ಆಗದ ಮೂರು ಭಾರತೀಯ ಬ್ಯಾಟ್ಸ್‌ಮನ್‌ಗಳಿದ್ದಾರೆ. ವಿಪರ್ಯಾಸವೆಂದರೆ ಈಗ ಅವರು ಟೀಂ ಇಂಡಿಯಾದಿಂದ (Team India) ಹೊರಗುಳಿದಿದ್ದಾರೆ. ಅಂತಹ ಮೂವರು ಭಾರತೀಯ ಬ್ಯಾಟ್ಸ್‌ಮನ್‌ಗಳ ಬಗ್ಗೆ ತಿಳಿಯೋಣ:
ಸೌರಭ್ ತಿವಾರಿ (Saurabh Tiwari):
ಸೌರಭ್ ತಿವಾರಿ (Saurabh Tiwari) ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟಾಗ ಅವರನ್ನು ಧೋನಿಯ ನಕಲು ಎಂದು ಕರೆಯಲಾಯಿತು. ಸೌರಭ್ ತಿವಾರಿ ಅವರ ಉದ್ದನೆಯ ಕೂದಲನ್ನು ನೋಡಿ ಜನರು ಅವನನ್ನು ಎಂ.ಎಸ್. ಧೋನಿ (MS Dhoni) ಯೊಂದಿಗೆ ಹೋಲಿಸುತ್ತಿದ್ದರು. ಸೌರಭ್ ತಿವಾರಿ ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದರು. ಸೌರಭ್ ತಿವಾರಿ 2010 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಏಕದಿನ ಪಂದ್ಯಕ್ಕೆ ಪದಾರ್ಪಣೆ ಮಾಡಿದರು. ಅವರು ಟೀಮ್ ಇಂಡಿಯಾ ಪರ ಕೇವಲ ಮೂರು ಏಕದಿನ ಪಂದ್ಯಗಳನ್ನು ಆಡಿದ್ದು, ಇದರಲ್ಲಿ ಕೇವಲ ಎರಡು ಇನ್ನಿಂಗ್ಸ್‌ಗಳಲ್ಲಿ ಮಾತ್ರ ಬ್ಯಾಟಿಂಗ್ ಮಾಡಲು ಅವಕಾಶ ಪಡೆದಿದ್ದರು. ಈ ಎರಡೂ ಇನ್ನಿಂಗ್ಸ್‌ಗಳಲ್ಲಿ ಸೌರಭ್ ತಿವಾರಿ ಔಟಾಗದೆ ಉಳಿದಿದ್ದರು.
ಧೋನಿಯ ತಂದೆಗೆ ಮನೆಯಲ್ಲಿ ಕ್ರಿಕೆಟ್ ಬಗ್ಗೆ ಮಾತನಾಡುವುದೂ ಇಷ್ಟವಿಲ್ಲ
ಫೈಜ್ ಫಜಲ್ (Faiz Fazal):
ದೇಶೀಯ ಕ್ರಿಕೆಟ್‌ನಲ್ಲಿ ಫೈಜ್ ಫಜಲ್ (Faiz Fazal) ಅವರ ಸಾಧನೆಯಿಂದ ಎಲ್ಲರ ಗಮನ ಸೆಳೆದರು ಮತ್ತು ಅವರಿಗೆ ಟೀಮ್ ಇಂಡಿಯಾದಲ್ಲಿಯೂ ಅವಕಾಶ ದೊರಕಿತು. ಆದರೆ ಈ ಆಟಗಾರ ಟೀಮ್ ಇಂಡಿಯಾ (Team India) ಪರ ಕೇವಲ ಒಂದು ಏಕದಿನ ಪಂದ್ಯವನ್ನು ಮಾತ್ರ ಆಡಿದ್ದಾರೆ. 2016 ರಲ್ಲಿ ಆಡಿದ ಈ ಏಕದಿನ ಪಂದ್ಯದಲ್ಲಿ ಫೈಜ್ ಫಜಲ್ ಜಿಂಬಾಬ್ವೆ ವಿರುದ್ಧ ಅಜೇಯ 55 ರನ್ ಗಳಿಸಿದರು. ಈ ಅದ್ಭುತ ಅರ್ಧಶತಕದ ನಂತರವೂ ಅವರನ್ನು ತಂಡದಿಂದ ಕೈಬಿಡಲಾಯಿತು ಮತ್ತು ಅವರು ತಂಡಕ್ಕೆ ಮರಳಲು ಇನ್ನೂ ಕೂಡ ಒಂದು ಅವಕಾಶಕ್ಕಾಗಿ ಕಾಯುತ್ತಿದ್ದಾರೆ.
"ರಾಹುಲ್ ದ್ರಾವಿಡ್ ಜೊತೆ ಸಮಯ ಕಳೆಯುವುದು ಯುವಕರ ಭವಿಷ್ಯಕ್ಕೆ ಒಳ್ಳೆಯದು"
ಭರತ್ ರೆಡ್ಡಿ (Bharat Reddy):
ಭರತ್ ರೆಡ್ಡಿ (Bharat Reddy) ಅವರ ಹೆಸರು ಇಂದಿನ ಯುವಕರಿಗೆ ತಿಳಿದಿಲ್ಲದಿರಬಹುದು, ಆದರೆ ಈ ಆಟಗಾರ ಭಾರತಕ್ಕಾಗಿ ಕೇವಲ ಮೂರು ಏಕದಿನ ಪಂದ್ಯಗಳನ್ನು ಮಾತ್ರ ಆಡಿದ್ದಾರೆ. ಭರತ್ ರೆಡ್ಡಿ 1978 ರಿಂದ 1981 ರವರೆಗೆ ಭಾರತಕ್ಕಾಗಿ ಮೂರು ಏಕದಿನ ಪಂದ್ಯಗಳನ್ನು ಆಡಿದ್ದರು, ಇದರಲ್ಲಿ ಅವರಿಗೆ ಎರಡು ಬಾರಿ ಬ್ಯಾಟಿಂಗ್ ಮಾಡುವ ಅವಕಾಶ ಸಿಕ್ಕಿತು ಮತ್ತು ಅವರು ಎರಡೂ ಬಾರಿ ಅಜೇಯರಾಗಿದ್ದರು. ಅದಾಗ್ಯೂ ಭರತ್ ರೆಡ್ಡಿ ಅವರಿಗೆ ಟೀಂ ಇಂಡಿಯಾದಲ್ಲಿ ಹೆಚ್ಚಿನ ಅವಕಾಶಗಳು ಸಿಗಲಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.