MS Dhoni 40th Birthday: ಧೋನಿಯ ತಂದೆಗೆ ಮನೆಯಲ್ಲಿ ಕ್ರಿಕೆಟ್ ಬಗ್ಗೆ ಮಾತನಾಡುವುದೂ ಇಷ್ಟವಿಲ್ಲ

ಭಾರತದ ಶ್ರೇಷ್ಠ ಕ್ರಿಕೆಟ್ ನಾಯಕ ಮಹೇಂದ್ರ ಸಿಂಗ್ ಧೋನಿ (Mahendra Singh Dhoni) ಇಂದು ತಮ್ಮ 40 ನೇ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ. ಮಹೇಂದ್ರ ಸಿಂಗ್ ಧೋನಿ ತಮ್ಮ ವೃತ್ತಿಜೀವನದಲ್ಲಿ ಅನೇಕ ದೊಡ್ಡ ಮೈಲಿಗಲ್ಲುಗಳನ್ನು ಸಾಧಿಸಿದ್ದಾರೆ.

Written by - Yashaswini V | Last Updated : Jul 7, 2021, 09:19 AM IST
  • ಇಂದು ಮಹೇಂದ್ರ ಸಿಂಗ್ ಧೋನಿ ತಮ್ಮ 40 ನೇ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ
  • ವಿಶ್ವದ ಶ್ರೇಷ್ಠ ಕ್ರಿಕೆಟಿಗರಲ್ಲಿ ಧೋನಿಯ ಹೆಸರನ್ನು ಪರಿಗಣಿಸಲಾಗುತ್ತದೆ
  • ಆದರೆ ಧೋನಿಯವರ ಮನೆಯಲ್ಲಿ ಕ್ರಿಕೆಟ್ ಬಗ್ಗೆ ಮಾತನಾಡುವುದೂ ಕೂಡ ಅವರ ತಂದೆಗೆ ಇಷ್ಟವಿಲ್ಲ
MS Dhoni 40th Birthday: ಧೋನಿಯ ತಂದೆಗೆ ಮನೆಯಲ್ಲಿ ಕ್ರಿಕೆಟ್ ಬಗ್ಗೆ ಮಾತನಾಡುವುದೂ ಇಷ್ಟವಿಲ್ಲ title=
ಎಂ.ಎಸ್. ಧೋನಿಯವರ ತಂದೆಗೆ ಮನೆಯಲ್ಲಿ ಕ್ರಿಕೆಟ್ ಬಗ್ಗೆ ಮಾತಾಡುವುದು ಏಕೆ ಇಷ್ಟವಿಲ್ಲ?

ನವದೆಹಲಿ: ಭಾರತದ ಶ್ರೇಷ್ಠ ಕ್ರಿಕೆಟ್ ತಾರೆ ಇಂದು ಮಹೇಂದ್ರ ಸಿಂಗ್ ಧೋನಿ (Mahendra Singh Dhoni) ತಮ್ಮ 40 ನೇ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ. ಮಹೇಂದ್ರ ಸಿಂಗ್ ಧೋನಿ ತಮ್ಮ ವೃತ್ತಿಜೀವನದಲ್ಲಿ ಅನೇಕ ದೊಡ್ಡ ಮೈಲಿಗಲ್ಲುಗಳನ್ನು ಸಾಧಿಸಿದ್ದಾರೆ. ವಿಶ್ವದ ಶ್ರೇಷ್ಠ ಕ್ರಿಕೆಟಿಗರಲ್ಲಿ ಧೋನಿಯ ಹೆಸರನ್ನು ಪರಿಗಣಿಸಲಾಗುತ್ತದೆ. ಆದರೆ ಧೋನಿಯವರ ಮನೆಯಲ್ಲಿ ಕ್ರಿಕೆಟ್ ಬಗ್ಗೆ ಮಾತನಾಡುವುದೂ ಕೂಡ ಅವರ ತಂದೆ 'ಪಾನ್ ಸಿಂಗ್' ಅವರಿಗೆ ಇಷ್ಟವಿಲ್ಲ ಎಂದು ನಿಮಗೆ ತಿಳಿದಿದೆಯೇ? ಇದನ್ನು ಧೋನಿ ಸ್ವತಃ ಬಹಿರಂಗಪಡಿಸಿದ್ದಾರೆ.

ತಂದೆಗೆ ಕ್ರಿಕೆಟ್ ಬಗ್ಗೆ ಮಾತನಾಡುವುದೂ ಇಷ್ಟವಿರಲಿಲ್ಲ:
ಸಂದರ್ಶನವೊಂದರಲ್ಲಿ ತಮ್ಮ ವೈಯಕ್ತಿಕ ಜೀವನದ ಕೆಲವು ವಿಷಯಗಳ ಬಗ್ಗೆ ಮಾಹಿತಿ ಬಹಿರಂಗಪಡಿಸಿದ ಎಂ.ಎಸ್. ಧೋನಿ (MS Dhoni), 'ನನ್ನ ತಂದೆ ಕ್ರಿಕೆಟ್ ಬಗ್ಗೆ ಮಾತನಾಡಲು ಇಷ್ಟಪಡುವುದಿಲ್ಲ. ನೀವು ಯಾವುದೇ ಕೆಲಸಕ್ಕಾಗಿ ನಮ್ಮ ಮನೆಗೆ ಹೋದರೂ ಅವರು ನಿಮ್ಮನ್ನು ಬಹಳ ಪ್ರೀತಿಯಿಂದ ಸ್ವಾಗತಿಸುತ್ತಾರೆ. ಆದರೆ ನೀವು ಅವರೊಂದಿಗೆ ಕ್ರಿಕೆಟ್ ಬಗ್ಗೆ ಮಾತನಾಡಲು ಪ್ರಾರಂಭಿಸಿದ ತಕ್ಷಣ, ಅವರು ನಿಮ್ಮನ್ನು ಮನೆಯಿಂದ ಹೊರಡುವಂತೆ ಕೇಳುತ್ತಾರೆ ಎಂದು ಹೇಳಿದ್ದರು.

ಇದನ್ನೂ ಓದಿ- MS Dhoni: ಸ್ನೇಹಿತನ ಪ್ರಾಣ ಉಳಿಸಲು ಹೆಲಿಕಾಪ್ಟರ್ ಕಳುಹಿಸಿದ್ದ ಧೋನಿ, ಆದರೆ...

2007 ರಲ್ಲಿ ನಡೆದ ಘಟನೆಯಿಂದ ಹೆದರುತ್ತಿದ್ದರು:
ತಮ್ಮ ತಂದೆಯ ಈ ಸ್ವಭಾವಕ್ಕೆ ಕಾರಣ ಏನೆಂಬುದನ್ನೂ ವಿವರಿಸಿರುವ ಧೋನಿ, 2007 ರಲ್ಲಿ ನಡೆದ ವಿಶ್ವಕಪ್‌ನಿಂದ  (World Cup) ಹೊರಬಂದ ನಂತರ ಅಭಿಮಾನಿಗಳು ತಮ್ಮ ಮನೆಯ ಮೇಲೆ ದಾಳಿ ನಡೆಸಿ ಮನೆಯ ಹೊರಗೆ ಪ್ರತಿಭಟನೆ ನಡೆಸಿದರು. ಈ ಘಟನೆಯಿಂದ ಅವರ ತಂದೆ ತುಂಬಾ ಹೆದರಿದ್ದರು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ- MS Dhoni's Farm House: ಆಧುನಿಕ ಸೌಲಭ್ಯಗಳಿಂದ ತುಂಬಿರುವ ಧೋನಿಯ ತೋಟದ ಮನೆಯ ಕಾಣದ ಚಿತ್ರಗಳು

ವೆಸ್ಟ್ ಇಂಡೀಸ್‌ನಲ್ಲಿ ನಡೆದ 2007 ರ ವಿಶ್ವಕಪ್‌ನ ಪ್ರವಾಸದಿಂದ ಭಾರತ ಹೊರಗುಳಿಯಿತು. ಈ ಪ್ರವಾಸದಲ್ಲಿ ಟೀಮ್ ಇಂಡಿಯಾ ಬಾಂಗ್ಲಾದೇಶದಿಂದ ಕೂಡ ಸೋಲನ್ನು ಎದುರಿಸಬೇಕಾಯಿತು. ನಂತರ ಅಭಿಮಾನಿಗಳು ದೇಶಾದ್ಯಂತ ಕ್ರಿಕೆಟ್ ಆಟಗಾರರ ಮನೆಗಳ ಹೊರಗೆ ಪ್ರತಿಭಟನೆ ನಡೆಸಿದ್ದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News