IPL 2024ರಲ್ಲಿ ವಿರಾಟ್’ಗಿಂತ ಹೆಚ್ಚು ಸಂಭಾವನೆ ಪಡೀತಾರೆ ಈ ಮೂವರು ಆಟಗಾರರು: ಒಬ್ಬ ಕೊಹ್ಲಿಯ ನೆಚ್ಚಿನ ಗೆಳೆಯನೇ…!!
List of Players Who are Earning More than Virat Kohli: ನಾವಿಂದು ಈ ವರದಿಯಲ್ಲಿ ಐಪಿಎಲ್ 2024ರ ಸೀಸನ್’ನಲ್ಲಿ ಯಾವ ಆಟಗಾರರು ವಿರಾಟ್ ಕೊಹ್ಲಿಗಿಂತ ಹೆಚ್ಚು ಸಂಭಾವನೆ ಪಡೆಯುತ್ತಾರೆ ಎಂಬುದನ್ನು ತಿಳಿದುಕೊಳ್ಳೋಣ.
List of Players Who are Earning More than Virat Kohli: ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) ಆರಂಭಕ್ಕೆ ಇನ್ನೇನು ಒಂದೆರಡು ವಾರಗಳಷ್ಟೇ ಬಾಕಿ ಇದೆ. ಮೊದಲ ಪಂದ್ಯ ಚೆನ್ನೈನ ಚೆಪಾಕ್ ಮೈದಾನದಲ್ಲಿ ಆಯೋಜನೆಗೊಳಲ್ಲಿದ್ದು ಮಾರ್ಚ್ 22 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಫೈಟ್ ನಡೆಯಲಿದೆ.
ನಾವಿಂದು ಈ ವರದಿಯಲ್ಲಿ ಐಪಿಎಲ್ 2024ರ ಸೀಸನ್’ನಲ್ಲಿ ಯಾವ ಆಟಗಾರರು ವಿರಾಟ್ ಕೊಹ್ಲಿಗಿಂತ ಹೆಚ್ಚು ಸಂಭಾವನೆ ಪಡೆಯುತ್ತಾರೆ ಎಂಬುದನ್ನು ತಿಳಿದುಕೊಳ್ಳೋಣ.
ಇದನ್ನೂ ಓದಿ: ಸಾಫ್ಟ್ವೇರ್ ಉನ್ನತೀಕರಣ: ರಾಜ್ಯದ ಎಲ್ಲಾ ಎಸ್ಕಾಂ ಆನ್ಲೈನ್ ಸೇವೆಗಳು 10 ದಿನಗಳ ಕಾಲ ಅಲಭ್ಯ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ನಾಯಕ ವಿರಾಟ್, 2018 ರಿಂದ ಅತಿ ಹೆಚ್ಚು ಸಂಭಾವನೆ ಪಡೆಯುವ ಆಟಗಾರ ಎಂದೇ ಖ್ಯಾತಿ ಪಡೆದಿದ್ದರು. ಪ್ರತಿ ಕ್ರೀಡಾ ಋತುವಿನಲ್ಲಿ 15 ಕೋಟಿ ರೂ ಸಂಭಾವನೆ ಪಡೆಯುತ್ತಿದ್ದ ಕೊಹ್ಲಿಯನ್ನು, ನಾಲ್ವರು ಆಟಗಾರರು ಮೀರಿಸಿದ್ದಾರೆ.
ಸ್ಯಾಮ್ ಕರನ್:
ಇಂಗ್ಲೆಂಡ್ ಮೂಲದ ಆಲ್ ರೌಂಡರ್ ಸ್ಯಾಮ್ ಕರನ್ IPL 2024 ರಲ್ಲಿ ಅತ್ಯಂತ ದುಬಾರಿ ಬೆಲೆಗೆ ಖರೀದಿಸಲ್ಪಟ್ಟ ಆಟಗಾರರಲ್ಲಿ ಒಬ್ಬರೆನಿಸಿಕೊಂಡಿದ್ದಾರೆ. ಪಂಜಾಬ್ ಕಿಂಗ್ಸ್ ರೂ. 18.50 ಕೋಟಿ ಬೆಲೆಗೆ ತನ್ನ ತಂಡಕ್ಕೆ ಸೇರ್ಪಡೆಗೊಳಿಸಿದೆ. ಕರನ್ ಸರಾಸರಿ ಬೌಲಿಂಗ್ ವೇಗ 149 ಕಿಲೋ ಮೀಟರ್ ಇದ್ದು, ವೇಗದ ಬೌಲಿಂಗ್’ಗೆ ಹೆಸರು ಪಡೆದಿದ್ದಾರೆ.
ಕ್ಯಾಮರೂನ್ ಗ್ರೀನ್:
ಆಸ್ಟ್ರೇಲಿಯಾದ ಆಲ್ ರೌಂಡರ್ ಕ್ಯಾಮರೂನ್ ಗ್ರೀನ್ ಅವರನ್ನು ಐಪಿಎಲ್ 2023 ರಲ್ಲಿ ಮುಂಬೈ ಇಂಡಿಯನ್ಸ್ ಖರೀದಿಸಿತ್ತು. ಈ ಬಾರಿ ಅಂದರೆ ಐಪಿಎಲ್ 2024ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು 17.5 ಕೋಟಿ ರೂ.ಗೆ ತನ್ನ ತಂಡಕ್ಕೆ ಸೇರ್ಪಡೆಗೊಳಿಸಿದೆ.
ಕೆಎಲ್ ರಾಹುಲ್:
ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ಕೆಎಲ್ ರಾಹುಲ್ ಐಪಿಎಲ್ ಸಂಭಾವನೆ ಏರಿಕೆಯಾಗಿದೆ. ಈ ಬಾರಿ ಅವರನ್ನು 17 ಕೋಟಿಗೆ ತಂಡದಲ್ಲಿ ಉಳಿಸಿಕೊಳ್ಳಲಾಗಿದೆ.
ಇದನ್ನೂ ಓದಿ: ಲೋಕಸಭೆ ಚುನಾವಣೆಗೆ ಭರದ ಸಿದ್ಧತೆ: ವಿವಿಧ ರಾಜ್ಯಗಳಲ್ಲಿ ವಿವಿಧ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ
ಹರಾಜಿನಲ್ಲಿ ಆರ್‌ಸಿಬಿ ಉತ್ತಮ ಪರ್ಸ್ ಪಡೆಯಲು ಕೊಹ್ಲಿ ಕಡಿಮೆ ಮೊತ್ತಕ್ಕೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂದು ವರದಿಗಳು ಹೇಳುತ್ತಿವೆ. ಒಟ್ಟಾರೆಯಾಗಿ ಈ ಮೂವರು ಆಟಗಾರರು ಐಪಿಎಲ್ 2024ರಲ್ಲಿ ವಿರಾಟ್’ಗಿಂತ ಹೆಚ್ಚು ಸಂಭಾವನೆ ಪಡೆಯುತ್ತಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ