BCCI Chief Selector: BCCI ಮುಖ್ಯ ಆಯ್ಕೆಗಾರ ಅಧ್ಯಕ್ಷರಾಗಿ ಧೋನಿಯನ್ನು ನೇಮಿಸಿ: ಪಾಕ್ ಕ್ರಿಕೆಟಿಗನಿಂದ ಸಲಹೆ!!
Indian Cricket Team Chief Selector: ಮುಖ್ಯ ಆಯ್ಕೆಗಾರ ಚೇತನ್ ಶರ್ಮಾ ಜೀ ನ್ಯೂಸ್‌ನ ಕುಟುಕು ಕಾರ್ಯಾಚರಣೆ `ಗೇಮ್ ಓವರ್` ನಲ್ಲಿ ಹಲವಾರು ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ. T20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾದ ಕಳಪೆ ಪ್ರದರ್ಶನದ ನಂತರ, ಅವರನ್ನು ಮುಖ್ಯ ಆಯ್ಕೆಗಾರ ಹುದ್ದೆಯಿಂದ ತೆಗೆದುಹಾಕಲಾಯಿತು, ಆದರೆ 2 ತಿಂಗಳ ನಂತರ ಮತ್ತೆ ಅವರಿಗೆ ಅಧಿಕಾರ ನೀಡಲಾಯಿತು.
Indian Cricket Team Chief Selector: ಜೀ ನ್ಯೂಸ್‌ನ ಕುಟುಕು ಕಾರ್ಯಾಚರಣೆಯ ನಂತರ ಕ್ರಿಕೆಟ್ ಜಗತ್ತಿನಲ್ಲಿ ಸಂಚಲನ ಉಂಟಾಗಿದೆ. ಹಿರಿಯ ಆಯ್ಕೆ ಸಮಿತಿಯ ಮುಖ್ಯಸ್ಥ ಚೇತನ್ ಶರ್ಮಾ ಈ ಸ್ಟಿಂಗ್‌ನಲ್ಲಿ ಹಲವಾರು ಮಹತ್ವದ ಮಾಹಿತಿಗಳನ್ನು ಹೊರಹಾಕಿದ್ದಾರೆ. ಭಾರತೀಯ ಆಟಗಾರರು ಫಿಟ್‌ನೆಸ್‌ಗಾಗಿ ಚುಚ್ಚುಮದ್ದನ್ನು ತೆಗೆದುಕೊಳ್ಳುತ್ತಾರೆ ಎಂದು ಅವರು ಈ ರಹಸ್ಯ ಕಾರ್ಯಾಚರಣೆಯ ಸಂದರ್ಭದಲ್ಲಿ ಹೇಳಿದ್ದರು.
ಈ ಎಲ್ಲಾ ವಿಚಾರಗಳ ಬೆನ್ನಲ್ಲೇ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅವರ ವಿರುದ್ಧ ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ. ಆದರೆ ಅವರ ಸ್ಥಾನಕ್ಕೆ ಕುತ್ತು ಬರಲಿದೆ ಎಂದು ಹೇಳಲಾಗುತ್ತಿದೆ. ಈ ಎಲ್ಲಾ ಊಹಾಪೋಹಗಳ ಮಧ್ಯೆ ಅನುಭವಿ ಆಟಗಾರ ಮಹೇಂದ್ರ ಸಿಂಗ್ ಧೋನಿ ಅವರನ್ನು ಟೀಮ್ ಇಂಡಿಯಾದ ಮುಖ್ಯ ಆಯ್ಕೆಗಾರರನ್ನಾಗಿ ಮಾಡಬೇಕು ಎಂದು ಹಿರಿಯ ಆಟಗಾರರೊಬ್ಬರು ಸಲಹೆ ನೀಡಿದ್ದಾರೆ.
ಇದನ್ನೂ ಓದಿ: Video : ಪೃಥ್ವಿ ಶಾ ಮೇಲೆ ಹಲ್ಲೆ, ಎಫ್‌ಐಆರ್ ದಾಖಲಿಸಿಕೊಂಡ ಪೊಲೀಸರು
ಸ್ಟಿಂಗ್ ಆಪರೇಷನ್ ನಂತರ ಸಂಕಷ್ಟಕ್ಕೆ ಸಿಲುಕಿದ ಚೇತನ್!
ಮುಖ್ಯ ಆಯ್ಕೆಗಾರ ಚೇತನ್ ಶರ್ಮಾ ಜೀ ನ್ಯೂಸ್‌ನ ಕುಟುಕು ಕಾರ್ಯಾಚರಣೆ 'ಗೇಮ್ ಓವರ್' ನಲ್ಲಿ ಹಲವಾರು ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ. T20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾದ ಕಳಪೆ ಪ್ರದರ್ಶನದ ನಂತರ, ಅವರನ್ನು ಮುಖ್ಯ ಆಯ್ಕೆಗಾರ ಹುದ್ದೆಯಿಂದ ತೆಗೆದುಹಾಕಲಾಯಿತು, ಆದರೆ 2 ತಿಂಗಳ ನಂತರ ಮತ್ತೆ ಅವರಿಗೆ ಅಧಿಕಾರ ನೀಡಲಾಯಿತು. ಆದರೆ ಈ ಕುಟುಕು ಕಾರ್ಯಾಚರಣೆಯ ನಂತರ, ಚೇತನ್ ಶರ್ಮಾ ತನ್ನನ್ನು ತಾನೇ ಸಂಕಷ್ಟಕ್ಕೆ ಸಿಲುಕಿಸಿಕೊಂಡಿದ್ದಾರೆ. ಭಾರತೀಯ ಕ್ರಿಕೆಟ್ ನಲ್ಲಿ ಇಂತಹ ವಿವಾದಗಳ ನಡುವೆಯೇ ಪಕ್ಕದ ದೇಶದಿಂದ ಒಂದು ಸಲಹೆ ಬಂದಿದೆ.
ಧೋನಿ ಅವರನ್ನು ಮುಖ್ಯ ಆಯ್ಕೆಗಾರರನ್ನಾಗಿ ಮಾಡಲು ಆಗ್ರಹ!
ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಡ್ಯಾನಿಶ್ ಕನೇರಿಯಾ ಅವರು ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರನ್ನು ಹೊಸ ಮುಖ್ಯ ಆಯ್ಕೆಗಾರರನ್ನಾಗಿ ಮಾಡಬೇಕೆಂದು ಬಿಸಿಸಿಐಗೆ ಸಲಹೆ ನೀಡಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಡ್ಯಾನಿಶ್ ಕನೇರಿಯಾ, “ಬಿಸಿಸಿಐ ಅಧಿಕಾರಿಗಳು ಎಂಎಸ್ ಧೋನಿ ಅವರೊಂದಿಗೆ ಒಮ್ಮೆ ಮಾತನಾಡಬೇಕು. ಧೋನಿ ಅವರ ಯೋಜನೆ ಏನು ಮತ್ತು ಅವರು ಮುಖ್ಯ ಆಯ್ಕೆಗಾರರಾಗಬಹುದೇ ಎಂದು ಅವರು ಕಂಡುಹಿಡಿಯಬೇಕು. ಇದೀಗ ಬಿಸಿಸಿಐ, ರೋಜರ್ ಬಿನ್ನಿ ಮತ್ತು ಜಯ್ ಶಾ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಹೊಸ ಆಯ್ಕೆ ಸಮಿತಿಯನ್ನು ರಚಿಸುವ ಸಮಯ ಬಂದಿದೆ” ಎಂದು ಹೇಳಿದ್ದಾರೆ.
ತಮ್ಮ ವೃತ್ತಿಜೀವನದಲ್ಲಿ 61 ಟೆಸ್ಟ್ ಮತ್ತು 18 ಏಕದಿನ ಪಂದ್ಯಗಳನ್ನು ಆಡಿರುವ ಕನೇರಿಯಾ, ''ಬಿಸಿಸಿಐ ಈಗ ಆಯ್ಕೆ ಸಮಿತಿಯಲ್ಲಿ ಹೊಸ ಜನರನ್ನು ಸೇರಿಸಬೇಕಾಗಿದೆ. ಎಂಎಸ್ ಧೋನಿ ಅವರ ಮನಸ್ಸು ಅದ್ಭುತವಾಗಿದೆ. ಅವರೊಬ್ಬ ಶ್ರೇಷ್ಠ ಆಟಗಾರ. ಹೀಗಿರುವಾಗ ಅವರಂತಹ ಆಟಗಾರ ಆಯ್ಕೆ ಸಮಿತಿಯಲ್ಲಿ ಏಕೆ ಇಲ್ಲ?” ಎಂದು ಹೇಳಿದ್ದಾರೆ.
ಇದನ್ನೂ ಓದಿ: IND vs AUS: ದೆಹಲಿ ಟೆಸ್ಟ್ ನಲ್ಲೂ ಈ ಆಟಗಾರನಿಗೆ ಸ್ಥಾನ ನೀಡುತ್ತಿಲ್ಲ ರೋಹಿತ್ ಶರ್ಮಾ!
ಧೋನಿ ಸದ್ಯ ಕ್ರಿಕೆಟ್‌ನಿಂದ ದೂರವಾಗಿದ್ದಾರೆ. ಅವರು ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕರಾಗಿದ್ದಾರೆ. ಧೋನಿ ನಾಯಕತ್ವದಲ್ಲಿ ಭಾರತ ಟಿ20 ಮತ್ತು ಏಕದಿನ ಮಾದರಿಯಲ್ಲಿ ಐಸಿಸಿ ವಿಶ್ವಕಪ್ ಗೆದ್ದಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.