IND vs AUS: ದೆಹಲಿ ಟೆಸ್ಟ್ ನಲ್ಲೂ ಈ ಆಟಗಾರನಿಗೆ ಸ್ಥಾನ ನೀಡುತ್ತಿಲ್ಲ ರೋಹಿತ್ ಶರ್ಮಾ!

India vs Australia 2nd Test Playing 11: ಭಾರತ ತಂಡ ಆಸ್ಟ್ರೇಲಿಯ ವಿರುದ್ಧದ ಸರಣಿಯ ಎರಡನೇ ಟೆಸ್ಟ್ ಪಂದ್ಯವನ್ನು ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಆಡಲಿದೆ. ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯ ಈ ಪಂದ್ಯ ನಾಳೆಯಿಂದ ಅಂದರೆ ಫೆಬ್ರವರಿ 17 ರಿಂದ ಆರಂಭವಾಗಲಿದೆ. ಟೀಂ ಇಂಡಿಯಾದ ನಾಯಕತ್ವವನ್ನು ನಿಭಾಯಿಸುತ್ತಿರುವ ರೋಹಿತ್ ಶರ್ಮಾ, ಈ ಸರಣಿಯಲ್ಲಿಯೂ ಸಹ ಮುನ್ನಡೆ ಸಾಧಿಸುವ ಗುರಿ ಹೊಂದಿದ್ದಾರೆ. ನಾಗ್ಪುರದಲ್ಲಿ ನಡೆದ ಸರಣಿಯ ಆರಂಭಿಕ ಟೆಸ್ಟ್ ಪಂದ್ಯವನ್ನು ಭಾರತ ತಂಡವು ಇನ್ನಿಂಗ್ಸ್ ಮತ್ತು 132 ರನ್‌ಗಳಿಂದ ಗೆದ್ದಿದೆ.

Written by - Bhavishya Shetty | Last Updated : Feb 16, 2023, 04:34 PM IST
    • ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಸರಣಿಯ ಎರಡನೇ ಟೆಸ್ಟ್ ಪಂದ್ಯ
    • ಟೀಂ ಇಂಡಿಯಾದ ಆಟಗಾರನೊಬ್ಬನಿಗೆ ಅವಕಾಶ ಸಿಗುವುದು ಕಷ್ಟ
    • ಎರಡನೇ ಟೆಸ್ಟ್ ಪಂದ್ಯವನ್ನು ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಆಡಲಿದೆ
IND vs AUS: ದೆಹಲಿ ಟೆಸ್ಟ್ ನಲ್ಲೂ ಈ ಆಟಗಾರನಿಗೆ ಸ್ಥಾನ ನೀಡುತ್ತಿಲ್ಲ ರೋಹಿತ್ ಶರ್ಮಾ!  title=
Rohit Sharma

India vs Australia 2nd Test Playing 11: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಸರಣಿಯ ಎರಡನೇ ಟೆಸ್ಟ್ ಪಂದ್ಯವು ಫೆಬ್ರವರಿ 17 ರಿಂದ ದೆಹಲಿಯಲ್ಲಿ ನಡೆಯಲಿದೆ. ಈ ಪಂದ್ಯಕ್ಕೆ ಸಕಲ ಸಿದ್ಧತೆಗಳು ನಡೆದಿವೆ. ಟಾಸ್ ನಂತರ ಉಭಯ ತಂಡಗಳ ನಾಯಕರು  ಪ್ಲೇಯಿಂಗ್-11 ಗಾಗಿ ಪ್ರಕಟವಾಗಲು ಕಾಯುತ್ತಿದ್ದಾರೆ.  ಈ ನಡುವೆ ಟೀಂ ಇಂಡಿಯಾದ ಆಟಗಾರನೊಬ್ಬನಿಗೆ ಅವಕಾಶ ಸಿಗುವುದು ಕಷ್ಟ, ಅಷ್ಟೇ ಅಲ್ಲ ಇಡೀ ಸರಣಿಗೆ ಬೆಂಚ್ ಮೇಲೆ ಕುಳಿತಿರಬೇಕಾಗಬಹುದು ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: BCCI ಕರ್ಮಕಾಂಡ ಬಯಲು ಮಾಡಿದ ಈ Chethan Sharma ಯಾರು ಗೊತ್ತಾ? ಈತ ಆಯ್ಕೆ ಸಮಿತಿಯ ಅಧ್ಯಕ್ಷರಾದದ್ದು ಹೇಗೆ?

ಭಾರತ ತಂಡ ಆಸ್ಟ್ರೇಲಿಯ ವಿರುದ್ಧದ ಸರಣಿಯ ಎರಡನೇ ಟೆಸ್ಟ್ ಪಂದ್ಯವನ್ನು ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಆಡಲಿದೆ. ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯ ಈ ಪಂದ್ಯ ನಾಳೆಯಿಂದ ಅಂದರೆ ಫೆಬ್ರವರಿ 17 ರಿಂದ ಆರಂಭವಾಗಲಿದೆ. ಟೀಂ ಇಂಡಿಯಾದ ನಾಯಕತ್ವವನ್ನು ನಿಭಾಯಿಸುತ್ತಿರುವ ರೋಹಿತ್ ಶರ್ಮಾ, ಈ ಸರಣಿಯಲ್ಲಿಯೂ ಸಹ ಮುನ್ನಡೆ ಸಾಧಿಸುವ ಗುರಿ ಹೊಂದಿದ್ದಾರೆ. ನಾಗ್ಪುರದಲ್ಲಿ ನಡೆದ ಸರಣಿಯ ಆರಂಭಿಕ ಟೆಸ್ಟ್ ಪಂದ್ಯವನ್ನು ಭಾರತ ತಂಡವು ಇನ್ನಿಂಗ್ಸ್ ಮತ್ತು 132 ರನ್‌ಗಳಿಂದ ಗೆದ್ದಿದೆ.

ಉಮೇಶ್ ಗೆ ಅವಕಾಶ ಸಿಗುವುದು ಕಷ್ಟ!

ವೇಗಿ ಉಮೇಶ್ ಯಾದವ್ ಪ್ಲೇಯಿಂಗ್-11ರಲ್ಲಿ ಸ್ಥಾನ ಪಡೆಯುವುದು ಕಷ್ಟವಾಗಿದೆ. ನಾಯಕ ರೋಹಿತ್ ಶರ್ಮಾ ಮತ್ತು ಕೋಚ್ ರಾಹುಲ್ ದ್ರಾವಿಡ್ ಈಗಾಗಲೇ ಇರುವ ಸಂಯೋಜನೆಯನ್ನು ಬದಲಾಯಿಸುತ್ತಿಲ್ಲ ಎಂದು ಹೇಳಲಾಗುತ್ತಿದೆ. ಇನ್ನು ಸರಣಿಯ ಆರಂಭಿಕ ಟೆಸ್ಟ್ ಪಂದ್ಯದಲ್ಲಿ ವೇಗದ ಬೌಲರ್‌ಗಳು ಎದುರಾಳಿ ತಂಡದ ಬ್ಯಾಟ್ಸ್‌ಮನ್‌ಗಳ ಮೇಲೆ ಹೆಚ್ಚು ಒತ್ತಡ ಹೇರಿದ್ದರು.

ಇದನ್ನೂ ಓದಿ: Team India : ಮಧ್ಯಾಹ್ನ ನಂಬರ್-1 ಪಟ್ಟ ಸಂಜೆಗೆ ನಂಬರ್-2 : ಟೀಂ ಇಂಡಿಯಾಗೆ ಮಹಾ ಮೋಸ..!

ಭಾರತ ತಂಡದಲ್ಲಿ, ನಾಗ್ಪುರ ಟೆಸ್ಟ್‌ನಲ್ಲಿ 2 ವೇಗದ ಬೌಲರ್‌ಗಳಿಗೆ ಅವಕಾಶ ನೀಡಲಾಯಿತು. ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್. ಈ ಇಬ್ಬರು ಬೌಲರ್‌ಗಳು ದೆಹಲಿ ಟೆಸ್ಟ್‌ನ ಭಾಗವಾಗುವ ಎಲ್ಲ ಸಾಧ್ಯತೆಗಳಿವೆ. ಆ ಪಂದ್ಯದಲ್ಲಿ ಶಮಿ ಒಟ್ಟು 3 ವಿಕೆಟ್ ಪಡೆದರೆ ಸಿರಾಜ್ ಕೇವಲ ಒಂದು ವಿಕೆಟ್ ಪಡೆದರು. ಆದರೆ ಇಬ್ಬರೂ ಬೌಲರ್‌ಗಳು ಉತ್ತಮ ಎಕಾನಮಿ ರೇಟ್‌ನಲ್ಲಿ ಬೌಲ್ ಮಾಡಿದ್ದರು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News