ಭಾರತದಲ್ಲಿ ಕ್ರಿಕೆಟ್ ಅನ್ನು ಧರ್ಮವೆಂದು ಪರಿಗಣಿಸಲಾಗಿದ್ದು, ಒಬ್ಬ ಕ್ರಿಕೆಟಿಗ ದೊಡ್ಡ ಇನ್ನಿಂಗ್ಸ್ ಆಡಿದರೆ ಮರುಕ್ಷಣವೇ ಆತನನ್ನು ದೇವರೆಂದು ಪರಿಗಣಿಸಲಾಗುತ್ತದೆ. ಅದೇ ರೀತಿ, ಆಟಗಾರ ಕೆಲವು ಪಂದ್ಯಗಳಲ್ಲಿ ಫ್ಲಾಪ್ ಆಗಿದ್ದರೆ, ನಂತರ ಅವನು ಅಭಿಮಾನಿಗಳ ಕೋಪಕ್ಕೆ ಬಲಿಯಾಗಬೇಕಾಗುತ್ತದೆ. ಇದೀಗ ಟೀಂ ಇಂಡಿಯಾದ ಸ್ಟಾರ್ ಆಟಗಾರನ ವಿಚಾರದಲ್ಲಿ ಇಂತಹದ್ದೇ ಘಟನೆ ನಡೆದಿದೆ. ಇಂಗ್ಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಸೋತ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಆಟಗಾರನೊಬ್ಬನ ವಿರುದ್ಧ ಕಿಡಿಕಾರಿದ್ದಾರೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಮಾವನ ಐಷಾರಾಮಿ ಬಂಗಲೆಯನ್ನು ಇಷ್ಟು ಕೋಟಿಗೆ ಮಾರಿದ ಖ್ಯಾತ ಚಿತ್ರ ನಿರ್ಮಾಪಕನ ಸೊಸೆ!


ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಭಾರತದ ಸ್ಟಾರ್ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ಅಮೋಘ ಆಟ ಪ್ರದರ್ಶಿಸಲು ಸಾಧ್ಯವಾಗಲಿಲ್ಲ. ಮೊದಲ ಪಂದ್ಯದಲ್ಲಿ ಕೇವಲ 11 ರನ್ ಗಳಿಸಿದ್ದರು. ಜೊತೆಗೆ ಎರಡನೇ ಪಂದ್ಯದಲ್ಲಿಕೇವಕ 17 ರನ್‌ ಬಾರಿಸಿದ್ದರು. ಆ ಬಳಿಕ ಮೂರನೇ ಪಂದ್ಯದಲ್ಲಿ ಸೋಲಿಗೆ ದೊಡ್ಡ ಕಾರಣರಾದರು. ಮೂರನೇ ಟಿ20 ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ಕೇವಲ 6 ರನ್ ಗಳಿಸಿದ್ದರು. ಒಂದೆಡೆ ಸೂರ್ಯಕುಮಾರ್ ಯಾದವ್ ವೇಗದ ಶತಕ ಸಿಡಿಸಿದ್ದರು. ಇದೇ ವೇಳೆ ದಿನೇಶ್ ಕಾರ್ತಿಕ್ ರನ್ ಗಳಿಸಲು ಪರದಾಡುತ್ತಿರುವುದು ಕಂಡು ಬಂದಿತು. 


ಇನ್ನು ಆಟದಲ್ಲಿ ದಿನೇಶ್ ಕಾರ್ತಿಕ್  ಫ್ಲಾಪ್ ಆದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳ ಆಕ್ರೋಶ ಭುಗಿಲೆದ್ದಿದೆ. ಕಾರ್ತಿಕ್ ಅವರ ಟೆಸ್ಟ್ ವೃತ್ತಿಜೀವನವು 2018 ರಲ್ಲಿ ಕೊನೆಗೊಂಡಿತು. ಅವರು 2019 ರಲ್ಲಿ ಒಡಿಐ ತಂಡದಿಂದ ಹೊರಗುಳಿದಿದ್ದರು. ಈಗ 2022 ರಲ್ಲಿ ಇಂಗ್ಲೆಂಡ್ ಸರಣಿಯೊಂದಿಗೆ ಅವರ ವೃತ್ತಿಜೀವನ ಅಂತ್ಯ ಕಂಡಿದೆ. ಟಿ 20 ತಂಡದಲ್ಲಿ, ಐಪಿಎಲ್‌ನಲ್ಲಿ ಮಾಡಿದ ಮೋಡಿಯನ್ನು ಪುನರಾವರ್ತಿಸಲು ಸಾಧ್ಯವಿಲ್ಲ ಎಂದು ಕ್ರಿಕೆಟ್‌ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ. 


ದಿನೇಶ್ ಕಾರ್ತಿಕ್ ಐಪಿಎಲ್ 2022 ರಲ್ಲಿ ಆರ್‌ಸಿಬಿ ತಂಡಕ್ಕಾಗಿ  ಆಡಿದ್ದು, ಅದ್ಭುತ ಪ್ರದರ್ಶನ ನೀಡಿದ್ದರು.  ಆಡಿದ 16 ಪಂದ್ಯಗಳಲ್ಲಿ 330 ರನ್ ಬಾರಿಸಿದ್ದರು. ಜೊತೆಗೆ ಆರ್‌ಸಿಬಿ ತಂಡದ ಪ್ರಮುಖ ಫಿನಿಶರ್ ಆಗಿ ಹೊರಹೊಮ್ಮಿದ್ದರು. ಆದರೆ ಈ ಬಳಿಕ ಟೀಂ ಇಂಡಿಯಾ ಮತ್ತು ಇಂಗ್ಲೆಂಡ್‌ ನಡುವಿನ ಪಂದ್ಯದಲ್ಲಿ ಹೇಳಿಕೊಳ್ಳುವಂತಹ ಸಾಧನೆ ಮಾಡಿಲ್ಲ. 


ಇದನ್ನೂ ಓದಿ: ಈ ಬಣ್ಣದ ಪಾದರಕ್ಷೆಗಳನ್ನು ತಪ್ಪಿಯೂ ಧರಿಸಬೇಡಿ: ಇದರಿಂದ ಅದೃಷ್ಟ ಕೆಡಬಹುದು!


ಇಂಗ್ಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಭಾರತ ತಂಡ 17 ರನ್‌ಗಳಿಂದ ಸೋತಿರಬಹುದು. ಆದರೆ ಟೀಂ ಇಂಡಿಯಾ ಟಿ20 ಸರಣಿಯನ್ನು 2-1 ಅಂತರದಲ್ಲಿ ವಶಪಡಿಸಿಕೊಂಡಿದೆ. ಭಾರತದ ಬೌಲರ್‌ಗಳು ಮತ್ತು ಬ್ಯಾಟ್ಸ್‌ಮನ್‌ಗಳು ಅದ್ಭುತ ಆಟ ಪ್ರದರ್ಶಿಸಿದ್ದಾರೆ. ಸೂರ್ಯಕುಮಾರ್ ಯಾದವ್ ಬಿರುಸಿನ ಶತಕ ಬಾರಿಸಿದ್ದು, 55 ಎಸೆತಗಳಲ್ಲಿ 117 ರನ್ ಗಳಿಸಿದ್ದಾರೆ. ಅದೇ ಸಮಯದಲ್ಲಿ, ಭುವನೇಶ್ವರ್ ಕುಮಾರ್ ಮತ್ತು ಜಸ್ಪ್ರೀತ್ ಬುಮ್ರಾ ಸರಣಿಯಲ್ಲಿ ಅದ್ಭುತ ಬೌಲಿಂಗ್ ಮಾಡಿದ್ದಾರೆ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ