ನವದೆಹಲಿ: ಟಿ20 ಯಲ್ಲಿ ಕ್ರಿಸ್ ಗೇಲ್ ಅವರ ಅಬ್ಬರದ ಬ್ಯಾಟಿಂಗ್ ಕಾರಣದಿಂದಾಗಿ ಅವರನು ಯುನಿವರ್ಸ್ ಬಾಸ್ ಎಂದು ಕರೆಯಲಾಗುತ್ತದೆ.ಅವರು ಕ್ರೀಸ್ ನಲ್ಲಿ ತಳವೂರಿ ನಿಂತರಂತೂ ಮುಗಿತು ಎದುರಾಳಿಗಳ ಎದೆಯಲ್ಲಿ ನಡುಕ ಹುಟ್ಟಿಸುವುದಂತು ಖಂಡಿತ.


RCB vs KXIP: ಶಾರ್ಜಾದಲ್ಲಿ ಪಂಜಾಬ್ ಪರ ಕಣಕ್ಕೆ ಇಳಿಯಲಿರುವ ಕ್ರಿಸ್ ಗೇಲ್

COMMERCIAL BREAK
SCROLL TO CONTINUE READING

ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಪಂಜಾಬ್ ಗೆಲುವು ಸಾಧಿಸಿದ ನಂತರ ಟ್ವೀಟ್ ಮಾಡಿರುವ ಆರ್.ಅಶ್ವಿನ್ ಕ್ರಿಸ್ ಗೇಲ್ ರನ್ನು ಔಟ್ ಮಾಡುವ ಮೊದಲು ಅವರ ಎರಡು ಕಾಲುಗಳನ್ನು ಕಟ್ಟಿ ಹಾಕಬೇಕು ಎಂದು ಟ್ವೀಟ್ ಮಾಡಿದ್ದಾರೆ. ಶೂಲೆಸ್ ಕಟ್ಟುತ್ತಿರುವ ಪೋಟೋವನ್ನು ತಮ್ಮ ಪೋಸ್ಟ್ ಲಗತ್ತಿಸಿದ್ದರಿಂದಾಗಿ ಈಗ ಈ ಪೋಟೋ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ವೈರಲ್ ಆಗಿದೆ.