ಟೋಕಿಯೋ: Tokyo Olympics 2020 Viral Video - ಜಪಾನ್‌ನ ಟೋಕಿಯೊದಲ್ಲಿ ನಡೆಯುತ್ತಿರುವ ಒಲಿಂಪಿಕ್ ಕ್ರೀಡಾಕೂಟದಲ್ಲಿ, ಇಂತಹ ಘಟನೆ ನಡೆದಿದ್ದು, ಈ ಘಟನೆ ಇದೀಗ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ಕುರಿತಾದ ವಿಡಿಯೋ ಇದೀಗ ಭಾರಿ ವೈರಲ್ ಆಗುತ್ತಿದ್ದು (Viral Video), ಇದರಲ್ಲಿ ಕೋಚ್ ಮಹಿಳಾ ಜೂಡೋ ಅಥ್ಲೀಟ್‌ಗೆ ಪಂದ್ಯಕ್ಕೂ ಮೊದಲು ಕಪಾಳಮೋಕ್ಷ ಮಾಡುತ್ತಿದ್ದಾರೆ. ರಿಂಗ್‌ಗೆ ಇಳಿಯುವ ಮುನ್ನ ಕೋಚ್ ಮಹಿಳಾ ಜೂಡೋ ಅಥ್ಲೀಟ್‌ಗೆ ಕಪಾಳಮೋಕ್ಷ ಮಾಡುತ್ತಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ನೋಡಬಹುದು.


COMMERCIAL BREAK
SCROLL TO CONTINUE READING

ಮಹಿಳಾ ಅಥ್ಲೀಟ್ ಗೆ ಕೋಚ್ ನಿಂದ ಕಪಾಳಮೋಕ್ಷ
ಈ ವಿಡಿಯೋ ವೈರಲ್ (Viral Video) ಆಗುತ್ತಿದ್ದಂತೆ ಸಾಮಾಜಿಕ ಮಾಧ್ಯಮದಲ್ಲಿ ಕೋಲಾಹಲವೇ ಸೃಷ್ಟಿಯಾಗಿದೆ. ಆಂಡ್ರ್ಯೂ ಗೌರ್ಡಿ (Andrew Gourdie) ಹೆಸರಿನ ವ್ಯಕ್ತಿ ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ. 'ಸೋಮವಾರ ಬೆಳಗ್ಗೆ 7 ಗಂಟೆ ಸುಮಾರಿಗೆ ನನಗೆ ಬೇಕಾಗುವ ಕೋಚಿಂಗ್ ಇದು' ಎಂದು ತಮಾಷೆ ಮಾಡುವ ಮೂಲಕ ವಿಡಿಯೋ ಹಂಚಿಕೊಂಡಿದ್ದಾರೆ.


Tokyo Olympics 2021: ಸ್ಪೇನ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಭಾರತ ಹಾಕಿ ತಂಡ


ನಿಬ್ಬೆರಗಾದ ಪ್ರೇಕ್ಷಕರು
ಮಂಗಳವಾರ ಮಧ್ಯಾಹ್ನ ತಾರ್ಜೋಸ್ ಹಾಗೂ ಹಂಗೇರಿಯ ಸೋಫ್ಜಿ ಒಜ್ಬಾಸ್ (Hungary Judo Player Szofi Ozbas) ನಡುವೆ ಜುಡೋ ಪಂದ್ಯ ನಡೆಯಬೇಕಿತ್ತು. ಆದರೆ ತಾರ್ಜೋಸ್ ಈ ಫೈನಲ್ ಪಂದ್ಯದಲ್ಲಿ ಸೋಲನ್ನು ಅನುಭವಿಸಿದ್ದಾರೆ. ಆದರೆ, ಈ ಪಂದ್ಯಕ್ಕೂ ಮುನ್ನ ಅವರ ಕೋಚ್ ಅವರೊಂದಿಗೆ ವರ್ತಿಸಿದ ರೀತಿ ಎಲ್ಲರನ್ನು ಆಶ್ಚರ್ಯಕ್ಕೀಡು ಮಾಡಿದೆ.


Tokyo Olympics 2020: ಎನ್‌ವೈ ಚೆಯುಂಗ್ ವಿರುದ್ಧ ಸತತ ಆರನೇ ಗೆಲುವು ಸಾಧಿಸಿದ ಪಿ.ವಿ ಸಿಂಧು


ಇಷ್ಟಾಗ್ಯೂ ಕೂಡ ಪಂದ್ಯ ಸೋತ ತಾರ್ಜೋಸ್ 
ಜರ್ಮನಿಯ ಜುಡೋ ಆಟಗಾರ್ತಿ (Germany Judo Athlete) ತಾರ್ಜೋಸ್ ಮ್ಯಾಚ್ ಗೆ ಹೋಗುತ್ತಿದ್ದ ವೇಳೆ ಆಕಸ್ಮಿಕವಾಗಿ ತಮ್ಮ ಕೋಚ್ ಕಡೆಗೆ ತಿರುಗುತ್ತಾರೆ. ಆಗ ಲೈವ್ ಟಿವಿ ಸಮ್ಮುಖದಲ್ಲಿಯೇ ಅವರ ಕೋಚ್ ಅವರಿಗೆ ಕಪಾಳ ಮೋಕ್ಷ ಮಾಡುತ್ತಾರೆ. ತಾರ್ಜೆಸ್ ಅವರ ಪಂದ್ಯ ಹಂಗೇರಿಯ ಸೋಫ್ಜಿ ಒಜ್ಬಸ್ ಜೊತೆಗೆ ನಡೆಯಬೇಕಿತ್ತು. ಇದು ಅವರ ಎಲಿಮಿನೇಷನ್ ರೌಂಡ್ ಆಗಿತ್ತು. ಆದರೆ, ತಾರ್ಜೆಸ್ ಈ ಪಂದ್ಯದಲ್ಲಿ ಸೋಲನ್ನು ಅನುಭವಿಸಿದ್ದಾರೆ. ಆದರೆ, ಪಂದ್ಯಕ್ಕೂ ಮೊದಲು ಕೋಚ್ ಮಾಡಿರುವ ವಿಧಾನ ಎಲ್ಲರನ್ನೂ ನಿಬ್ಬೇರಗಾಗಿಸಿದೆ.



ಇದನ್ನೂ ಓದಿ-Tokyo Olympics Update:ಸ್ವದೇಶಕ್ಕೆ ಮರಳುತ್ತಿದ್ದಂತೆ ASPಯಾಗಿ ನೇಮಕಗೊಂಡ Silver Girl ಮೀರಾಬಾಯಿ ಚಾನು


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ