Tokyo Olympics 2020, PV Sindhu vs Cheung Ngan Yi Badminton Highlights: ಟೋಕಿಯೊ ಒಲಿಂಪಿಕ್ಸ್‌ನ ಮಹಿಳಾ ಸಿಂಗಲ್ಸ್ ಬ್ಯಾಡ್ಮಿಂಟನ್ ಸ್ಪರ್ಧೆಯ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಲು ಹಾಲಿ ವಿಶ್ವ ಚಾಂಪಿಯನ್ ಭಾರತದ ಪಿ.ವಿ. ಸಿಂಧು (PV Sindhu) ಜುಲೈ 28 ರಂದು ಗ್ರೂಪ್ ಜೆನಲ್ಲಿ ಹಾಂಗ್ ಕಾಂಗ್‌ನ ಎನ್‌ವೈ ಚೆಯುಂಗ್ (Cheung Ngan Yi) ಅವರನ್ನು ಸೋಲಿಸಿದರು. ರಿಯೊ ಒಲಿಂಪಿಕ್ ಬೆಳ್ಳಿ ಪದಕ ವಿಜೇತರಾದ ಸಿಂಧು 35 ನಿಮಿಷದ ಪಂದ್ಯದಲ್ಲಿ ವಿಶ್ವದ 34 ನೇ ಕ್ರಮಾಂಕದ ಚಿಯುಂಗ್ ಅವರನ್ನು 21-9, 21-16ರಿಂದ ಸೋಲಿಸಿ ಗುಂಪಿನಲ್ಲಿ ಅಗ್ರಸ್ಥಾನ ಪಡೆದರು. ಚಿಯುಂಗ್ ವಿರುದ್ಧದ ಆರು ಪಂದ್ಯಗಳಲ್ಲಿ ಸಿಂಧು ಅವರ ಆರನೇ ಗೆಲುವು ಇದಾಗಿದೆ.
ವಿಶ್ವ 7 ನೇ ಕ್ರಮಾಂಕದ ಸಿಂಧು ಕ್ವಾರ್ಟರ್ ಫೈನಲ್‌ನಲ್ಲಿ ಗ್ರೂಪ್ I ರಲ್ಲಿ ಅಗ್ರಸ್ಥಾನದಲ್ಲಿರುವ ಡೆನ್ಮಾರ್ಕ್‌ನ 12 ನೇ ಶ್ರೇಯಾಂಕದ ಮಿಯಾ ಬ್ಲಿಚ್‌ಫೆಲ್ಡ್ ಅವರನ್ನು ಎದುರಿಸಲಿದ್ದಾರೆ. ಬ್ಲಿಚ್‌ಫೆಲ್ಟ್ ವಿರುದ್ಧ ಪಿ.ವಿ. ಸಿಂಧು (PV Sindhu) ಅವರ ಗೆಲುವು-ಸೋಲಿನ ದಾಖಲೆ 4-1. ಈ ವರ್ಷದ ಥೈಲ್ಯಾಂಡ್ ಓಪನ್‌ನಲ್ಲಿ ಡ್ಯಾನಿಶ್ ಆಟಗಾರ ಸಿಂಧು ವಿರುದ್ಧದ ಏಕೈಕ ಗೆಲುವನ್ನು ದಾಖಲಿಸಿದ್ದಾರೆ.
ಇದನ್ನೂ ಓದಿ- Tokyo Olympics 2021: ಸ್ಪೇನ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಭಾರತ ಹಾಕಿ ತಂಡ
ಹೈದರಾಬಾದ್‌ನ ಆರನೇ ಶ್ರೇಯಾಂಕಿತ ಆಟಗಾರ್ತಿ ಪಿ.ವಿ. ಸಿಂಧು ತನ್ನ ಮೊದಲ ಪಂದ್ಯದಲ್ಲಿ ಇಸ್ರೇಲ್‌ನ ಸೆನಿಯಾ ಪೋಲಿಕಾರ್ಪೋವಾ ಅವರನ್ನು ಸೋಲಿಸಿದರು. ಸಿಂಧು ತನ್ನ ವೈವಿಧ್ಯಮಯ ಹೊಡೆತಗಳು ಮತ್ತು ವೇಗವನ್ನು ಬದಲಾಯಿಸುವ ಸಾಮರ್ಥ್ಯದಿಂದ ಚಿಯುಂಗ್‌ನನ್ನು ಮಣಿಸಿದರು. ಚಿಯುಂಗ್ ಅವರ ಕ್ರಾಸ್-ಕೋರ್ಟ್ ರಿಟರ್ನ್ ಕೆಲವು ಅಂಕಗಳನ್ನು ಗಳಿಸಿತು. ಆದರೆ ಆವರ ಸರಳ ತಪ್ಪುಗಳು ಸಿಂಧು ಮೇಲೆ ಒತ್ತಡ ಹೇರಲು ವಿಫಲವಾದವು.
#TeamIndia | #Tokyo2020 | #Badminton
Women's Singles Group Play Stage - Group J Results@Pvsindhu1 dominates Hong Kong’s Cheung Ngan Yi 21-9, 21-16 to advance into the Round of 16 Knockout stage. #GoodLuck champ👏🔥 #RukengeNahi #EkIndiaTeamIndia #Cheer4India pic.twitter.com/gPJxsXkQfM— Team India (@WeAreTeamIndia) July 28, 2021
ಸಿಂಧು 6-2 ಸ್ಕೋರ್ ಮಾಡಲು ಉತ್ತಮ ಆರಂಭವನ್ನು ನೀಡಿದರು ಮತ್ತು ನಂತರ 10-3 ಮುನ್ನಡೆ ಸಾಧಿಸಿದರು. ವಿರಾಮದ ವೇಳೆಗೆ ಅವರು 11-5ರಲ್ಲಿ ಮುನ್ನಡೆ ಸಾಧಿಸಿದ್ದರು. ವಿರಾಮದ ನಂತರ, ಸಿಂಧು 20-9ರಲ್ಲಿ ಮುನ್ನಡೆ ಕಾಯ್ದುಕೊಂಡು ಮೇಲುಗೈ ಸಾಧಿಸಿದರು ಮತ್ತು ಚಿಯುಂಗ್‌ನ ನೆಟ್ ಶಾಟ್ ನಿಂದಾಗಿ ಮೊದಲ ಪಂದ್ಯವನ್ನು ಗೆದ್ದರು.
ಇದನ್ನೂ ಓದಿ- IND VS SL: ಎರಡನೇ T20 ಪಂದ್ಯ ಸ್ಥಗಿತ, ಕ್ರುನಾಲ್ ಪಾಂಡ್ಯ ಕೊರೊನಾ ಪಾಸಿಟಿವ್
ಚಿಯುಂಗ್ ಎರಡನೇ ಗೇಮ್‌ನಲ್ಲಿ ಉತ್ತಮವಾಗಿ ಆಡಿದರು. ಈ ಸಂದರ್ಭದಲ್ಲಿ ಇಬ್ಬರೂ ಆಟಗಾರರು 8-8 ಸಮಬಲದಲ್ಲಿ ಆಡುತ್ತಿದ್ದರು. ಈ ಸಮಯದಲ್ಲಿ, ಸಿಂಧು ಚಿಯುಂಗ್‌ನ ಶಾಟ್ ಪರೀಕ್ಷಿಸುವಲ್ಲಿ ತಪ್ಪು ಮಾಡಿದರು ಮತ್ತು ಹೊರಗೆ ಶಾಟ್ ಹೊಡೆದರು. ಈ ಮೂಲಕ ವಿರಾಮದ ಸಮಯದಲ್ಲಿ ಹಾಂಗ್ ಕಾಂಗ್ ಆಟಗಾರನಿಗೆ ಒಂದು ಪಾಯಿಂಟ್ ಮುನ್ನಡೆ ತಂದುಕೊಟ್ಟರು.
ಬಳಿಕ ಚಿಯುಂಗ್ ಮತ್ತೆ ಒತ್ತಡವನ್ನು ಹೇರಲು ಪ್ರಯತ್ನಿಸಿದರು. ಆದರೆ ಪಿ.ವಿ. ಸಿಂಧು ಅವರ ಪ್ರಬಲ ಸ್ಮಾಶ್ ಮತ್ತು ಉತ್ತಮ ಶಾಟ್ ನಿಂದ 19-14 ಮುನ್ನಡೆ ಸಾಧಿಸಿದರು. ಸಿಂಧು ಆರು ಮ್ಯಾಚ್ ಪಾಯಿಂಟ್‌ಗಳನ್ನು ಪಡೆದರು. ಈ ಮೂಲಕ ಅವರು ತಮ್ಮ ಜಯ ಸಾಧಿಸಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ