ಟೋಕಿಯೋ: Tokyo Olympics 2020: ಒಲಿಂಪಿಕ್ಸ್‌ನಲ್ಲಿ (Olympics 2020) ಭಾರತೀಯ ಪುರುಷರ  ಹಾಕಿ ತಂಡ  (Indian Hockey Team)ಇತಿಹಾಸ ಸೃಷ್ಟಿಸಿದೆ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಹಾಕಿ ಪಂದ್ಯಾವಳಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತ ತಂಡ ಬ್ರಿಟನ್ ತಂಡವನ್ನು 3-1 ಗೋಲುಗಳ ಅಂತರದಲ್ಲಿ ಸೋಲಿಸುವ ಮೂಲಕ ಸೆಮಿಫೈನಲ್ ಗೆ (Olympics 2020 Hockey Semifinal) ಲಗ್ಗೆ ಇಟ್ಟಿದೆ. ಭಾರತೀಯ ಹಾಕಿ ತಂಡವು 1972 ರ ನಂತರ ಇದೇ ಮೊದಲ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಸೆಮಿಫೈನಲ್ ಪಂದ್ಯವನ್ನು ಆಡಲಿದೆ. ಅಂದರೆ, 49 ವರ್ಷಗಳ ನಂತರ, ಭಾರತೀಯ ಹಾಕಿ ತಂಡವು ಒಲಿಂಪಿಕ್ಸ್‌ನ ಸೆಮಿಫೈನಲ್ ತಲುಪುವಲ್ಲಿ ಯಶಸ್ವಿಯಾಗಿದೆ.


COMMERCIAL BREAK
SCROLL TO CONTINUE READING

ಇತಿಹಾಸ ಬರೆದ ಭಾರತೀಯ ಹಾಕಿ ತಂಡ
ಭಾರತೀಯ (India) ತಂಡದ ಪರವಾಗಿ ದಿಲ್‌ಪ್ರೀತ್ ಸಿಂಗ್, ಹಾರ್ದಿಕ್ ಸಿಂಗ್ ಮತ್ತು ಗುರ್ಜಂತ್ ಸಿಂಗ್ ಪ್ರತ್ಯೇಕ ಗೋಲ್ ಗಳನ್ನು ದಾಖಲಿಸಿದ್ದಾರೆ. ಪಂದ್ಯದ ಆರಂಭದಿಂದಲೂ ಕೂಡ ಭಾರತೀಯ ಹಾಕಿ ತಂಡವು ಬ್ರಿಟನ್‌ನಲ್ಲಿ ತನ್ನ ಪ್ರಾಬಲ್ಯ ಮೆರೆದಿದೆ. ಪಂದ್ಯದ ಆರಂಭದಿಂದಲೇ ಭಾರತೀಯ ಹಾಕಿ ತಂಡದ ಆಟಗಾರರು ಆಕ್ರಮಣಕಾರಿ ಆಟವನ್ನು ಪ್ರದರ್ಶಿಸಿದ್ದಾರೆ.  ಭಾರತೀಯ ಹಾಕಿ ತಂಡ 7ನೇ ನಿಮಿಷ, 16 ನೇ ನಿಮಿಷ ಮತ್ತು 57 ನೇ ನಿಮಿಷದಲ್ಲಿ ಗೋಲು ದಾಖಲಿಸಿದೆ. ಭಾರತೀಯ ತಂಡದ ಗೋಲ್ ಕೀಪರ್ ಶ್ರೀಜೇಶ್ ಈ ಪಂದ್ಯದ ಗೆಲುವಿನ ರೂವಾರಿಯಾಗಿ ಹೊರಹೊಮ್ಮಿದ್ದಾರೆ. ಶ್ರೀಜೇಶ್ ತಮ್ಮ ಅತ್ಯುತ್ತಮ ಆಟದ ಮೂಲಕ ಬ್ರಿಟನ್ ತಂಡ ದಾಖಲಿಸಲು ಹೊರಟಿದ್ದ 4 ಗೋಲುಗಳನ್ನು ತಡೆದಿದ್ದಾರೆ.


Tokyo Olympics 2020) ಆಟಗಳಲ್ಲಿ ಪಿವಿ ಸಿಂಧು ಬಳಿಕ ಭಾರತೀಯ ಪುರುಷರ ಹಾಕಿ ತಂಡ ತನ್ನ ಅದ್ಬುತ ಶಕ್ತಿ ಪ್ರದರ್ಶಿಸಿದೆ.  49 ವರ್ಷಗಳ ನಂತರ ಪುರುಷರ ಹಾಕಿ ತಂಡ ಸೆಮಿಫೈನಲ್ ಹಂತಕ್ಕೆ ತಲುಪಿದೆ. ಹಾಕಿಯಲ್ಲಿ, ಭಾರತ ತಂಡವು ನಾಲ್ಕು ದಶಕಗಳ ನಂತರ ಇತಿಹಾಸವನ್ನು ಪುನರಾವರ್ತಿಸಿದೆ. ಭಾರತೀಯ ಹಾಕಿ ತಂಡವು ಗ್ರೇಟ್ ಬ್ರಿಟನ್ ಅನ್ನು ಸೋಲಿಸುವ ಮೂಲಕ ಸೆಮಿಫೈನಲ್ ಪ್ರವೇಶಿಸಿದೆ. 


ಇದನ್ನೂ ಓದಿ-Tokyo Olympics 2020: ಭಾರತಕ್ಕೆ ಮತ್ತೊಂದು ಪದಕ, ಕಂಚಿಗೆ ಮುತ್ತಿಕ್ಕಿದ ಪಿ.ವಿ.ಸಿಂಧು


1980ರ ಮಾಸ್ಕೋ ಒಲಿಂಪಿಕ್ಸ್ ನಲ್ಲಿ ಭಾರತ ಚಿನ್ನದ ಪದಕ ತನ್ನದಾಗಿಸಿತ್ತು
ಇದಕ್ಕೂ ಮೊದಲು ಭಾರತೀಯ ಹಾಕಿ ತಂಡ 1972ರ ಮಾಂಟ್ರಿಯಲ್ ಒಲಿಂಪಿಕ್ಸ್ ನಲ್ಲಿ ಸೆಮಿಫೈನಲ್ ಹಂತಕ್ಕೆ ತಲುಪಿತ್ತು. ಆದರೆ, 1990 ರಲ್ಲಿ ಭಾರತದ ಹಾಕಿ ತಂಡ ಆರು ತಂಡಗಳ ಪೂಲ್ ನಲ್ಲಿ ಎರಡನೇ ಸ್ಥಾನದಲ್ಲಿದ್ದುಕೊಂಡು ಫೈನಲ್ ಗೆ ಟಿಕೆಟ್ ಪಡೆದುಕೊಂಡಿತ್ತು.


ಇದನ್ನೂ ಓದಿ-Tokyo Olympics Discus throw: ಫೈನಲ್ ಗೆ ಲಗ್ಗೆ ಇಟ್ಟ ಕಮಲ್‌ ಪ್ರೀತ್ ಕೌರ್, ಚಿನ್ನದ ಬೇಟೆಗೆ ಸಜ್ಜು


ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತದ ಬಳಿ ಇದೆ ಪದಕ ಗೆಲ್ಲುವ ಅವಕಾಶ
ಇದರರ್ಥ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತೀಯ ಹಾಕಿ ತಂಡ ಕೊನೆಯ ಬಾರಿಗೆ 1980 ರಲ್ಲಿ ಪದಕಕ್ಕೆ ಮುತ್ತಿಕ್ಕಿತ್ತು. ಅದಾದ ಬಳಿಕ ಭಾರತೀಯ ಹಾಕಿ ತಂಡದ ಪ್ರದರ್ಶನದಲ್ಲಿ ನಿರಂತರ ಕುಸಿತ ಕಂಡುಬಂದಿತ್ತು. 1984ರ ಲಾಸ್ ಎಂಜಲಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತ ಐದನೇ ಸ್ಥಾನಕ್ಕೆ ತಲುಪಿದರೂ ಕೂಡ ಮುಂದೆ ಹೋಗಿರಲಿಲ್ಲ. ಆದರೆ, ಇದೀಗ 41 ವರ್ಷಗಳ ಬಳಿಕ ಭಾರತ ತಂಡದ ಬಳಿ ಮತ್ತೊಮ್ಮೆ ಪದಕ ಗೆಲ್ಲುವ ಅವಕಾಶವಿದೆ . 


ಇದನ್ನೂ ಓದಿ-Tokyo Olympics 2020: ಚಿನ್ನದ ಪದಕ ಗೆಲ್ಲುವ ಹಾಕಿ ಆಟಗಾರರಿಗೆ 2.25 ಕೋಟಿ ರೂ. ಬಹುಮಾನ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ