Tokyo Olympics: ಸೆಮಿಫೈನಲ್‌ ಪ್ರವೇಶಿಸಿ ಇತಿಹಾಸ ನಿರ್ಮಿಸಿದ ಬಾಕ್ಸರ್ ಲೊವ್ಲಿನಾ

Tokyo Olympics: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಎರಡನೇ ಪದಕ ಖಚಿತವಾಗಿದೆ. ಮಹಿಳಾ 69 ಕೆಜಿ ವಿಭಾಗದ ಕ್ವಾರ್ಟರ್ ಫೈನಲ್‌ನಲ್ಲಿ ಭಾರತದ ಮಹಿಳಾ ಬಾಕ್ಸರ್ ಲೊವ್ಲಿನಾ ಬೊರ್ಗೊಹೈನ್ ಚೀನಾದ ತೈಪೆಯ ನಿಯಾನ್ ಚಿನ್ ಚೆನ್ ಅವರನ್ನು ಸೋಲಿಸಿದರು. ಇದರೊಂದಿಗೆ ಲೊವ್ಲಿನಾ ಸೆಮಿಫೈನಲ್‌ಗೆ ಪ್ರವೇಶಿಸಿದರು.

Written by - Yashaswini V | Last Updated : Jul 30, 2021, 12:09 PM IST
  • ಭಾರತದ ಎರಡನೇ ಪದಕ ಖಚಿತ
  • ಸೆಮಿಫೈನಲ್‌ನಲ್ಲಿ ವಿಶ್ವ ಚಾಂಪಿಯನ್‌ನೊಂದಿಗೆ ಸ್ಪರ್ಧಿಸಲಿರುವ ಲೊವ್ಲಿನಾ
  • ಟೋಕಿಯೊ ಒಲಿಂಪಿಕ್ ರಿಂಗ್‌ನಲ್ಲಿ ಇತಿಹಾಸ ನಿರ್ಮಿಸಿದ ಲೊವ್ಲಿನಾ ಬೊರ್ಗೊಹೈನ್
Tokyo Olympics: ಸೆಮಿಫೈನಲ್‌ ಪ್ರವೇಶಿಸಿ ಇತಿಹಾಸ ನಿರ್ಮಿಸಿದ ಬಾಕ್ಸರ್ ಲೊವ್ಲಿನಾ title=
Lovlina Borgohain

ಟೋಕಿಯೊ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತದ ಎರಡನೇ ಪದಕ ಖಚಿತವಾಗಿದೆ. ಮಹಿಳೆಯರ 69 ಕೆಜಿ ವಿಭಾಗದ ಕ್ವಾರ್ಟರ್ ಫೈನಲ್‌ನಲ್ಲಿ ಭಾರತದ ಮಹಿಳಾ ಬಾಕ್ಸರ್ ಲೊವ್ಲಿನಾ ಬೊರ್ಗೊಹೈನ್ (Lovlina Borgohain) ಚೀನಾದ ತೈಪೆಯ ನಿಯಾನ್ ಚಿನ್ ಚೆನ್ ಅವರನ್ನು ಸೋಲಿಸುವ ಮೂಲಕ ಸೆಮಿಫೈನಲ್‌ಗೆ ಪ್ರವೇಶಿಸಿದ್ದಾರೆ.  ಇದರೊಂದಿಗೆ ಭಾರತದ ಲೊವ್ಲಿನಾ ಬೊರ್ಗೊಹೈನ್ ಬಾಕ್ಸಿಂಗ್‌ನಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ. ಜೊತೆಗೆ ಅಸ್ಸಾಂನ ಈ ಬಾಕ್ಸರ್ ಭಾರತಕ್ಕೆ ಮತ್ತೊಂದು ಪದಕವನ್ನೂ ಕೂಡ ಖಚಿತಪಡಿಸಿದ್ದಾರೆ.

ಭಾರತದ ಎರಡನೇ ಪದಕ ಖಚಿತವಾಗಿದೆ:
ಮೊದಲ ಸುತ್ತಿನಲ್ಲಿ,ಲೊವ್ಲಿನಾ ಬೊರ್ಗೊಹೈನ್ (Lovlina Borgohain) 3-2ರಿಂದ ಗೆದ್ದರು. ಆದಾಗ್ಯೂ, ಲೊವ್ಲಿನಾ ತನ್ನ ಹೈಟ್ ನ ಉತ್ತಮ ಲಾಭವನ್ನು ಪಡೆಯಲು ಪ್ರಯತ್ನಿಸಿದಳು. ಅವರು ನಿರಂತರವಾಗಿ ಪಂಚ್ ಮಾಡಲು ಪ್ರಯತ್ನಿಸಿದರು, ಆದರೆ ಚೀನೀ ತೈಪೆಯ ಬಾಕ್ಸರ್ ಹೆಚ್ಚಿನ ಶಕ್ತಿಯನ್ನು ತೋರಿಸಿದರು. ಮಂಗಳವಾರ ಕುಕುಜಿಕನ್ ಅರೆನಾದಲ್ಲಿ ಆಡಿದ ಅಂತಿಮ-16 ಸುತ್ತಿನ ಪಂದ್ಯದಲ್ಲಿ ಅಸ್ಸಾಂನ ಲೋವ್ಲಿನಾ (23), ತನಗಿಂತ 12 ವರ್ಷ ಹಿರಿಯ ಜರ್ಮನಿಯ ನೆಡಿನ್ ಅಪೆಟ್ ಅವರನ್ನು 3-2 ಗೋಲುಗಳಿಂದ ಸೋಲಿಸಿದರು. ನೀಲಿ ಕಾರ್ನರ್ ನಲ್ಲಿ ಆಟವಾಡುವ ಲೊವ್ಲಿನಾ ಐವರು ತೀರ್ಪುಗಾರರಿಂದ ಕ್ರಮವಾಗಿ 28, 29, 30, 30, 27 ಅಂಕಗಳನ್ನು ಗಳಿಸಿದರು.

ಇದನ್ನೂ ಓದಿ-  Tokyo Olympics: ಭಾರತಕ್ಕೆ ಮತ್ತೊಂದು ದೊಡ್ಡ ಯಶಸ್ಸು, ಕ್ವಾರ್ಟರ್ ಫೈನಲ್‌ಗೆ ಪ್ರವೇಶ ಪಡೆದ ದೀಪಿಕಾ ಕುಮಾರಿ

ಸೆಮಿಫೈನಲ್‌ನಲ್ಲಿ ವಿಶ್ವ ಚಾಂಪಿಯನ್‌ ಜೊತೆ ಸ್ಪರ್ಧಿಸಲಿರುವ ಲೊವ್ಲಿನಾ :
ಸೆಮಿಫೈನಲ್‌ನಲ್ಲಿ (Semi Final), ಲೊವ್ಲಿನಾ ಬೊರ್ಗೊಹೈನ್ ಈಗ ವಿಶ್ವ ಚಾಂಪಿಯನ್ ಟರ್ಕಿಯ ಬಾಕ್ಸರ್ ಬುಸನೇಜ್ ಸುರ್ಮೆನೆಲಿಯನ್ನು ಎದುರಿಸಲಿದ್ದಾರೆ. ಬೊರ್ಗೊಹೈನ್ ತನ್ನ ಮೊದಲ ಸುತ್ತನ್ನು 3-2 ರಲ್ಲಿ ಚೈನೀಸ್ ತೈಪೆಯ ಬಾಕ್ಸರ್ ವಿರುದ್ಧ ಗೆದ್ದರು. ಇದರ ನಂತರ, ನಿರ್ಧಾರವು ಎರಡನೇ ಸುತ್ತಿನಲ್ಲಿ ಲೊವ್ಲಿನಾ ಪರವಾಗಿ ಹೋಯಿತು. ಮೂರನೇ ಸುತ್ತಿನಲ್ಲಿ, ಚೀನಾದ ತೈಪೆ ಬಾಕ್ಸರ್ ಪುನರಾಗಮನ ಮಾಡಲು ಪ್ರಯತ್ನಿಸಿದರು, ಆದರೆ ಲೊವ್ಲಿನಾ ತನ್ನ ಅತ್ಯುತ್ತಮ ರಕ್ಷಣೆಯೊಂದಿಗೆ ಚೀನಾದ ತೈಪೆ ಬಾಕ್ಸರ್ ಪುನರಾಗಮನಕ್ಕೆ ಯಾವುದೇ ಅವಕಾಶವನ್ನು ನೀಡಲಿಲ್ಲ.

ಇದನ್ನೂ ಓದಿ- Tokyo Olympics 2021: ಸ್ಪೇನ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಭಾರತ ಹಾಕಿ ತಂಡ

ಇತಿಹಾಸವನ್ನು ಸೃಷ್ಟಿಸಿದ ಲೊವ್ಲಿನಾ ಬೊರ್ಗೊಹೈನ್ :
ಚೀನಾದ ತೈಪೆಯ ಬಾಕ್ಸರ್ ವಿರುದ್ಧ ಲೊವ್ಲಿನಾರ ನಾಲ್ಕನೇ ಹೋರಾಟ ಇದು. ಹಿಂದಿನ 3 ಪಂದ್ಯಗಳಲ್ಲಿ, ಅವರು ಪ್ರತಿ ಬಾರಿಯೂ ಚೈನೀಸ್ ತೈಪೆಯ ಬಾಕ್ಸರ್ ವಿರುದ್ಧ ಸೋತಿದ್ದರು, ಆದರೆ ಅವರು ಟೋಕಿಯೊ ಒಲಿಂಪಿಕ್ ರಿಂಗ್‌ನಲ್ಲಿ ಇತಿಹಾಸ ನಿರ್ಮಿಸಿದರು. ಭಾರತ ಈ ಹಿಂದೆ ಒಲಿಂಪಿಕ್ ಬಾಕ್ಸಿಂಗ್‌ನಲ್ಲಿ ವಿಜೇಂದರ್ ಸಿಂಗ್ (2008) ಮತ್ತು ಎಂಸಿ ಮೇರಿ ಕೋಮ್ (2012) ಕಂಚಿನ ಪದಕಗಳನ್ನು ಗೆದ್ದಿತ್ತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News