ಟೋಕಿಯೋ: Tokyo Olympics - ಪಂದ್ಯ ಆರಂಭದ ವೇಳೆ ಒಂದು ಗೋಲ್ ನಿಂದ ಹಿಂದೆ ಬಿದ್ದು, ನಂತರ ಭರ್ಜರಿ ಆಟ ಪ್ರದರ್ಶಿಸಿರುವ ಭಾರತದ ಪುರುಷರ ಹಾಕಿ ತಂಡ ಗೋಲ್ ಕೀಪರ್ ಪಿ.ಆರ್. ಶ್ರೀಜೇಷ್ (P.R Shrijesh)ಅವರ ಅದ್ಭುತ ಆಟ ಪ್ರದರ್ಶನದ ಮೂಲಕ ನ್ಯೂಜಿಲ್ಯಾಂಡ್ ತಂಡವನ್ನು 3-2 ಗೋಲ್ ಗಳಲ್ಲಿ ಮಣಿಸುವಲ್ಲಿ ಯಶಸ್ವಿಯಾಗಿದೆ. ಇದರಿಂದ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತೀಯ ಹಾಕಿ ತಂಡ ಗೆಲುವಿನೊಂದಿಗೆ ತನ್ನ ಶುಭಾರಂಭ ಮಾಡಿದೆ ಎಂದೇ ಹೇಳಬಹುದು. ಕಳೆದ ನಾಲ್ಕು ದಶಕಗಳಲ್ಲಿ ಮೊದಲ ಒಲಿಂಪಿಕ್ ಪದಕ ಗೆಲ್ಲುವ ಪ್ರಯತ್ನದಲ್ಲಿರುವ ಭಾರತೀಯ ತಂಡ ಟೋಕಿಯೋ ಒಲಿಂಪಿಕ್ಸ್ ನಲ್ಲಿ ನಿರೀಕ್ಷೆಗೆ ಅನುಗುಣವಾಗಿ ಆಟ ಪ್ರದರ್ಶಿಸಿ ಗ್ರೂಪ್ ಎ ನಲ್ಲಿನ ಈ ಪಂದ್ಯದಲ್ಲಿ ಗೆಲುವು ದಾಖಲಿಸಿದೆ. ಹಲವು ವಿಡಿಯೋ ರೆಫರಲ್ ಗಳ ನಡುವೆ ಆದಲಾಗಿರುವ ಈ ಪಂದ್ಯದ ಕೊನೆಯ ನಿಮಿಷದಲ್ಲಿ ನ್ಯೂಜಿಲ್ಯಾಂಡ್ ತಂಡಕ್ಕೆ ಪೆನಾಲ್ಟಿ ಕಾರ್ನರ್ ದೊರಕಿತ್ತು, ಆದರೆ, ಭಾರತೀಯ ಹಾಕಿ (Hockey) ತಂಡದ ಗೋಲ್ ಕೀಪರ್ ಶ್ರೀಜೇಶ್ ಅದನ್ನು ಗೋಲ್ ಆಗಿ ಪರಿವರ್ತನೆಯಾಗಲು ಬಿಡಲಿಲ್ಲ. 


COMMERCIAL BREAK
SCROLL TO CONTINUE READING

ನ್ಯೂಜಿಲೆಂಡ್ ಪರ ಪೆನಾಲ್ಟಿ ಕಾರ್ನರ್ ಎಕ್ಸ್ಪರ್ಟ್ ಕೆನ್ ರಸ್ಸೆಲ್ ಆರನೇ ನಿಮಿಷದಲ್ಲಿ ಗೋಲು ಗಳಿಸಿದರೆ, ಭಾರತ ಪರ ರೂಪಿಂದರ್ ಪಾಲ್ ಸಿಂಗ್ 10 ನೇ ನಿಮಿಷದಲ್ಲಿ ಪೆನಾಲ್ಟಿ ಸ್ಟ್ರೋಕ್‌ ಮೂಲಕ ಈಕ್ವಲೈಜರ್ ದಾಖಲಿಸಿದರು. ಡ್ರ್ಯಾಗ್-ಫ್ಲಿಕರ್ ಹರ್ಮನ್‌ಪ್ರೀತ್ ಸಿಂಗ್ 26 ಮತ್ತು 33 ನೇ ನಿಮಿಷಗಳಲ್ಲಿ ಗೋಲು ಗಳಿಸಿದ್ದಾರೆ. ಸ್ಟೀಫನ್ ಜಾನಿಸ್ 43 ನೇ ನಿಮಿಷದಲ್ಲಿ ನ್ಯೂಜಿಲೆಂಡ್ ಪರ ಎರಡನೇ ಗೋಲು ದಾಖಲಿಸಿದ್ದಾರೆ. 1980 ನಂತರ ಭಾರತ ಇದುವರೆಗೆ ಒಲಿಂಪಿಕ್ (Olympics) ಕ್ರೀಡಾಕೂಟದಲ್ಲಿ ಒಂದೂ ಪದಕ ಪಡೆದಿಲ್ಲ ಎಂಬುದು ಇಲ್ಲಿ ಉಲ್ಲೇಖನೀಯ.


ಇದನ್ನೂ ಓದಿ -20 ವರ್ಷಗಳ ಬಳಿಕ ಒಲಿಂಪಿಕ್ಸ್‌ನಲ್ಲಿ ಭಾರತೀಯ ಕುದುರೆ ಸವಾರಿ


ನಾಳೆ ಆಸ್ಟ್ರೇಲಿಯ ಜೊತೆಗೆ ಸೆಣೆಸಾಟ
ಭಾರತದ ಪುರುಷರ ಹಾಕಿ ತಂಡ ಜುಲೈ 25 ರಂದು ನಡೆಯಲಿರುವ ಎರಡನೇ ಪಂದ್ಯದಲ್ಲಿ ಆಸ್ಟ್ರೇಲಿಯಾ (Australia Hockey Team) ವಿರುದ್ಧ ಸೆಣಸಲಿದೆ. ಆಸ್ಟ್ರೇಲಿಯಾ ಕೂಡ ಗೆಲುವಿನೊಂದಿಗೆ ಈ ಪಂದ್ಯಾವಳಿಯಲ್ಲಿ ತನ್ನ ಶುಭಾರಂಭ ಮಾಡಿದೆ. ಏಕಪಕ್ಷೀಯ ಪಂದ್ಯದಲ್ಲಿ ತಂಡವು ಆತಿಥೇಯ ಜಪಾನ್ ತಂಡವನ್ನು 5-3ರಿಂದ ಸೋಲಿಸಿದೆ. ಭಾರತ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಅರ್ಜೆಂಟೀನಾ, ಸ್ಪೇನ್ ಮತ್ತು ಜಪಾನ್ ಎ ಗುಂಪಿನಲ್ಲಿವೆ. ಆದರೆ ಬೆಲ್ಜಿಯಂ, ಕೆನಡಾ, ಜರ್ಮನಿ, ಬ್ರಿಟನ್, ನೆದರ್ಲ್ಯಾಂಡ್ಸ್ ಮತ್ತು ಜರ್ಮನಿಗಳು ಬಿ ಗುಂಪಿನಲ್ಲಿವೆ. ಎರಡೂ ಗುಂಪುಗಳ ಟಾಪ್ -4 ತಂಡಗಳು ಕ್ವಾರ್ಟರ್ ಫೈನಲ್‌ನಲ್ಲಿ ಸ್ಥಾನ ಪಡೆಯಲಿವೆ.


ಇದನ್ನೂ ಓದಿ-Tokyo Olympics:ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಬಸ್ ಚಾಲಕನ ಮಗಳ ಜಿಮ್ನಾಸ್ಟಿಕ್ಸ್‌ನ ಮ್ಯಾಜಿಕ್, ಈಡೇರಲಿದೆಯೇ ಪದಕದ ಕನಸು?


ಆಗಸ್ಟ್ 1 ರಿಂದ ನಾಕೌಟ್ ಪಂದ್ಯಗಳು ಆರಂಭಗೊಳ್ಳಲಿವೆ
ಈ ಪಂದ್ಯಾವಳಿಯಲ್ಲಿ ಹಾಕಿಯ ಗ್ರೂಪ್ ಸ್ಟೇಜ್ ಪಂದ್ಯಗಳು ಜುಲೈ 24 ರಿಂದ ಆರಂಭಗೊಂಡಿವೆ. ಜುಲೈ 30ರವರೆಗೆ ಗ್ರೂಪ್ ಸ್ಟೇಜ್ ಪಂದ್ಯಗಳು ನಡೆಯಲಿವೆ. ನಾಕೌಟ್ ಸುತ್ತಿನ ಪಂದ್ಯಗಳು ಆಗಸ್ಟ್ 1 ರಿಂದ ಆರಂಭಗೊಳ್ಳಲಿವೆ. ಕ್ವಾರ್ಟರ್ ಫೈನಲ್ ಪಂದ್ಯಗಳು ಆಗಸ್ಟ್ 1 ರಂದು, ಸೆಮಿಫೈನಲ್ ಪಂದ್ಯಗಳು ಆಗಸ್ಟ್ 3 ರಂದು ನಡೆಯಲಿದ್ದು, ಚಿನ್ನ ಮತ್ತು ಕಂಚಿನ ಪದಕ ಪಂದ್ಯ ಆಗಸ್ಟ್ 5 ರಂದು ನಡೆಯಲಿದೆ. 2016 ರ ರಿಯೊ ಒಲಿಂಪಿಕ್ಸ್ ಕುರಿತು ಹೇಳುವುದಾದರೆ, ಅರ್ಜೆಂಟೀನಾ ಚಿನ್ನದ ಪದಕ, ಬೆಲ್ಜಿಯಂ ಬೆಳ್ಳಿ ಮತ್ತು ಜರ್ಮನಿ ಕಂಚಿನ ಪದಕ ಪಡೆದುಕೊಂಡಿವೆ. ಭಾರತ 8ನೇ ಸ್ಥಾನಕ್ಕೆ ತೃಪ್ತಿ ಪಡೆದುಕೊಂಡಿತ್ತು


ಇದನ್ನೂ ಓದಿ-Tokyo Olympic 2020: ಸಾನಿಯಾ ಮಿರ್ಜಾ ಮಸ್ತ್ ಮಸ್ತ್ ಡ್ಯಾನ್ಸ್, ವಿಡಿಯೋ ವೈರಲ್


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ