Tokyo Olympics Discus throw: ಫೈನಲ್ ಗೆ ಲಗ್ಗೆ ಇಟ್ಟ ಕಮಲ್ ಪ್ರೀತ್ ಕೌರ್, ಚಿನ್ನದ ಬೇಟೆಗೆ ಸಜ್ಜು
ಕಮಲ್ ಪ್ರೀತ್ ಕೌರ್ 64 ಮೀಟರ್ ಎಸೆತದೊಂದಿಗೆ ಡಿಸ್ಕಸ್ ಥ್ರೋ ಫೈನಲ್‌ಗೆ ಅರ್ಹತೆ
ನವದೆಹಲಿ: ಟೋಕಿಯೊ ಒಲಂಪಿಕ್ಸ್ ನಲ್ಲಿ ಭಾರತೀಯ ಕ್ರೀಡಾಪಟುಗಳು ಉತ್ತಮ ಪ್ರದರ್ಶನ ನೀಡುತ್ತಿದ್ದು, ಹೆಚ್ಚಿನ ಪದಕಗಳನ್ನು ತಂದುಕೊಡುವ ನಿರೀಕ್ಷೆ ಮೂಡಿಸಿದ್ದಾರೆ. ಮಹಿಳಾ ಡಿಸ್ಕಸ್ ಥ್ರೋನಲ್ಲಿ ಕಮಲ್ ಪ್ರೀತ್ ಕೌರ್(Kamalpreet Kaur) ಫೈನಲ್‌ಗೆ ಲಗ್ಗೆ ಇಡುವ ಮೂಲಕ ಶ್ರೇಷ್ಠ ಸಾಧನೆ ಮಾಡಿದ್ದಾರೆ.
ಹೌದು, ಕಮಲ್ ಪ್ರೀತ್ ಕೌರ್(Kamalpreet Kaur) 64 ಮೀಟರ್ ಎಸೆತದೊಂದಿಗೆ ಮಹಿಳಾ ಡಿಸ್ಕಸ್ ಥ್ರೋ ಫೈನಲ್‌ಗೆ ಅರ್ಹತೆ ಪಡೆದುಕೊಂಡಿದ್ದಾರೆ. ಶನಿವಾರ ನಡೆದ ಮಹಿಳಾ ಡಿಸ್ಕಸ್ ಥ್ರೋನ ಬಿ ಗುಂಪಿನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಅವರು ಟೋಕಿಯೊ ಒಲಂಪಿಕ್ಸ್ 2020(Tokyo Olympics 2020)ರ ಫೈನಲ್ ಪ್ರವೇಶಿಸಿದ್ದಾರೆ. ಈ ಮೂಲಕ ಚಿನ್ನದ ಬೇಟೆಗೆ ಸಜ್ಜಾಗಿದ್ದಾರೆ.
ಇದನ್ನೂ ಓದಿ: Tokyo Olympics 2020: ಚಿನ್ನದ ಪದಕ ಗೆಲ್ಲುವ ಹಾಕಿ ಆಟಗಾರರಿಗೆ 2.25 ಕೋಟಿ ರೂ. ಬಹುಮಾನ
ಕಮಲ್ ಪ್ರೀತ್ ಕೌರ್ ಅವರು ಅರ್ಹತಾ ಸುತ್ತಿನಲ್ಲಿ ಒಟ್ಟಾರೆ 2ನೇ ಸ್ಥಾನ ಪಡೆಯುವ ಮೂಲಕ ಪದಕ ಸುತ್ತಿಗೆ ನೇರ ಅರ್ಹತೆ ಗಿಟ್ಟಿಸಿದ್ದಾರೆ. ಅರ್ಹತಾ ಸುತ್ತಿನ 3 ಪ್ರಯತ್ನಗಳಲ್ಲಿ ಕೌರ್, 60.29(ಪ್ರಥಮ), 63.97(ದ್ವಿತೀಯ) ಮತ್ತು 64(ತೃತೀಯ) ಮೀಟರ್ ಡಿಸ್ಕಸ್ ಎಸೆದು(Discuss Throw) ಸಾಧನೆ ಮಾಡಿದ್ದಾರೆ.
ಆಗಸ್ಟ್ 2ರಂದು ಡಿಸ್ಕಸ್ ಥ್ರೋ ಫೈನಲ್ ಪಂದ್ಯ ನಡೆಯಲಿದ್ದು, ಕೌರ್ ಭಾರತಕ್ಕೆ ಚಿನ್ನದ ಪದಕ ತಂದುಕೊಡುವ ನಿರೀಕ್ಷೆ ಇದೆ. ಅರ್ಹತಾ ಸುತ್ತಿಗೆ ಕೇವಲ ಇಬ್ಬರು ಆಟಗಾರ್ತಿಯರು ಮಾತ್ರ ಅರ್ಹತೆ ಪಡೆಯುವಲ್ಲಿಯಶಸ್ವಿಯಾಗಿದ್ದಾರೆ. ಅಮೇರಿಕನ್ ವ್ಯಾಲರಿ ಆಲ್ಮನ್ (66.42 ಮೀ.) ಮೊದಲ ಸ್ಥಾನದೊಂದಿಗೆ ಫೈನಲ್ ಪ್ರವೇಶಿಸಿದ್ದಾರೆ. ಸೋಮವಾರ ನಡೆಯಲಿರುವ ಫೈನಲ್ ಪಂದ್ಯ ಭಾರೀ ಕುತೂಹಲ ಮೂಡಿಸಿದ್ದು, ಒಂದು ವೇಳೆ ಕೌರ್ ಚಿನ್ನದ ಪದಕ(Gold Medal)ಗೆದ್ದರೆ ಹೊಸ ಇತಿಹಾಸ ಸೃಷ್ಟಿಸಲಿದ್ದಾರೆ.
ಇದನ್ನೂ ಓದಿ: Tokyo Olympics 2020: ಅಬ್ಬರದಿಂದ ಸೆಮಿಫೈನಲ್ ಪ್ರವೇಶಿಸಿದ PV Sindhu, ಪದಕದಿಂದ ಒಂದೇ ಗೆಲುವು ದೂರ
25 ವರ್ಷದ ಪಂಜಾಬ್ ಮೂಲದ ಕಮಲ್ ಪ್ರೀತ್ ಕೌರ್(Kamalpreet Kaur)65.06 ಮೀಟರ್ ಡಿಸ್ಕಸ್ ಥ್ರೋ ಮಾಡಿ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದಾರೆ. ಕಳೆದ ತಿಂಗಳು(2021ರ ಜೂನ್) ಪಟಿಯಾಲದಲ್ಲಿ ನಡೆದಿದ್ದ ಫೆಡರೇಶನ್ ಕಪ್ ಸಿನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ನಲ್ಲಿ 66.59 ಮೀಟರ್ ಡಿಸ್ಕಸ್ ಎಸೆಯುವ ಮೂಲಕ ತಮ್ಮದೇ ಹಳೆಯ ದಾಖಲೆಯನ್ನು ಉತ್ತಮಪಡಿಸಿಕೊಂಡಿದ್ದರು. 2019ರಲ್ಲಿ ದೋಹಾದಲ್ಲಿ ಮುಕ್ತಾಯವಾದ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ನಲ್ಲಿ ಕೌರ್ 5ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು.
ಕೌರ್ ಭಾರತಕ್ಕೆ ಚಿನ್ನದ ಪಕದ ತಂದುಕೊಡಲಿದ್ದಾರೆಂಬ ನಿರೀಕ್ಷೆ ಹೆಚ್ಚಾಗಿದೆ. ಇದು ನಿಜವೇ ಆಗಿದ್ದಲ್ಲಿ ಅವರು ಹೊಸ ದಾಖಲೆಗೆ ಮುನ್ನಡಿ ಬರೆಯಲಿದ್ದಾರೆ. ಇಡೀ ದೇಶವೇ ಹೆಮ್ಮೆ ಪಡುವಂತಹ ದಾಖಲೆ ನಿರ್ಮಿಸಲಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ