Tokyo Olympics 2020 Updates: ಟೋಕಿಯೋ ಒಲಿಂಪಿಕ್ಸ್ ನಲ್ಲಿ ಚಿಗುರಿದ ಮತ್ತೊಂದು ಪದಕದ ಆಸೆ, ಕುಸ್ತಿ ಸೆಮಿಫೈನಲ್ ಗೆ ಲಗ್ಗೆ ಇಟ್ಟ ಬಜರಂಗ್ ಪುನಿಯಾ
Tokyo Olympics 2020 Updates: ಟೋಕಿಯೋ ಒಲಿಂಪಿಕ್ಸ್ ನ (Tokyo Olympics 2020) 65 ಕೆ.ಜಿ ವರ್ಗದ ಪುರುಷರ ಫ್ರೀಸ್ಟೈಲ್ ಕುಸ್ತಿ ಪಂದ್ಯಾವಳಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ (Quarter Final Match) ಇರಾನ್ ದೇಶದ ಮುರ್ತಜಾ ಗಿಯಾಸಿ ಅನ್ನು ಬಗ್ಗುಬಡಿಯುವ ಮೂಲಕ ಭಾರತೀಯ ಕುಸ್ತಿ ಪಟು ಬಜರಂಗ್ ಪುನಿಯಾ (Bajarang Punia) ಸೆಮಿಫೈನಲ್ ಪ್ರವೇಶಿಸಿದ್ದಾರೆ.
Tokyo Olympics 2020 Updates: ಟೋಕಿಯೋ ಒಲಿಂಪಿಕ್ಸ್ ನ (Tokyo Olympics 2020) 65 ಕೆ.ಜಿ ವರ್ಗದ ಪುರುಷರ ಫ್ರೀಸ್ಟೈಲ್ ಕುಸ್ತಿ ಪಂದ್ಯಾವಳಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ (Quarter Final Match) ಇರಾನ್ ದೇಶದ ಮುರ್ತಜಾ ಗಿಯಾಸಿ ಅನ್ನು ಬಗ್ಗುಬಡಿಯುವ ಮೂಲಕ ಭಾರತೀಯ ಕುಸ್ತಿ ಪಟು ಬಜರಂಗ್ ಪುನಿಯಾ (Bajarang Punia) ಸೆಮಿಫೈನಲ್ ಪ್ರವೇಶಿಸಿದ್ದಾರೆ. ಸೆಮಿ ಫೈನಲ್ ಪಂದ್ಯದಲ್ಲಿ ಬಜರಂಗ್ ಪುನಿಯಾ ಮೂರು ಬಾರಿ ವಿಶ್ವ ಚಾಂಪಿಯನ್ ಆಗಿರುವ ಹಾಜಿ ಅಲಿಯೇವ್ ಅವರನ್ನು ಎದುರಿಸಲಿದ್ದಾರೆ. ಈ ಪಂದ್ಯ ಮಧ್ಯಾಹ್ನ 2 ಗಂಟೆ 50 ನಿಮಿಷಕ್ಕೆ ಆರಂಭಗೊಳ್ಳಲಿದೆ.
Tokyo Olympics: ಕೈ ಜಾರಿದ ಕಂಚಿನ ಪದಕ, ಭಾರತೀಯ ಮಹಿಳಾ ಹಾಕಿ ತಂಡದ ಕನಸು ಭಗ್ನ
ಇಂದಿನ ಈ ಪಂದ್ಯದ ಮೂಲಕ ಬಜರಂಗ್ ಪುನಿಯಾ ಬಳಿ ಭಾರತಕ್ಕಾಗಿ ಕುಸ್ತಿಯಲ್ಲಿ ಮೊದಲ ಚಿನ್ನದ ಪದಕ ಗೆಲ್ಲುವ ಸುವರ್ಣಾವಕಾಶವಿದೆ. ಆದರೆ, ಸೆಮಿ ಫೈನಲ್ ಪಂದ್ಯದಲ್ಲಿ ಬಜರಂಗ್ ಮುಂದೆ ತುಂಬಾ ದೊಡ್ಡ ಸವಾಲಿದೆ. ಸೆಮಿ ಫೈನಲ್ ನಲ್ಲಿ ಅವರು ಮೂರು ಬಾರಿ ವಿಶ್ವ ಚಾಂಪಿಯನ್ ಆಗಿರುವ ಹಾಜಿ ಎಲಿಯೇವ್ ಇದ್ದಾರೆ. ಆದರೆ, ಈ ಹಿಂದೆಯೂ ಕೂಡ ಬಜರಂಗ್ ತಮ್ಮ ವೃತ್ತಿಜೀವನದಲ್ಲಿ ಹಲವು ದೊಡ್ಡ ದೊಡ್ಡ ಕುಸ್ತಿ ಪಟುಗಳನ್ನು ಚಿತ್ ಮಾಡಿರುವುದು ಇಲ್ಲಿ ಗಮನಾರ್ಹ.
ಇದನ್ನೂ ಓದಿ-Tokyo Olympics 2020 : ಬೆಳ್ಳಿಗೆ ಮುತ್ತಿಟ್ಟ ಕುಸ್ತಿಪಟು ರವಿ ದಹಿಯಾ
ಇನ್ನೊಂದೆಡೆ ಟೋಕಿಯೋ ಒಲಿಂಪಿಕ್ಸ್ (Tokyo Olympics 2020) ಪಂದ್ಯಾವಳಿಯ ಗಾಲ್ಫ್ (Golf) ವಿಭಾಗದಲ್ಲಿ ಭಾರತಕ್ಕೆ ರಜತ ಪದಕ ಸಿಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಮೂರನೇ ರೌಂಡ್ ಮುಕ್ತಾಯದ ಬಳಿಕ ಭಾರತದ ಆದಿತಿ ಅಶೋಕ್ (Aaditi Ashok) ಎರಡನೇ ಸ್ಥಾನದಲ್ಲಿ ಮುಂದುವರೆದಿದ್ದಾರೆ. ನಾಲ್ಕನೇ ರೌಂಡ್ ನಾಳೆ ಆಡಲಾಗುವುದು. ಆದ್ರೆ ಮಳೆಯ ಕಾರಣ ಆದಿತಿ ಅಶೋಕ್ ಅವರ ರಜತ ಪದಕದ ಸಾಧ್ಯತೆಗಳು ಹೆಚ್ಚಾಗ ತೊಡಗಿವೆ. ಇದರಿಂದ ಭಾರತಕ್ಕೆ ಗಾಲ್ಫ್ ನಲ್ಲಿ ಮೊದಲ ಪದಕ ಸಿಗುವ ಎಲ್ಲಾ ಸಾಧ್ಯತೆಗಳು ಗೋಚರಿಸುತ್ತಿವೆ.
ಇದನ್ನೂ ಓದಿ-ಒಲಿಂಪಿಕ್ ನಲ್ಲಿ ಪದಕ ಗೆದ್ದ ಹಾಕಿ ತಂಡದ ಆಟಗಾರರಿಗೆ ಬಹುಮಾನಗಳ ಸುರಿ ಮಳೆ, ಪ್ರತಿ ಆಟಗಾರನಿಗೂ ನಗದು ಘೋಷಣೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ