ನವದೆಹಲಿ: ಟೋಕಿಯೊ ಒಲಂಪಿಕ್ಸ್ ಕ್ರೀಡಾಕೂಟದ ಮಹಿಳೆಯರ 49 ಕೆಜಿ ವಿಭಾಗದ ಭಾರ ಎತ್ತುವ ಸ್ಪರ್ಧೆಯಲ್ಲಿ ಬೆಳ್ಳಿ ಗೆದ್ದಿರುವ ಭಾರತದ ಮೀರಾಬಾಯಿ ಚಾನುಗೆ ಚಿನ್ನದ ಅವಕಾಶವೊಂದು ಹುಡುಕಿಕೊಂಡು ಬಂದಿದೆ. ಈ ಸ್ಪರ್ಧೆಯಲ್ಲಿ 210 ಕೆಜಿ ತೂಕವನ್ನು ಎತ್ತಿ ಚಿನ್ನದ ಪದಕ ಕೊರಳಿಗೇರಿಸಿಕೊಂಡಿರುವ ಚೀನಾದ ವೇಟ್‌ಲಿಫ್ಟರ್ ಝಿಹೈ ಹು ಅವರಿಗೆ ಇದೀಗ ಡೋಪಿಂಗ್(ಉದ್ದೀಪನ ಮದ್ದು) ಕಂಟಕ ಎದುರಾಗಿದೆ.


COMMERCIAL BREAK
SCROLL TO CONTINUE READING

ಹೌದು, ಟೋಕಿಯೊ ಒಲಂಪಿಕ್ಸ್ (Tokyo Olympic 2020)ನಲ್ಲಿ ಶನಿವಾರ(ಜುಲೈ 24) ಚಿನ್ನ ಗೆದ್ದಿರುವ ಚೀನಾದ ವೇಟ್‌ಲಿಫ್ಟರ್ ಝಿಹೈ ಹು ಅವರಿಗೆ ಕಾಮನ್‌ವೆಲ್ತ್‌ ಅಧಿಕಾರಿಗಳು ಡೋಪಿಂಗ್ ಟೆಸ್ಟ್(Doping Test) ನಡೆಸಲಿದ್ದಾರೆ. ಒಂದು ವೇಳೆ ಪರೀಕ್ಷೆಯಲ್ಲಿ ಅವರು ಉದ್ದೀಪನಾ ಮದ್ದು ಸೇವಿಸಿರುವುದು ಖಚಿತವಾದರೆ ಭಾರತದ ಮೀರಾಬಾಯಿ ಚಾನು ಅವರಿಗೆ ಬೆಳ್ಳಿಯ ಬದಲು ಚಿನ್ನದ ಪದಕ ಸಿಗಲಿದೆ. ಹೀಗಾಗಿ ಟೋಕಿಯೊದಲ್ಲಿಯೇ ಇರುವಂತೆ ಅವರಿಗೆ ಅಧಿಕಾರಿಗಳು ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.


ಇದನ್ನೂ ಓದಿ: IPL 2021: ಇನ್ನುಳಿದ ಪಂದ್ಯಗಳ ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ, ಫೈನಲ್ ಯಾವಾಗ ಗೊತ್ತಾ..?


ಚೀನಾದ ವೇಟ್‌ಲಿಫ್ಟರ್ ಝಿಹೈ ಹು(Zhihui Hou) ಅವರ ರಕ್ತದ ಮಾದರಿ ಸಂಗ್ರಹಿಸಿ ಡೋಪಿಂಗ್ ಪರೀಕ್ಷೆ(ಉದ್ದೀಪನ ಮದ್ದು ಪರೀಕ್ಷೆ) ನಡೆಯಲಿದೆ. ಈ ಪರೀಕ್ಷೆ ಖಂಡಿತವಾಗಿಯೂ ನಡೆಯಲಿದ್ದು, ಫಲಿತಾಂಶ ಏನಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.  


ಝಿಹೈ ಹು 210 ಕೆಜಿ ತೂಕವನ್ನು ಎತ್ತುವ ಮೂಲಕ ಹೊಸ ಒಲಂಪಿಕ್ ದಾಖಲೆಯನ್ನು ನಿರ್ಮಿಸಿದ್ದರು. ಒಂದು ವೇಳೆ ಅವರು ಉದ್ದೀಪನಾ ಮದ್ದು ಸೇವಿಸಿರುವುದು ನಿಜವಾದಲ್ಲಿ ಬೆಳ್ಳಿ ಗೆದ್ದ ಕ್ರೀಡಾಪಟುವಿಗೆ ಚಿನ್ನದ ಪದಕವನ್ನು ನೀಡಲಾಗುತ್ತದೆ. ಹೀಗಾಗಿ ಮೀರಾಬಾಯಿ ಚಾನು(Mirabai Chanu) ಅವರಿಗೆ ಚಿನ್ನದ ಪದಕ ಸಿಗುವ ಸಾಧ್ಯತೆ ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ.


ಇದನ್ನೂ ಓದಿ: Tokyo Olympics 2020: ಗೆಲುವಿನ ನಗೆ ಬೀರಿ ಶುಭಾರಂಭ ಮಾಡಿದ ಭಾರತದ ಪುರುಷರ ಹಾಕಿ ತಂಡ


ಮಹಿಳೆಯರ 49 ಕೆಜಿ ವಿಭಾಗದ ಭಾರ ಎತ್ತುವ ಸ್ಪರ್ಧೆಯಲ್ಲಿ 4 ಸುತ್ತಿನ ಪ್ರಯತ್ನಗಳಲ್ಲಿ ಚಾನು ಒಟ್ಟು 202 ಕೆಜಿ (ಸ್ನ್ಯಾಚ್‌ನಲ್ಲಿ 87 ಕೆಜಿ ಮತ್ತು ಕ್ಲೀನ್ ಹಾಗೂ ಜರ್ಕ್‌ನಲ್ಲಿ 115 ಕೆಜಿ) ತೂಕವನ್ನು ಎತ್ತಿದ್ದರು. ಅದರಂತೆ ಇಂಡೋನೇಷ್ಯಾದ ವಿಂಡಿ ಕ್ಯಾಂಟಿಕಾ ಐಸಾ 194 ಕೆಜಿ ತೂಕ ಎತ್ತುವ ಮೂಲಕ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದರು. 2000ರ ಸಿಡ್ನಿ ಒಲಂಪಿಕ್ಸ್ ನಲ್ಲಿಕರ್ಣಂ ಮಲ್ಲೇಶ್ವರಿ(Karnam Malleswari) 69 ಕೆಜಿ ವಿಭಾಗದಲ್ಲಿ ಕಂಚು ಗೆದ್ದು ಭಾರತಕ್ಕೆ ಮೊದಲ ಪದಕದ ಸವಿ ಉಣಿಸಿದ್ದರು. ಅವರ ಬಳಿಕ ಬೆಳ್ಳಿ ಪದಕ ಗೆದ್ದಿರುವ ಮೀರಾಬಾಯಿ ಚಾನು 2ನೇ ಭಾರತೀಯ ವೇಟ್‌ಲಿಫ್ಟರ್ ಎನಿಸಿಕೊಂಡಿದ್ದಾರೆ.   


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ