IPL 2021: ಇನ್ನುಳಿದ ಪಂದ್ಯಗಳ ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ, ಫೈನಲ್ ಯಾವಾಗ ಗೊತ್ತಾ..?

ಸೆ.19ರಂದು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ಮೊದಲ ಹಣಾಹಣಿ.

Written by - Zee Kannada News Desk | Last Updated : Jul 26, 2021, 11:30 AM IST
  • ಯುಎಇಯಲ್ಲಿ 27 ದಿನಗಳ ಅವಧಿಯಲ್ಲಿ ಇನ್ನುಳಿದ 31 ಪಂದ್ಯಗಳು ನಡೆಯಲಿವೆ ಎಂದ ಬಿಸಿಸಿಐ
  • 13 ಪಂದ್ಯಗಳು ದುಬೈನಲ್ಲಿ, 10 ಪಂದ್ಯಗಳು ಶಾರ್ಜಾದಲ್ಲಿ ಮತ್ತು 8 ಪಂದ್ಯಗಳು ಅಬುಧಾಬಿಯಲ್ಲಿ ನಡೆಯಲಿವೆ
  • ಅಕ್ಟೋಬರ್ 15ರಂದು ದುಬೈನಲ್ಲಿ ಐಪಿಎಲ್ 2021ರ ಫೈನಲ್ ಪಂದ್ಯವು ನಡೆಯಲಿದೆ
IPL 2021: ಇನ್ನುಳಿದ ಪಂದ್ಯಗಳ ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ, ಫೈನಲ್ ಯಾವಾಗ ಗೊತ್ತಾ..? title=
ಇನ್ನುಳಿದ ಪಂದ್ಯಗಳ ಐಪಿಎಲ್ ವೇಳಾಪಟ್ಟಿ ಬಿಡುಗಡೆಯಾಗಿದೆ

ನವದೆಹಲಿ: ಕೊರೊನಾ ಸಾಂಕ್ರಾಮಿಕದಿಂದ ರದ್ದಾಗಿದ್ದ 14ನೇ ಆವೃತ್ತಿಯ ಇನ್ನುಳಿದ ಪಂದ್ಯಗಳ ವೇಳಾಪಟ್ಟಿಯನ್ನು ಬಿಸಿಸಿಐ ಬಿಡುಗಡೆ ಮಾಡಿದೆ. ಯುಎಇಯಲ್ಲಿ 27 ದಿನಗಳ ಅವಧಿಯಲ್ಲಿ ಇನ್ನುಳಿದ 31 ಪಂದ್ಯಗಳು ನಡೆಯಲಿವೆ ಅಂತಾ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ತಿಳಿಸಿದೆ.

ಕೋವಿಡ್-19 ಕಾರಣದಿಂದ ಮೇ ತಿಂಗಳಿನಲ್ಲಿ 14ನೇ ಆವೃತ್ತಿಯ ಐಪಿಎಲ್ ಪಂದ್ಯಾವಳಿ(IPL 2021)ಯನ್ನು ಮುಂದೂಡಲಾಗಿತ್ತು. ಸೆಪ್ಟೆಂಬರ್ 19ರಂದು ಮತ್ತೆ ಪಂದ್ಯಾವಳಿ ಆರಂಭವಾಗಲಿದ್ದು, ಚೆನ್ನೈ ಸೂಪರ್ ಕಿಂಗ್ಸ್(Chennai Super Kings) ಮತ್ತು ಮುಂಬೈ ಇಂಡಿಯನ್ಸ್ ನಡುವೆ ಮೊದಲ ಹಣಾಹಣಿ ನಡೆಯಲಿದೆ.

ಇದನ್ನೂ ಓದಿ: Tokyo Olympics 2020: ಮೀರಾಬಾಯಿ ಚಾನುಗೆ ಜೀವನಪೂರ್ತಿ ಉಚಿತ ಪಿಜ್ಜಾ ಘೋಷಿಸಿದ ಡೊಮಿನೊಸ್

ಸೆಪ್ಟೆಂಬರ್ 20ರಂದು ಅಬುಧಾಬಿಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal Challengers Bangalore) ಮುಖಾಮುಖಿಯಾಗಲಿವೆ. ಸೆಪ್ಟೆಂಬರ್ 24ರಂದು ಶಾರ್ಜಾದಲ್ಲಿ ಆರ್‌ಸಿಬಿ(RCB) ತಂಡವು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೆಣಸಲಿದೆ.  31 ಪಂದ್ಯಗಳ ಪೈಕಿ 13 ಪಂದ್ಯಗಳು ದುಬೈನಲ್ಲಿ, 10 ಪಂದ್ಯಗಳು ಶಾರ್ಜಾದಲ್ಲಿ ಮತ್ತು 8 ಪಂದ್ಯಗಳು ಅಬುಧಾಬಿಯಲ್ಲಿ ನಡೆಯಲಿವೆ.

IPL 2021 Schedule

14ನೇ ಆವೃತ್ತಿಯ ಐಪಿಎಲ್ ಪಂದ್ಯಾವಳಿ(IPL 2021)ಯಲ್ಲಿ ಪ್ರತಿತಂಡ 12 ಪಂದ್ಯಗಳನ್ನು ಆಡಬೇಕಾಗಿದೆ. ಈಗಾಗಲೇ ಭಾರತದಲ್ಲಿ ಪ್ರತಿತಂಡ 5 ಪಂದ್ಯಗಳನ್ನು ಆಡಿರುವುದರಿಂದ ಇನ್ನುಳಿದ 7 ಪಂದ್ಯಗಳಲ್ಲಿ ತಮ್ಮ ಎದುರಾಳಿ ತಂಡದ ವಿರುದ್ಧ ಸೆಣಸಾಡಲಿವೆ. ಮೊದಲ ಪಂದ್ಯವು ಭಾರತೀಯ ಕಾಲಮಾನ ಮಧ್ಯಾಹ್ನ 3.30ಕ್ಕೆ( ಗಲ್ಫ್ ಸ್ಟ್ಯಾಂಡರ್ಡ್ ಸಮಯ ಮಧ್ಯಾಹ್ನ 2 ಗಂಟೆ) ಪ್ರಾರಂಭವಾಗಲಿವೆ. ಎಲ್ಲಾ ಸಂಜೆಯ ಪಂದ್ಯಗಳು ಭಾರತೀಯ ಕಾಲಮಾನ 7.30ಕ್ಕೆ(ಗಲ್ಫ್ ಸ್ಟ್ಯಾಂಡರ್ಡ್ ಸಮಯ ಸಂಜೆ 6 ಗಂಟೆ) ಶುರುವಾಗಲಿವೆ.

ಇದನ್ನೂ ಓದಿ: India vs England 2021: ಬೆರಳಿನ ಗಾಯದಿಂದಾಗಿ ಟೆಸ್ಟ್ ಸರಣಿಯಿಂದ ವಾಷಿಂಗ್ಟನ್ ಸುಂದರ್ ಹೊರಕ್ಕೆ

ಲೀಗ್ ನ ಕೊನೆಯ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ದೆಹಲಿ ಕ್ಯಾಪಿಟಲ್ಸ್(Delhi Capitals) ತಂಡಗಳ ನಡುವೆ ಅಕ್ಟೋಬರ್ 8ರಂದು ದುಬೈನಲ್ಲಿ ನಡೆಯಲಿದೆ.  ಮೊದಲ ಕ್ವಾಲಿಫೈಯರ್‌ ಪಂದ್ಯ ಅಕ್ಟೋಬರ್ 10ರಂದು ದುಬೈನಲ್ಲಿ ನಡೆಯಲಿದ್ದು, ಅದೇ ರೀತಿ ಎಲಿಮಿನೇಟರ್ ಮತ್ತು 2ನೇ ಕ್ವಾಲಿಫೈಯರ್ ಪಂದ್ಯವು ಕ್ರಮವಾಗಿ ಅಕ್ಟೋಬರ್ 11 ಮತ್ತು 13ರಂದು ಶಾರ್ಜಾದಲ್ಲಿ ನಡೆಯಲಿವೆ. ಅಕ್ಟೋಬರ್ 15ರಂದು ದುಬೈನಲ್ಲಿ ಐಪಿಎಲ್ ಫೈನಲ್ ಪಂದ್ಯವು ನಡೆಯಲಿದೆ. ಇನ್ನುಳಿದ ಐಪಿಎಲ್ ಪಂದ್ಯಗಳನ್ನು ಕಣ್ತುಂಬಿಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

 

Trending News