Tokyo Paralympics 2020: ಬ್ಯಾಡ್ಮಿಂಟನ್ ನಲ್ಲಿ ಚಿನ್ನ ಗೆದ್ದು, ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದ ಕೊನೆಯ ದಿನವನ್ನು ಅವಿಸ್ಮರಣೀಯವನ್ನಾಗಿಸಿದ ಕೃಷ್ಣಾ ನಾಗರ್
Tokyo Paralympics 2020: ಜಪಾನ್ ರಾಜಧಾನಿ ಟೋಕಿಯೊದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ ಕ್ರೀಡಾಕೂಟದ ಕೊನೆಯ ದಿನವೂ ಕೂಡ ಭಾರತದ (India) ಪದಕಗಳ ಬೇಟೆ ಮುಂದುವರೆದಿದೆ. ಭಾನುವಾರ, ಪ್ಯಾರಾ ಬ್ಯಾಡ್ಮಿಂಟನ್ ಆಟಗಾರ ಕೃಷ್ಣ ನಾಗರ್ (Krishna Nagar) ಎಸ್‌ಎಚ್ 6 (Mens Singles Badminton SH6 Event)ವಿಭಾಗದಲ್ಲಿ ಚಿನ್ನ ಗೆದ್ದು ಭಾರತಕ್ಕೆ 19 ನೇ ಪದಕವನ್ನು ತಂದುಕೊಟ್ಟಿದ್ದಾರೆ.
Tokyo Paralympics 2020: ಜಪಾನ್ ರಾಜಧಾನಿ ಟೋಕಿಯೊದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ ಕ್ರೀಡಾಕೂಟದ ಕೊನೆಯ ದಿನವೂ ಕೂಡ ಭಾರತದ (India) ಪದಕಗಳ ಬೇಟೆ ಮುಂದುವರೆದಿದೆ. ಭಾನುವಾರ, ಪ್ಯಾರಾ ಬ್ಯಾಡ್ಮಿಂಟನ್ ಆಟಗಾರ ಕೃಷ್ಣ ನಾಗರ್ (Krishna Nagar) ಎಸ್‌ಎಚ್ 6 (Mens Singles Badminton SH6 Event)ವಿಭಾಗದಲ್ಲಿ ಚಿನ್ನ ಗೆದ್ದು ಭಾರತಕ್ಕೆ 19 ನೇ ಪದಕವನ್ನು ತಂದುಕೊಟ್ಟಿದ್ದಾರೆ.
Suhas Yatiraj) ಬ್ಯಾಡ್ಮಿಂಟನ್‌ನ ಎಸ್‌ಎಲ್ 4 ವಿಭಾಗದಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಇತಿಹಾಸ ಬರೆದಿದ್ದಾರೆ ದೇಶ ಈಗ ಮಿಶ್ರ ಡಬಲ್ಸ್ ನಲ್ಲಿ ಪ್ರಮೋದ್ ಭಗತ್ (Pramod Bhagat) ಮತ್ತು ಪಲಕ್ ಕೊಹ್ಲಿ (Palak Kohli) ಜೋಡಿಯಿಂದ ಕಂಚಿನ ಪದಕದ ನಿರೀಕ್ಷೆಯಲ್ಲಿದೆ.
ಎಸ್ಎಲ್ 6 ಕ್ಲಾಸ್ ಫೈನಲ್ ನಲ್ಲಿ, ಕೃಷ್ಣ ನಾಗರ್ 21-17, 16-21, 21-17 ರಲ್ಲಿ ಹಾಂಕಾಂಗ್ ನ ಚು ಮನ್ ಕೀ ಅವರನ್ನು ಸೋಲಿಸಿದ್ದಾರೆ.
ಪ್ಯಾರಾಲಿಂಪಿಕ್ಸ್ ಕ್ರೀಡಾ ಕೂಟದಲ್ಲಿ (Paralympics 2020) ಚಿನ್ನ ಗೆದ್ದ 8ನೇ ಭಾರತೀಯ
ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಇದು ಭಾರತದ 5 ನೇ ಚಿನ್ನದ ಪದಕವಾಗಿದೆ. ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಕೃಷ್ಣಾ ನಾಗರ್ ಗೂ ಮೊದಲು ಪ್ರಮೋದ್ ಭಗತ್ (ಬ್ಯಾಡ್ಮಿಂಟನ್), ಮನೀಶ್ ನರ್ವಾಲ್ (ಶೂಟಿಂಗ್), ಸುಮಿತ್ ಆಂಟಿಲ್ (ಜಾವೆಲಿನ್ ಥ್ರೋ) ಮತ್ತು ಅವನಿ ಲೇಖ್ರಾ (ಶೂಟಿಂಗ್) ಭಾರತಕ್ಕೆ ಚಿನ್ನ ತಂದುಕೊಟ್ಟಿದ್ದಾರೆ.
Tokyo Paralympic 2020: ಭಾರತಕ್ಕೆ ಒಲಿದ ಮತ್ತೊಂದು ಸ್ವರ್ಣ ಮತ್ತು ಬೆಳ್ಳಿ, ಒಂದೇ ಸ್ಪರ್ಧೆಯಲ್ಲಿ ಎರಡು ಪದಕ ತನ್ನದಾಗಿಸಿಕೊಂಡ ಭಾರತ
ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದ 8 ನೇ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಕೃಷ್ಣ ನಾಗರ ಪಾತ್ರರಾಗಿದ್ದಾರೆ. ಮುರಳಿಕಾಂತ್ ಪೆಟ್ಕರ್ 1972 ರಲ್ಲಿ ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತದ ಮೊದಲ ಚಿನ್ನ ತಂದುಕೊಟ್ಟಿದ್ದರು. ಇದರ ನಂತರ, ದೇವೇಂದ್ರ ಜಜಾರಿಯಾ ಅವರು ಅಥೆನ್ಸ್ ಒಲಿಂಪಿಕ್ಸ್ 2004 ಮತ್ತು ರಿಯೊ ಒಲಿಂಪಿಕ್ಸ್ 2016 ರಲ್ಲಿ ಜಾವೆಲಿನ್ ಥ್ರೋನಲ್ಲಿ ಭಾರತಕ್ಕೆ ಚಿನ್ನ ತಂದುಕೊಟ್ಟಿದ್ದರು. ಮರಿಯಪ್ಪನ್ ತಂಗವೇಲು ರಿಯೋ ಕ್ರೀಡಾಕೂಟದಲ್ಲಿ ಎತ್ತರ ಜಿಗಿತದಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದರು ಎಂಬುದು ಇಲ್ಲಿ ಗಮನಾರ್ಹ.
ಇದನ್ನೂ ಓದಿ-Tokyo Paralympics: ಅರ್ಚರಿಯಲ್ಲಿ ಕಂಚು ಗೆದ್ದು ಇತಿಹಾಸ ನಿರ್ಮಿಸಿದ ಹರ್ವಿಂದರ್ ಸಿಂಗ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.