ನವದೆಹಲಿ : ಭಾರತೀಯ ಬ್ಯಾಡ್ಮಿಂಟನ್ ಆಟಗಾರ ಮತ್ತು ಗೌತಮ್ ಬುದ್ಧ ನಗರ ಡಿಎಂ ಕನ್ನಡಿಗ ಸುಹಾಸ್ ಎಲ್ ಯತಿರಾಜ್ ಟೋಕಿಯೊ ಪ್ಯಾರಾಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ.


COMMERCIAL BREAK
SCROLL TO CONTINUE READING

ಇತಿಹಾಸ ಸೃಷ್ಟಿಸಿದ ಸುಹಾಸ್


ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್ ಎಸ್ಎಲ್ 4 ನ ಅಂತಿಮ ಪಂದ್ಯದಲ್ಲಿ, ಸುಹಾಸ್ ಯಥಿರಾಜ್(Suhas L Yathiraj) ಮೊದಲ ಗೇಮ್ ಅನ್ನು 21-15ರಿಂದ ಗೆದ್ದರು, ಆದರೆ ಎರಡನೇ ಗೇಮ್ ನಲ್ಲಿ ಫ್ರಾನ್ಸ್ ನ ಲ್ಯೂಕಾಸ್ ಮಜೂರ್ 21-17ರಲ್ಲಿ ಗೆದ್ದರು, ನಂತರ ಮೂರನೇ ಮತ್ತು ಕೊನೆಯ ಪಂದ್ಯದಲ್ಲಿ ಯತಿರಾಜ್ 15-21ರಿಂದ ಸೋಲುವ ಮೂಲಕ ಅವರು ಚಿನ್ನದ ಪದಕದಿಂದ ವಂಚಿತರಾಗಿ ಬೆಳ್ಳಿ ಪದಕಕ್ಕೆ ತೃಪ್ತರಾದರು.


ಇದನ್ನೂ ಓದಿ : Tokyo Paralympics: ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್ ಎಸ್‌ಎಲ್ 3 ನಲ್ಲಿ ಕಂಚು ಗೆದ್ದ ಮನೋಜ್ ಸರ್ಕಾರ್


ಸುಹಾಸ್ ಗೆ ಪ್ರಧಾನಿ ಮೋದಿ ಅಭಿನಂದನೆ


ಪ್ರಧಾನಿ ನರೇಂದ್ರ ಮೋದಿ(PM Narendra Modi)ಯವರು ಸುಹಾಸ್ ಗೆಲುವಿಗೆ ಅಭಿನಂದಿಸಿದ್ದಾರೆ. ಈ ಕುರಿತು ಟ್ವಿಟರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು, 'ಸೇವೆ ಮತ್ತು ಕ್ರೀಡೆಯ ಅದ್ಭುತ ಸಂಯೋಜನೆ, ಸುಹಾಸ್ ಯತಿರಾಜ್ ತನ್ನ ಅದ್ಭುತ ಆಟದ ಮೂಲಕ ಇಡೀ ರಾಷ್ಟ್ರದ ಗಮನವನ್ನು ತನ್ನತ್ತ ಸೆಳೆದಿದ್ದಾರೆ. ಬ್ಯಾಡ್ಮಿಂಟನ್ ನಲ್ಲಿ ಬೆಳ್ಳಿ ಪದಕ ಗೆದ್ದ ಅವರಿಗೆ ಅಭಿನಂದನೆಗಳು. ಅವರ ಭವಿಷ್ಯಕ್ಕೆ ಶುಭ ಹಾರೈಕೆಗಳು ಎಂದು ಬರೆದುಕೊಂಡಿದ್ದಾರೆ.


ನೋಯ್ಡಾದ ಡಿಎಂ ಕಚೇರಿಯಲ್ಲಿ ವಿಜಯದ ಸಂಭ್ರಮ


ಟೋಕಿಯೊ ಪ್ಯಾರಾಲಿಂಪಿಕ್ಸ್‌(Tokyo Paralympics 2021)ನಲ್ಲಿ ಸುಹಾಸ್ ಎಲ್ ಯತಿರಾಜ್ ಅವರ ಯಶಸ್ಸಿನ ಬಗ್ಗೆ ದೇಶದದಲ್ಲಿ  ಸಂತೋಷದ ವಾತಾವರಣವಿದೆ ತುಂಬಿದೆ. ಅಲ್ಲದೆ, ವಿಶೇಷವಾಗಿ ಅವರು ಕಾರ್ಯನಿರ್ವಹಿಸುವ ಜಿಲ್ಲೆ ಗೌತಮ್ ಬುಧ್ ನಗರದಲ್ಲಿ (ನೋಯ್ಡಾ) ಜನರು ಮತ್ತು ಕಚೇರಿಯಲ್ಲಿ ಸಂಭ್ರಮಾಚರಣೆ ಜೋರಾಗಿತ್ತು. ಡಿಎಂ ಸುಹಾಸ್ ಇಲ್ಲಿಯವರೆಗೆ ಅನೇಕ ಪದಕಗಳನ್ನು ಗೆದ್ದಿದ್ದಾರೆ. 2016 ರ ಬೀಜಿಂಗ್‌ನಲ್ಲಿ ನಡೆದ ಏಷ್ಯನ್ ಪ್ಯಾರಾ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ವೃತ್ತಿಪರ ಅಂತರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಗೆದ್ದ ಮೊದಲ ಭಾರತೀಯ ಅಧಿಕಾರಿಯಾದರು. ಆ ಸಮಯದಲ್ಲಿ ಅವರು ಅಜಮ್‌ಗಡ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿ ಕೆಲಸ ಮಾಡುತ್ತಿದ್ದರು. ಈ ಟೂರ್ನಿಯಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಭಾರತ ಮತ್ತು ಅವರ ಹೆಸರನ್ನು ವಿಶ್ವದಾದ್ಯಂತ ಹೆಸರಾದರು.


ಇದನ್ನೂ ಓದಿ : Tokyo Paralympics 2020: ಭಾರತಕ್ಕೆ ಒಲಿದ 4ನೇ ಚಿನ್ನ, ಬ್ಯಾಡ್ಮಿಂಟನ್ ನಲ್ಲಿ ತ್ರಿವರ್ಣ ಧ್ವಜ ಹಾರಿಸಿದ Pramod Bhagat


ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತಕ್ಕೆ 18 ಪದಕಗಳು


4 ಚಿನ್ನ, 8 ಬೆಳ್ಳಿ ಮತ್ತು 6 ಕಂಚಿನೊಂದಿಗೆ ಒಟ್ಟು 18 ಪದಕಗಳು ಈಗ ಭಾರತ(India)ದ ಪಾಲಾಗಿವೆ. ಇದು ಈ ಆಟದ ಇತಿಹಾಸದಲ್ಲಿ ಭಾರತದ ಅತ್ಯುತ್ತಮ ಪ್ರದರ್ಶನ ನೀಡಿದೆ. ಟೋಕಿಯೊ ಪ್ಯಾರಾಲಿಂಪಿಕ್ಸ್‌ನ ಪದಕ ಪಟ್ಟಿಯಲ್ಲಿ ಭಾರತವು 26 ನೇ ಸ್ಥಾನವನ್ನು ತಲುಪಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.