Impact Players, IPL 2024: ಐಪಿಎಲ್’ರಲ್ಲಿ ಪ್ರತಿ ವರ್ಷ ಅನೇಕ ಆಟಗಾರರು ರಾತ್ರೋರಾತ್ರಿ ಸ್ಟಾರ್’ಗಳಾಗಿ ಹೊರಹೊಮ್ಮುತ್ತಾರೆ. ಈ ಬಾರಿಯೂ ಅಂತಹದ್ದೇ ರೀತಿಯಲ್ಲಿ ಕೆಲ ಆಟಗಾರರು ಮಿಂಚುತ್ತಿದ್ದು, ಯಾರೆಂಬುದನ್ನು ತಿಳಿಯೋಣ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ರಾತ್ರಿ ಊಟ ಮಾಡಿ ಮಲಗುವ ಮುಂಚೆ ಇವುಗಳನ್ನು ತಿನ್ನಿ: ಗೊರಕೆ ತಾಪತ್ರಯ ಪರ್ಮನೆಂಟ್ ಆಗಿ ದೂರವಾಗುತ್ತೆ!


ಐಪಿಎಲ್ ಪ್ರಾರಂಭವಾಗಿ 10 ದಿನಗಳಷ್ಟೇ ಆಗಿದೆ. ಆದರೆ 5 ಇಂಪ್ಯಾಕ್ಟ್ ಪ್ಲೇಯರ್ಸ್ ತಮ್ಮದೇ ಶೈಲಿಯಿಂದ ಅಬ್ಬರಿಸುತ್ತಿದ್ದಾರೆ. ಅವರಲ್ಲಿ ಒಬ್ಬರು ಮುಂಬೈನ ಯುವ ಬ್ಯಾಟ್ಸ್‌ಮನ್ ಡೆವಾಲ್ಡ್ ಬ್ರೆವಿಸ್. ಗುಜರಾತ್ ವಿರುದ್ಧದ ಪಂದ್ಯದಲ್ಲಿ ರೋಹಿತ್ ಜೊತೆಗೂಡಿ ಬಿರುಸಿನ ಇನ್ನಿಂಗ್ಸ್ ಆಡಿದ್ದರು. ಬ್ರೂಯಿಸ್ ಕೇವಲ 38 ಎಸೆತಗಳಲ್ಲಿ 46 ರನ್ ಗಳಿಸಿದ್ದು, ಅದರಲ್ಲಿ 2 ಬೌಂಡರಿ ಮತ್ತು 3 ಸಿಕ್ಸರ್‌ ಸೇರಿದ್ದವು.


ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಗಮಿಸಿದ ಅಭಿಷೇಕ್ ಪೊರೆಲ್ ಡೆಲ್ಲಿ ತಂಡಕ್ಕೆ ಜೀವ ತುಂಬಿದ್ದರು. ಕೇವಲ 128 ರನ್ ಗಳಿಸುವಷ್ಟರಲ್ಲಿ ಡೆಲ್ಲಿ ತಂಡ 6 ಬ್ಯಾಟ್ಸ್‌ಮನ್‌ಗಳನ್ನು ಕಳೆದುಕೊಂಡಿತ್ತು. ಆ ಸಂದರ್ಭದಲ್ಲಿ ಆಗಮಿಸಿದ ಅಭಿಷೇಕ್ ಪೊರೆಲ್. ಕೇವಲ 10 ಎಸೆತಗಳಲ್ಲಿ 4 ಬೌಂಡರಿ ಹಾಗೂ 2 ಸಿಕ್ಸರ್ ಒಳಗೊಂಡಂತೆ 32 ರನ್ ಸಿಡಿಸಿದರು.


ಕಳೆದ ಋತುವಿನಲ್ಲಿ 22 ವರ್ಷದ ಭಾರತದ ಯುವ ಆಟಗಾರ ಸಾಯಿ ಸುದರ್ಶನ್ ಬ್ಯಾಟಿಂಗ್’ನಲ್ಲಿ ಅದ್ಭುತ ಸೃಷ್ಟಿಸಿದ್ದರು. ಐಪಿಎಲ್ 2024 ರಲ್ಲೂ ಒಂದರ ನಂತರ ಒಂದರಂತೆ ಪ್ರಬಲ ಇನ್ನಿಂಗ್ಸ್‌ ಆಡುತ್ತಿರುವ ಅವರು. CSK ವಿರುದ್ಧ 31 ಎಸೆತಗಳಲ್ಲಿ 37 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು.


ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಸಾಯಿ ಸುದರ್ಶನ್ ಸಖತ್ ಬ್ಯಾಟಿಂಗ್ ಮಾಡಿದ್ದರು. ಈ ಪಂದ್ಯದಲ್ಲಿ 36 ಎಸೆತಗಳಲ್ಲಿ 4 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 45 ರನ್ ಗಳಿಸಿದರು.


ಇದನ್ನೂ ಓದಿ:  ಗೆಳತಿ ಗಂಡನಿಗೆ ಅಣ್ಣ ಎಂದು ರಾಖಿ ಕಟ್ಟಿದ್ಳು.. ಬಳಿಕ ಆತನಿಂದಲೇ ಮದುವೆಗೂ ಮುನ್ನ ಗರ್ಭಿಣಿಯಾದ್ಳು ಈ ಖ್ಯಾತ ನಟಿ!


CSKಯ ಸ್ಟಾರ್ ಆಲ್‌ರೌಂಡರ್ ಶಿವಂ ದುಬೆ ಕಳೆದ ವರ್ಷದಿಂದ ಅದ್ಭುತವಾಗಿ ಆಡುತ್ತಿದ್ದಾರೆ. ಈ ಸೀಸನ್’ನ ಮೊದಲ ಪಂದ್ಯದಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ಮೈದಾನಕ್ಕೆ ಪ್ರವೇಶಿಸಿದ ಅವರು ಕೇವಲ 28 ಎಸೆತಗಳಲ್ಲಿ 4 ಬೌಂಡರಿ ಮತ್ತು 1 ಸಿಕ್ಸರ್ ಬಾರಿಸುವ ಮೂಲಕ ತಂಡದ ಗೆಲುವಿಗೆ ಅಮೂಲ್ಯ ಕೊಡುಗೆ ನೀಡಿದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.