ನವದೆಹಲಿ:   ಯಾವುದೇ ವಿವಾದವಿಲ್ಲದೆ ಐಪಿಎಲ್ ಟೂರ್ನಿ ನಡೆಯುವುದಾದರೂ ಹೇಗೆ, ಲಲಿತ್ ಮೋದಿಯಿಂದ ಹಿಡಿದ ಸ್ಪಾಟ್ ಫಿಕ್ಸಿಂಗ್ ವರೆಗೆ ಹಲವು ವಿವಾದಗಳನ್ನು ನಾವು ನೋಡಿದ್ದೇವೆ. ಈ ಆವೃತ್ತಿಯ 5 ಟಾಪ್ ವಿವಾದಗಳನ್ನು ನೋಡೋಣ ಬನ್ನಿ.


COMMERCIAL BREAK
SCROLL TO CONTINUE READING

1) ಐಪಿಎಲ್ ಪ್ರಾಯೋಜಕ ವಿವೋವನ್ನು ತೆರವುಗೊಳಿಸಿದ್ದು:


ಈ ಮೈದಾನದಲ್ಲಾಗಲಿ ಅಥವಾ ಆಟಗಾರರ ನಡುವೆಯಾಗಲಿ ನಡೆದಿರುವುದಲ್ಲ, ಈ ವಿವಾದ ಎರಡು ದೇಶಗಳ ನಡುವೆ ನಡೆದ ಉದ್ವಿಗ್ನತೆಯಿಂದಾಗಿ ಇದು ಉದ್ಬವಗೊಂಡಿತು. ಚೀನಾ ಮತ್ತು ಭಾರತದ ನಡುವೆ ಲಡಾಖ್ ಗಡಿ ಪ್ರದೇಶದಲ್ಲಿನ ಉದ್ವಿಗ್ನ ಪರಿಸ್ಥಿತಿಯ ಹಿನ್ನಲೆಯಲ್ಲಿ ಹಲವಾರು ಚೀನಾ ಮೂಲದ ಕಂಪನಿಗಳನ್ನು ಬಂದ್ ಮಾಡಿತು. ಈ ಕಾರಣದಿಂದಾಗಿ ಬಿಸಿಸಿಐ ವಿವೋವನ್ನು ಪ್ರಾಯೋಜಕತ್ವದಿಂದ ರದ್ದುಗೊಳಿಸಿತು.ಇದರಿಂದಾಗಿ ಐಪಿಎಲ್ ಗೆ ಸುಮಾರು  100-150 ಕೋಟಿ ರೂ ಗಳ ನಷ್ಟವಾಯಿತು.


IPL 2020: ಅತ್ಯಧಿಕ ರನ್ ಗಳೊಂದಿಗೆ ಕಿತ್ತಳೆ ಕ್ಯಾಪ್ ಗೆದ್ದ ಕನ್ನಡಿಗ ಕೆ.ಎಲ್ ರಾಹುಲ್


2) ರೈನಾ ಐಪಿಎಲ್ ಟೂರ್ನಿಯಿಂದ ಹಿಂದೆ ಸರಿದಿದ್ದು


ಸುರೇಶ ರೈನಾ ಆಕಸ್ಮಿಕವಾಗಿ ವೈಯಕ್ತಿಕ ಕಾರಣಗಳ ನೆಪವೊಡ್ಡಿ ಐಪಿಎಲ್ ಟೂರ್ನಿಯಿಂದ ಹಿಂದೆ ಸರಿದರು, ಆದಾಗ್ಯೂ ಅವರು ಈ ಟೂರ್ನಿಯಿಂದ ಹಿಂದೆ ಸರಿಯಲು ಪ್ರಮುಖ ಕಾರಣ ಧೋನಿವರಂತೆ  ಉತ್ತಮ ಸೌಲಭ್ಯ ದೊರೆಯದೆ ಇರುವುದು ಎನ್ನುವ ಊಹಾಪೋಹಗಳು ಹರಡಿದ್ದವು, ಅವರು ಐಪಿಎಲ್ ಟೂರ್ನಿಯಿಂದ ವಾಪಾಸಾಗಿದ್ದು ಅವರ ತಂಡದ ತೀವ್ರ ಪರಿಣಾಮ ಬೀರಿತು. ಇದರಿಂದಾಗಿ ಈ ಬಾರಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಫ್ಲೇ ಆಫ್ ನಲ್ಲಿ ಸ್ಥಾನ ಪಡೆಯಲು ವಿಫವಾಯಿತು.


IPL 2020: ಡೆಲ್ಲಿ ಕ್ಯಾಪಿಟಲ್ಸ್ ಸೋಲಿಸಿ 5 ನೇ ಐಪಿಎಲ್ ಟ್ರೋಫಿ ಗೆದ್ದ ಮುಂಬೈ ಇಂಡಿಯನ್ಸ್


3) ಧೋನಿಯ ಅಂಪೈರಿಂಗ್ ವಿವಾದ: 


ಸಾಮಾನ್ಯವಾಗಿ ವಿವಾದದಲ್ಲಿ ಧೋನಿ ಹೆಸರು ಕೇಳಿ ಬರುವುದು ಕಡಿಮೆ,ಆದರೆ ಈ ಬಾರಿ  ಧೋನಿ ಕೂಡ ವಿವಾದಕ್ಕೆ ಹೊರತಾಗಲಿಲ್ಲ. ಅಕ್ಟೋಬರ್ 13 ರಂದು ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಶಾರ್ದುಲ್ ಥಾಕೂರ್ ವೈಡ್ ಬಾಲನ್ನು ಎಸೆದರು, ಆಗ ಅಂಪೈರ್ ಪಾಲ್ ರೈಫಲ್ ಅವರು ತಕ್ಷಣ ಅದನ್ನು ವೈಡ್ ಎನ್ನುವ ಸಿಗ್ನಲ್ ನೀಡಲು ಯತ್ನಿಸಿದಾಗ ಧೋನಿ ಅಸಮಾಧಾನವನ್ನು ಕಂಡು ಅಂಪೈರ್ ತಮ್ಮ ನಿರ್ಧಾರದಿಂದ ಹಿಂದೆ ಸರಿದರು. ಈ ವಿಚಾರ ಸಾಮಾಜಿಕ ಮಾಧ್ಯಮಗಳ ವೇದಿಕೆಯಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಯಿತು.


4) ಅನುಷ್ಕ್ತಶರ್ಮಾ- ಸುನಿಲ್ ಗವಾಸ್ಕರ್:


ಇನ್ನೊಂದು ಅಚ್ಚರಿ ಸಂಗತಿ ಎಂದರೆ ಅನುಷ್ಕಾ ಶರ್ಮಾ ಮತ್ತು ಸುನಿಲ್ ಗವಾಸ್ಕರ್ ನಡುವಿನ ವಿವಾದ, ಐಪಿಎಲ್ ನ ಪ್ರಾರಂಭದಲ್ಲಿ ವಿರಾಟ್ ಕೊಹ್ಲಿ ಅಷ್ಟೊಂದು ಉತ್ತಮ ಪ್ರದರ್ಶನ ನೀಡಲಿಲ್ಲ, ಒಂದೆಡೆಗೆ ಕಾಮೆಂಟರಿ ಮಾಡುತ್ತಿದ್ದ ಸುನಿಲ್ ಗವಾಸ್ಕರ್ ವಿರಾಟ್ ಕೊಹ್ಲಿ ಕೇವಲ ಅನುಷ್ಕಾ ಬೌಲಿಂಗ್ ನಲ್ಲಿ ಮಾತ್ರ ಅಭ್ಯಾಸ ಮಾಡಿರುವುದು ಎಂದು ಹೇಳಿದ್ದು ಸಾಕಷ್ಟು ಗಂಭೀರ ವಿಷಯವಾಗಿ ಮಾರ್ಪಟ್ಟಿತು. ವೈರಲ್ ಆಗಿರುವ ವಿಡಿಯೋವೊಂದರಲ್ಲಿ ವಿರಾಟ್ ಕೊಹ್ಲಿ ಅನುಷ್ಕಾ ಅವರ ಬೌಲಿಂಗ್ ನ್ನು ಎದುರಿಸುತ್ತಿದ್ದರು, ಇದನ್ನು ಉಲ್ಲೇಖಿಸಿ ಗವಾಸ್ಕರ್ ಪ್ರತಿಕ್ರಿಯೆ ನೀಡಿದ್ದರು. ಇದಕ್ಕೆ ಗರಂ ಆದ ಅನುಷ್ಕಾ ಶರ್ಮಾ ಅವರು ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದರು.


5) ವಿರಾಟ್ ಕೊಹ್ಲಿ-ಸೂರ್ಯ ಕುಮಾರ್ ಯಾದವ್: 


ಆರ್ಸಿಬಿ- ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನಡುವೆ ಒಂದು ರೀತಿ ಶೀತಲ ಸಮರ ಏರ್ಪಟ್ಟಿತ್ತು, ಕೆಲವರು ಈ ಘಟನೆಯಿಂದಾಗಿಯೇ ಅವರು ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಸ್ಥಾನಪಡೆದಿಲ್ಲ ಎನ್ನುವ ಮಾತುಗಳು ಸಾಮಾಜಿಕ ಮಾಧ್ಯಮದಲ್ಲಿ ವ್ಯಕ್ತವಾದವು