ಕೊಹ್ಲಿಯಿಂದ ಅರ್ಷದೀಪ್’ವರೆಗೆ... T20 ವಿಶ್ವಕಪ್ 2022ರಲ್ಲಿ ಟೀಂ ಇಂಡಿಯಾ ಪರ ಮಿಂಚಿದ ಟಾಪ್ ಆಟಗಾರರು ಇವರೇ
Team India T20 World Cup 2022: 2024ರ ಟಿ20 ವಿಶ್ವಕಪ್ ಆರಂಭಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ಈ ಸಂದರ್ಭದಲ್ಲಿ 2022 ರಲ್ಲಿ ಟೀಮ್ ಇಂಡಿಯಾ ಆಡಿದ ನೆನಪುಗಳನ್ನು ಮತ್ತೊಮ್ಮೆ ಮೆಲುಕು ಹಾಕೋಣ. ಭಾರತ ಸೆಮಿಫೈನಲ್’ನಲ್ಲಿ ಸೋತಿದ್ದರೂ ಕೆಲವು ಆಟಗಾರರು ಅದ್ಭುತ ಪ್ರದರ್ಶನ ನೀಡಿದ್ದರು.
Team India T20 World Cup 2022: ರೋಹಿತ್ ಶರ್ಮಾ ನೇತೃತ್ವದ ಭಾರತೀಯ ಕ್ರಿಕೆಟ್ ತಂಡವು ಜೂನ್ 1 ರಿಂದ ನಡೆಯಲಿರುವ T20 ವಿಶ್ವಕಪ್ 2024 ಗಾಗಿ ಅಮೆರಿಕಗೆ ತೆರಳಿದೆ. 2013ರಿಂದ ಭಾರತ ಒಂದೇ ಒಂದು ಐಸಿಸಿ ಟ್ರೋಫಿ ಗೆಲ್ಲುವಲ್ಲಿ ಯಶಸ್ವಿಯಾಗಿಲ್ಲ. ಹೀಗಿರುವಾಗ ಈ ಬಾರಿ ಭಾರತೀಯ ಆಟಗಾರರು ಟಿ20 ವಿಶ್ವಕಪ್ ಗೆದ್ದು, ಪ್ರಶಸ್ತಿ ಬರವನ್ನು ಕೊನೆಗೊಳಿಸುವರೇ ಎಂಬ ತವಕದಲ್ಲಿ ಭಾರತೀಯ ಅಭಿಮಾನಿಗಳಿದ್ದಾರೆ.
ಇದನ್ನೂ ಓದಿ: ತನಗಿಂತ 10 ವರ್ಷ ಕಿರಿಯ ಆಟಗಾರನ ಜೊತೆ ಕಾವ್ಯಾ ಮಾರನ್ ಡೇಟಿಂಗ್! ಆ ಕ್ರಿಕೆಟಿಗ ಬೇರಾರು ಅಲ್ಲ…
2024ರ ಟಿ20 ವಿಶ್ವಕಪ್ ಆರಂಭಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ಈ ಸಂದರ್ಭದಲ್ಲಿ 2022 ರಲ್ಲಿ ಟೀಮ್ ಇಂಡಿಯಾ ಆಡಿದ ನೆನಪುಗಳನ್ನು ಮತ್ತೊಮ್ಮೆ ಮೆಲುಕು ಹಾಕೋಣ. ಭಾರತ ಸೆಮಿಫೈನಲ್’ನಲ್ಲಿ ಸೋತಿದ್ದರೂ ಕೆಲವು ಆಟಗಾರರು ಅದ್ಭುತ ಪ್ರದರ್ಶನ ನೀಡಿದ್ದರು.
2022ರ ಟಿ20 ವಿಶ್ವಕಪ್’ನಲ್ಲಿ ಆಸ್ಟ್ರೇಲಿಯಾ ನೆಲದಲ್ಲಿ ವಿರಾಟ್ ಕೊಹ್ಲಿ ಅಬ್ಬರಿಸಿದ್ದರು. ಈ ಭಾರತೀಯ ಸ್ಟಾರ್ ಬ್ಯಾಟ್ಸ್’ಮನ್ 6 ಪಂದ್ಯಗಳಲ್ಲಿ ಸುಮಾರು 100 ಸರಾಸರಿಯೊಂದಿಗೆ 296 ರನ್ ಗಳಿಸಿದ್ದರು. ಈ ಅವಧಿಯಲ್ಲಿ 4 ಅರ್ಧಶತಕಗಳು ಕೂಡ ಸಿಡಿಸಿದ್ದರು. ಇದೆಲ್ಲದರ ಹೊರತಾಗಿ ಪಾಕಿಸ್ತಾನದ ಕೈಯಿಂದ ಗೆಲುವನ್ನು ಕಸಿದುಕೊಂಡ ಆ ಅದ್ಭುತ ಇನ್ನಿಂಗ್ಸ್ ಯಾರಾದರೂ ಮರೆಯುವುದುಂಟೇ…!
ಇನ್ನೋರ್ವ ಆಟಗಾರ ಸೂರ್ಯಕುಮಾರ್ ಯಾದವ್. 2022ರಲ್ಲಿ ಅದ್ಭುತವಾಗಿ ಬ್ಯಾಟಿಂಗ್ ಮಾಡಿದ್ದ ಸೂರ್ಯ ಭಾರತದ ಪರ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದರು. 6 ಪಂದ್ಯಗಳಲ್ಲಿ 3 ಅರ್ಧಶತಕಗಳೊಂದಿಗೆ 239 ರನ್ ಗಳಿಸಿದ್ದರು. ಈ ಅವಧಿಯಲ್ಲಿ ಅವರ ಸ್ಟ್ರೈಕ್ ರೇಟ್ 189 ಆಗಿತ್ತು.
ಇದನ್ನೂ ಓದಿ: ದಕ್ಷಿಣ ಭಾರತದ ಈ ನಟನೆಂದರೆ ವಿರಾಟ್’ಗೆ ಪಂಚಪ್ರಾಣ: ಆತ ಪ್ರಶಸ್ತಿ ಗೆದ್ದಾಗ ಕುಣಿದು ಕುಪ್ಪಳಿಸಿದ್ರಂತೆ ಕಿಂಗ್ ಕೊಹ್ಲಿ
ಮೊಹಮ್ಮದ್ ಶಮಿ ಮತ್ತು ಭುವನೇಶ್ವರ್ ಕುಮಾರ್ ಅವರಂತಹ ಅನುಭವಿ ವೇಗದ ದಾಳಿಯೊಂದಿಗೆ 2022 ರ ಟಿ 20 ವಿಶ್ವಕಪ್ ಆಡಲು ಹೋದ ಭಾರತ ತಂಡಕ್ಕೆ ಅರ್ಷದೀಪ್ ಸಿಂಗ್ ಬೆಂಬಲ ಅದ್ಭುತವಾಗಿ ಸಿಕ್ಕಿತ್ತು. ಇವರು ಹೆಚ್ಚು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದು, ಒಟ್ಟು 10 ವಿಕೆಟ್ ಕಬಳಿಸಿದ್ದರು. 8 ವಿಕೆಟ್ ಪಡೆದ ಹಾರ್ದಿಕ್ ಪಾಂಡ್ಯ ಎರಡನೇ ಸ್ಥಾನದಲ್ಲಿದ್ದಾರೆ. ಭುವನೇಶ್ವರ್ ಮತ್ತು ಶಮಿ ಕ್ರಮವಾಗಿ 4 ಮತ್ತು 6 ವಿಕೆಟ್’ಗಳನ್ನು ಪಡೆದಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.