Great Batsmen Who Never Hit A Single Six In Their ODI Careers: ಕ್ರಿಕೆಟ್‌ ಎಂದರೆ ಅಲ್ಲಿ ಸಿಕ್ಸರ್‌, ಬೌಂಡರಿಗಳ ಅಬ್ಬರವಿರೋದು ಸಾಮಾನ್ಯ. ಇನ್ನು ಓರ್ವ ಬ್ಯಾಟ್ಸ್‌ಮನ್‌ ಒಂದೇ ಪಂದ್ಯದಲ್ಲಿ 6ಕ್ಕಿಂತ ಹೆಚ್ಚು ಸಿಕ್ಸರ್‌ ಬಾರಿಸಿ ಮಿಂಚಿರುವುದನ್ನು ನಾವೆಲ್ಲರೂ ನೋಡಿರುತ್ತೇವೆ. ಆದರೆ ವಿಶ್ವ ಕ್ರಿಕೆಟ್‌ʼನಲ್ಲಿ ದಿಗ್ಗಜರೆನಿಸಿಕೊಂಡ ಈ ಐವರು ಕ್ರಿಕೆಟಿಗರು ತಮ್ಮ ಏಕದಿನ ಕ್ರಿಕೆಟ್‌ ವೃತ್ತಿಜೀವನದಲ್ಲಿ ಒಂದೇ ಒಂದು ಸಿಕ್ಸರ್‌ ಕೂಡ ಬಾರಿಸಿಲ್ಲ. ಆ ಆಟಗಾರರು ಯಾರೆಂಬುದನ್ನು ಮುಂದೆ ತಿಳಿಯೋಣ.


COMMERCIAL BREAK
SCROLL TO CONTINUE READING

ಇದನ್ನೂ ಓದಿ:  ಉಗ್ರನನ್ನು ಅಟ್ಟಾಡಿಸಿಕೊಂಡು ಹೋಗಿ ಗುಂಡಿಕ್ಕಿದ ಭಾರತೀಯ ಸೇನೆ! ಟೆರರಿಸ್ಟ್‌ ನರಳಿ ನರಳಿ ಸಾಯುವ...


ಚೇತೇಶ್ವರ ಪೂಜಾರ: ಟೆಸ್ಟ್ ಕ್ರಿಕೆಟ್‌ʼನಲ್ಲಿ ತಾಳ್ಮೆ ಮತ್ತು ರಕ್ಷಣಾತ್ಮಕ ಆಟಕ್ಕೆ ಹೆಸರುವಾಸಿಯಾದ ಭಾರತದ ಚೇತೇಶ್ವರ ಪೂಜಾರ ಏಕದಿನ ಕ್ರಿಕೆಟ್‌ʼನಲ್ಲಿ ಕೇವಲ 4 ಬೌಂಡರಿ ಬಾರಿಸಿದ್ದು ಬಿಟ್ಟರೆ ಒಂದೇ ಒಂದು ಸಿಕ್ಸರ್‌ ಕೂಡ ಬಾರಿಸಿಲ್ಲ.


ಜೆಫ್ರಿ ಬಾಯ್ಕಾಟ್: ಜೆಫ್ರಿ ಇಂಗ್ಲೆಂಡ್‌ನ ಶ್ರೇಷ್ಠ ಬ್ಯಾಟ್ಸ್‌ಮನ್‌ʼಗಳಲ್ಲಿ ಒಬ್ಬರು. 108 ಟೆಸ್ಟ್‌ʼಗಳ ಹೊರತಾಗಿ, ಇಂಗ್ಲೆಂಡ್‌ ಪರ 36 ODIಗಳಲ್ಲಿ ಆಡಿದ್ದಾರೆ. ಇದರಲ್ಲಿ 1082 ರನ್ ಗಳಿಸಿದ್ದರೂ ಸಹ ಒಂದೇ ಒಂದು ಸಿಕ್ಸರ್‌ ಸಿಡಿಸಿಲ್ಲ.


ಮನೋಜ್ ಪ್ರಭಾಕರ್: ಭಾರತದ ಮಾಜಿ ಆಲ್‌ರೌಂಡರ್ ಮನೋಜ್ ಪ್ರಭಾಕರ್ ಅವರು 1984 ಮತ್ತು 1996 ರ ನಡುವೆ ಭಾರತಕ್ಕಾಗಿ 130 ODIಗಳನ್ನು ಆಡಿದ್ದಾರೆ. ಇದರಲ್ಲಿ 1858 ODI ರನ್‌ ಗಳಿಸಿದ್ದರೂ ಸಹ, ಒಂದೇ ಒಂದು ಸಿಕ್ಸರ್‌ ಬಾರಿಸಿಲ್ಲ.


ಕ್ಯಾಲಮ್ ಫರ್ಗುಸನ್: 2009 ರಿಂದ 2011 ರವರೆಗೆ ಫರ್ಗುಸನ್ ಆಸ್ಟ್ರೇಲಿಯಾ ಪರ 30 ODIಗಳನ್ನು ಆಡಿದ್ದಾರೆ. ಈ ಸಂದರ್ಭದಲ್ಲಿ ಐದು ಅರ್ಧಶತಕಗಳನ್ನು ಗಳಿಸಿದ್ದರು. 663 ರನ್‌ʼಗಳಿಗೆ 85 ಸ್ಟ್ರೈಕ್ ರೇಟ್ ಹೊಂದಿದ್ದ ಕ್ಯಾಲಮ್‌, 64 ಬೌಂಡರಿಗಳನ್ನು ಬಾರಿಸಿದ್ದರು. ಆದರೆ ಸಿಕ್ಸರ್‌ ಬಾರಿಸುವಲ್ಲಿ ವಿಫಲರಾಗಿದ್ದಾರೆ.


ಇದನ್ನೂ ಓದಿ:  6 ಅಡಿ ಎತ್ತರ, 140 ಕೆಜಿ ತೂಕ... ಕ್ರಿಕೆಟ್‌ ಲೋಕದಲ್ಲೇ ಅತಿ ದಡೂತಿ ಕ್ರಿಕೆಟಿಗನೀತ!


ತಿಲನ್ ಸಮರವೀರ: ಶ್ರೇಷ್ಠ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್, ತಿಲನ್ ಸಮರವೀರ 2011 ರ ವಿಶ್ವಕಪ್ ಫೈನಲ್ ವಿರುದ್ಧ ಭಾರತ ಸೇರಿದಂತೆ ಶ್ರೀಲಂಕಾ ಪರ 53 ODIಗಳನ್ನು ಆಡಿದ್ದಾರೆ. ಆದರೆ ಈ ಅವಧಿಗಳಲ್ಲಿ ಒಂದೇ ಒಂದು ಸಿಕ್ಸರ್‌ ಕೂಡ ಬಾರಿಸಿಲ್ಲ ಇವರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.