U19 World Cup 2024: ಅಂಡರ್-19 ವಿಶ್ವಕಪ್‌’ನಲ್ಲಿ ಭಾರತವು ಬಾಂಗ್ಲಾದೇಶವನ್ನು 84 ರನ್‌’ಗಳಿಂದ ಸೋಲಿಸುವ ಮೂಲಕ ಪಂದ್ಯಾವಳಿಯನ್ನು ಗೆಲುವಿನೊಂದಿಗೆ ಪ್ರಾರಂಭಿಸಿದೆ. ಈ ಗುಂಪು-ಎ ಪಂದ್ಯವನ್ನು ಬ್ಲೋಮ್‌ ಫಾಂಟೈನ್‌’ನ ಮಂಗಾಂಗ್ ಓವಲ್‌’ನಲ್ಲಿ ಆಡಲಾಯಿತು. ಬಾಂಗ್ಲಾದೇಶ ನಾಯಕ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡರು.


COMMERCIAL BREAK
SCROLL TO CONTINUE READING

ಇದನ್ನೂ ಓದಿ:ಈ 6 ರಾಶಿಯವರಿಗೆ ಗಜಲಕ್ಷ್ಮೀ ರಾಜಯೋಗ: ಕನಸಲ್ಲೂ ಕಾಣುವುದು ಸಕಲೈಶ್ವರ್ಯ-ಇನ್ಮುಂದೆ ಇವರ ಪ್ರತಿಹೆಜ್ಜೆಯೂ ಗೆಲುವಿನದ್ದೇ!


ಉದಯ್ ಸಹರಾನ್ (64 ರನ್) ಮತ್ತು ಆದರ್ಶ್ ಸಿಂಗ್ (76 ರನ್) ಅವರ ಅದ್ಭುತ ಅರ್ಧಶತಕದ ಆಧಾರದ ಮೇಲೆ ಭಾರತ ನಿಗದಿತ 50 ಓವರ್‌’ಗಳಲ್ಲಿ 251 ರನ್ ಗಳಿಸಿತು. ಇದಕ್ಕುತ್ತರ ನೀಡಲು ಬಾಂಗ್ಲಾದೇಶ ತಂಡ 45.5 ಓವರ್‌’ಗಳಲ್ಲಿ 167 ರನ್‌ಗಳಿಗೆ ಆಲೌಟ್ ಆಯಿತು. ಪಂದ್ಯದ ವೇಳೆ ಉದಯ್ ಸಹರನ್ ಮತ್ತು ಬಾಂಗ್ಲಾದೇಶದ ಆಟಗಾರರ ನಡುವೆ ಘರ್ಷಣೆ ಕೂಡ ಕಂಡುಬಂದಿತ್ತು. ಅದರ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.


ಇದನ್ನೂ ಓದಿ: 10 ವರ್ಷಗಳ ಬಳಿಕ ಮಹಾಲಕ್ಷ್ಮಿ ಯೋಗ: ವೃಷಭ ಸೇರಿ ಈ 5 ರಾಶಿಗೆ ಅದೃಷ್ಟದ ಪರಮಲಾಭ- ತಿಂಗಳಾಂತ್ಯಕ್ಕೆ ಬಂಪರ್ ಲಾಟರಿ ಭಾಗ್ಯ


ಭಾರತದ ಆರಂಭ ಉತ್ತಮವಾಗಿರಲಿಲ್ಲ. ಇಬ್ಬರು ಬ್ಯಾಟ್ಸ್‌’ಮನ್‌’ಗಳು 31 ರನ್ ಗಳಿಸಿ ಪೆವಿಲಿಯನ್‌’ಗೆ ಮರಳಿದ್ದರು. ಇದರ ನಂತರ, ನಾಯಕ ಉದಯ್ ಸಹರಾನ್ ಮತ್ತು ಆದರ್ಶ್ ಸಿಂಗ್ ನಡುವೆ ಅದ್ಭುತ ಶತಕದ ಜೊತೆಯಾಟವು ಭಾರತವನ್ನು ಸ್ಕೋರ್‌’ಗೆ ಕೊಂಡೊಯ್ದಿತು. ಈ ಇಬ್ಬರು ಬ್ಯಾಟ್ಸ್‌’ಮನ್‌’ಗಳ ಅದ್ಭುತ ಬ್ಯಾಟಿಂಗ್ ಅನ್ನು ಅರಗಿಸಿಕೊಳ್ಳಲಾಗದ ಬಾಂಗ್ಲಾದೇಶ ಆಟಗಾರರು ಇನಿಂಗ್ಸ್‌’ನ 25 ನೇ ಓವರ್‌’ನಲ್ಲಿ, ಆರಿಫುಲ್ ಇಸ್ಲಾಂ ಉದಯ್ ಸಹರಾನ್‌ಗೆ ಏನೋ ಹೇಳಲು ಪ್ರಾರಂಭಿಸಿದರು. ಇದಾದ ನಂತರ, ಬಾಂಗ್ಲಾದೇಶದ ನಾಯಕ ಮಹ್ಫುಜುರ್ ರಹಮಾನ್ ರಬ್ಬಿ ಸಹ ಇಸ್ಲಾಂನೊಂದಿಗೆ ಸಹರಾನ್ ಕಡೆಗೆ ತೆರಳಿ, ಕಣ್ಣುಗಳನ್ನು ತೋರಿಸುತ್ತಾ ಏನೋ ಹೇಳಲು ಪ್ರಾರಂಭಿಸಿದರು. ಈ ವೇಳೆ ಭಾರತದ ನಾಯಕ ಕೂಡ ಸಿಟ್ಟಿನಿಂದ ಮುಂದೆ ಬಂದರು. ಅಷ್ಟರಲ್ಲಿ ಅಲ್ಲಿದ್ದ ಅಂಪೈರ್ ಮಧ್ಯ ಪ್ರವೇಶಿಸಿ ಆಟಗಾರರನ್ನು ಶಾಂತಗೊಳಿಸಿದರು. ಬಳಿಕ ಅಂಪೈರ್ ಕೂಡ ಬಾಂಗ್ಲಾದೇಶದ ಆಟಗಾರರಿಗೆ ವಿವರಣೆ ನೀಡುತ್ತಿರುವುದು ಕಂಡುಬಂದಿತು. ಇದರ ವಿಡಿಯೋ ಕೂಡ ಸಾಕಷ್ಟು ವೈರಲ್ ಆಗುತ್ತಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.