ಈ 6 ರಾಶಿಯವರಿಗೆ ಗಜಲಕ್ಷ್ಮೀ ರಾಜಯೋಗ: ಕನಸಲ್ಲೂ ಕಾಣುವುದು ಸಕಲೈಶ್ವರ್ಯ-ಇನ್ಮುಂದೆ ಇವರ ಪ್ರತಿಹೆಜ್ಜೆಯೂ ಗೆಲುವಿನದ್ದೇ!

Gajalakshmi Rayoga: 2023ರ ಡಿಸೆಂಬರ್ 31ರಂದು ದೇವ ಗುರು ಗುರು ಗ್ರಹವು ಪ್ರತ್ಯಕ್ಷ ಚಲನೆಯೊಂದಿಗೆ ಮೇಷ ರಾಶಿಯನ್ನು ಪ್ರವೇಶಿಸಿದೆ. ಇದಾದ ಬಳಿಕ ಹೊಸ ವರ್ಷದಲ್ಲಿ ಅಂದರೆ 2024ರ ಮೇ 1ರಂದು ಗುರು ವೃಷಭ ರಾಶಿ ಪ್ರವೇಶಿಸಲಿದೆ. ಮತ್ತೊಂದೆಡೆ ಮೇ 19ರಂದು ಶುಕ್ರನೂ ವೃಷಭ ರಾಶಿ ಪ್ರವೇಶಿಸದ್ದಾನೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /9

ಗುರು-ಶುಕ್ರರ ಸಮಾಗಮದಿಂದ ಗಜಲಕ್ಷ್ಮಿ ರಾಜಯೋಗ ಸೃಷ್ಟಿಯಾಗಲಿದೆ. ಗುರು ಮತ್ತು ಶುಕ್ರರು ಕೇಂದ್ರ ಮನೆಯಲ್ಲಿ, ಮುಖಾಮುಖಿಯಾಗಿ ಅಥವಾ ಮೊದಲ, ನಾಲ್ಕನೇ ಮತ್ತು ಏಳನೇ ಮನೆಯಲ್ಲಿದ್ದಾಗ, ಗಜಲಕ್ಷ್ಮಿ ರಾಜಯೋಗವು ರೂಪುಗೊಳ್ಳುತ್ತದೆ.

2 /9

2024ರ ಗಜಲಕ್ಷ್ಮಿ ರಾಜಯೋಗವು ಕೆಲವು ರಾಶಿಗಳಿಗೆ ಬಹಳ ಪ್ರಯೋಜನಕಾರಿಯಾಗಲಿದೆ. ಈ ರಾಶಿಗಳಿಗೆ ಸಂಪತ್ತು ಹೆಚ್ಚಾಗುವ ಶುಭ ಸಾಧ್ಯತೆಗಳಿವೆ ಮತ್ತು ಸಂಬಳ ಹೆಚ್ಚಳವೂ ಆಗಬಹುದು. ಯಾವ ರಾಶಿಯವರಿಗೆ ಗಜಲಕ್ಷ್ಮಿ ರಾಜಯೋಗದ ಲಾಭ ಸಿಗಲಿದೆ ಎಂದು ತಿಳಿಯೋಣ...

3 /9

ಮೇಷ ರಾಶಿ: ಮೇಷ ರಾಶಿಯವರು ಗಜಲಕ್ಷ್ಮಿ ರಾಜಯೋಗದಿಂದ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ಜ್ಞಾನ ಮತ್ತು ಸಮೃದ್ಧಿಯನ್ನು ಪಡೆಯುತ್ತಾರೆ. ಆರೋಗ್ಯವು ಉತ್ತಮವಾಗಿರುತ್ತದೆ. ವಿದ್ಯಾರ್ಥಿಗಳು ತಮ್ಮ ತಂದೆ ಮತ್ತು ಶಿಕ್ಷಕರಿಂದ ಸಂಪೂರ್ಣ ಬೆಂಬಲವನ್ನು ಪಡೆಯುತ್ತಾರೆ. ಕೌಟುಂಬಿಕ ವಾತಾವರಣ ಉತ್ತಮವಾಗಿರುತ್ತದೆ. ಹೊಸ ಮನೆ ಅಥವಾ ಆಸ್ತಿಯನ್ನು ಖರೀದಿಸುವ ಬಯಕೆ ಈಡೇರುತ್ತದೆ.

4 /9

ಕರ್ಕ ರಾಶಿ: ಗಜಲಕ್ಷ್ಮಿ ರಾಜಯೋಗದಿಂದಾಗಿ ಕರ್ಕ ರಾಶಿಯವರ ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಪ್ರಯೋಜನಗಳನ್ನು ಪಡೆಯುವ ಅವಕಾಶಗಳಿವೆ. ಯಾವುದೇ ಹೂಡಿಕೆಯು ಉತ್ತಮ ಲಾಭವನ್ನು ನೀಡುತ್ತದೆ. ನಿಮ್ಮ ಆರ್ಥಿಕ ಸ್ಥಿತಿಯು ಸುಧಾರಿಸುತ್ತದೆ. ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲಕರ ವರ್ಷವಾಗಿದೆ. ಸರ್ಕಾರಿ ಉದ್ಯೋಗಗಳಿಗೆ ತಯಾರಿ ನಡೆಸುತ್ತಿರುವವರಿಗೆ ಈ ವರ್ಷ ಒಳ್ಳೆಯ ಸುದ್ದಿ ಸಿಗಬಹುದು.

5 /9

ಸಿಂಹ ರಾಶಿ: ಗಜಲಕ್ಷ್ಮಿ ರಾಜಯೋಗದಿಂದಾಗಿ ಹೊಸ ಆದಾಯದ ಮೂಲಗಳು ತೆರೆದುಕೊಳ್ಳಲಿದ್ದು, ಆರ್ಥಿಕ ಸ್ಥಿತಿ ಮೊದಲಿಗಿಂತ ಬಲವಾಗಿರುತ್ತದೆ. ನಿಮ್ಮ ಅದೃಷ್ಟವನ್ನು ಸಹ ಬದಲಾಯಿಸುತ್ತದೆ. ವೃತ್ತಿಜೀವನದಲ್ಲಿ ನಿಮ್ಮ ಖ್ಯಾತಿಯೂ ಹೆಚ್ಚಾಗುತ್ತದೆ. ಸಾಮಾಜಿಕ ಮತ್ತು ಧಾರ್ಮಿಕ ಕಾರ್ಯಗಳನ್ನು ಮಾಡುವುದರಿಂದ ನಿಮ್ಮ ಗೌರವವು ಗಮನಾರ್ಹವಾಗಿ ಹೆಚ್ಚಾಗುತ್ತದೆ.

6 /9

ತುಲಾ ರಾಶಿ: ತುಲಾ ರಾಶಿಯ ಜನರು ಗಜಲಕ್ಷ್ಮಿ ರಾಜಯೋಗದಿಂದ ಪ್ರತಿ ಹಂತದಲ್ಲೂ ಬೆಂಬಲವನ್ನು ಪಡೆಯುತ್ತಾರೆ. ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ಸರಿಯಾದ ದಿಕ್ಕಿನಲ್ಲಿ ಚಲಿಸುತ್ತಾರೆ. ಮನೆಯ ವಾತಾವರಣವು ಸಂತೋಷದಿಂದ ತುಂಬಿರುತ್ತದೆ ಮತ್ತು ಕುಟುಂಬ ಸದಸ್ಯರೊಂದಿಗೆ ಯಾವುದೇ ಸಮಸ್ಯೆ ಇದ್ದರೆ, ಅದರಿಂದ ನಿಮಗೆ ಉತ್ತಮ ಪರಿಹಾರ ಸಿಗುತ್ತದೆ.

7 /9

ಧನು ರಾಶಿ: 2024ರಲ್ಲಿ ಧನು ರಾಶಿಯವರ ಆತ್ಮ ವಿಶ್ವಾಸವು ದ್ವಿಗುಣಗೊಳ್ಳುತ್ತದೆ. ಆದಾಯದ ಮೂಲಗಳ ಹೆಚ್ಚಳದಿಂದಾಗಿ, ಆರ್ಥಿಕ ಪರಿಸ್ಥಿತಿಯು ಸಹ ಬಲಗೊಳ್ಳುತ್ತದೆ. ಅಡೆತಡೆಗಳನ್ನು ಎದುರಿಸುತ್ತಿದ್ದ ಕಾರ್ಯಗಳು ಹೊಸ ವರ್ಷದಲ್ಲಿ ಪೂರ್ಣಗೊಳ್ಳುತ್ತವೆ. ಉದ್ಯಮಿಗಳಿಗೆ ಲಾಭವನ್ನು ಗಳಿಸುವ ಶುಭ ಅವಕಾಶಗಳಿವೆ. ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಸಮತೋಲನವನ್ನು ಕಾಯ್ದುಕೊಳ್ಳುವ ಮೂಲಕ ಕೆಲಸ ಮಾಡುತ್ತೀರಿ. ನಿಮ್ಮ ಆರೋಗ್ಯವೂ ಉತ್ತಮವಾಗಿರುತ್ತದೆ.

8 /9

ಮೀನ ರಾಶಿ: ಮೀನ ರಾಶಿಯವರಿಗೆ ಗಜಲಕ್ಷ್ಮಿ ರಾಜಯೋಗದಿಂದ ಆಹ್ಲಾದಕರವಾಗಿರುತ್ತದೆ. ಈ ರಾಶಿಯ ಉದ್ಯೋಗಿಗಳಿಗೆ ಉತ್ತಮ ಇನ್ಕ್ರಿಮೆಂಟ್ ಸಿಗುವ ಸಾಧ್ಯತೆ ಇದೆ. ಹೊಸ ಮನೆ, ಆಸ್ತಿ ಅಥವಾ ವಾಹನವನ್ನು ಖರೀದಿಸುವ ಸಾಧ್ಯತೆಗಳಿವೆ ಮತ್ತು ಹೂಡಿಕೆಯಿಂದ ಉತ್ತಮ ಲಾಭವಿದೆ. ಹಣಕಾಸಿನ ಪರಿಸ್ಥಿತಿಯು ಮೊದಲಿಗಿಂತ ಬಲವಾಗಿರುತ್ತದೆ.

9 /9

(ಸೂಚನೆ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)