Indian Cricket Team : ಈ ಬಾರಿ ಭಾರತ ಏಕದಿನ ವಿಶ್ವಕಪ್‌ನ ಆತಿಥ್ಯವನ್ನು ಪಡೆದುಕೊಂಡಿದೆ. 2011ರ ನಂತರ ಇದೇ ಮೊದಲ ಬಾರಿಗೆ ಭಾರತ ಈ ಬೃಹತ್ ಟೂರ್ನಿಯನ್ನು ಆಯೋಜಿಸುತ್ತಿದೆ. 2011 ರಲ್ಲಿ, ಭಾರತವು ಶ್ರೀಲಂಕಾವನ್ನು ಸೋಲಿಸುವ ಮೂಲಕ ಐಸಿಸಿ ಟ್ರೋಫಿಯನ್ನು ಗೆದ್ದುಕೊಂಡಿತ್ತು. ಇದಾದ ನಂತರ ಯಾವುದೇ ವಿಶ್ವಕಪ್ ಗೆಲುವು ಭಾರತಕ್ಕೆ ಸಾಧ್ಯವಾಗಲಿಲ್ಲ. ಇದೀಗ 12 ವರ್ಷಗಳ ನಂತರ  ಆ ವಿಜಯವನ್ನು ಪುನರಾವರ್ತಿಸುವ ಅವಕಾಶ  ಒದಗಿ ಬಂದಿದೆ. ಕೆಲವೊಂದು ಕಾಕತಾಳೀಯ ಕೂಡಾ ಇಲ್ಲಿ ತುಲನೆಯಾಗುತ್ತಿದೆ.   


COMMERCIAL BREAK
SCROLL TO CONTINUE READING

ವಿಶ್ವಕಪ್‌ಗೂ ಮುನ್ನ ಟೀಂ ಇಂಡಿಯಾ ನಂಬರ್-1 : 
ವಿಶ್ವಕಪ್‌ಗೂ ಮುನ್ನ ಭಾರತ ಕ್ರಿಕೆಟ್ ತಂಡಕ್ಕೆ ಸಿಹಿ ಸುದ್ದಿಯೊಂದು ಸಿಕ್ಕಿದೆ. ಐಸಿಸಿ ಏಕದಿನ ಶ್ರೇಯಾಂಕದಲ್ಲಿ ಭಾರತ ನಂಬರ್-1  ಪಟ್ಟಕ್ಕೆ ಏರಿದೆ.  ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಏಕದಿನ ಸರಣಿಯ ಎರಡನೇ ಪಂದ್ಯವನ್ನು ಗೆಲ್ಲುವ ಮೂಲಕ ಭಾರತ ಈ  ಸಾಧನೆ ಮಾಡಿದೆ. ಇದರೊಂದಿಗೆ  ಕಾಕತಾಳೀಯವೊಂದು ತುಲನೆಯಾಗುತ್ತಿದೆ. ಈ ಕಾಕತಾಳೀಯದ ಆಧಾರದಲ್ಲಿ ಭಾರತ ಈ ಬಾರಿ ವಿಶ್ವಕಪ್ ಗೆಲ್ಲುತ್ತದೆ ಎನ್ನುತ್ತಿದ್ದಾರೆ ಕ್ರಿಕೆಟ್ ಅಭಿಮಾನಿಗಳು. 


ಇದನ್ನೂ ಓದಿ : World Cup 2023: ವಿಶ್ವಕಪ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಲಿವೆಯಂತೆ ಈ ನಾಲ್ಕು ತಂಡ- ಇರ್ಫಾನ್ ಪಠಾಣ್ ಭವಿಷ್ಯ


 ಏನಿದು ನಂಬಿಕೆ ? : 
ICC ODI ಶ್ರೇಯಾಂಕದಲ್ಲಿ ನಂಬರ್-1 ಆಗಿರುವ  ತಂಡವೇ ಕಳೆದ ಎರಡು ODI ವಿಶ್ವಕಪ್‌ಗಳಲ್ಲಿ  ಕಪ್ ಗೆ ಮುತ್ತಿಕ್ಕಿದೆ. ಆಸ್ಟ್ರೇಲಿಯಾ 2015ರ ವಿಶ್ವಕಪ್ ಗೆದ್ದಿತ್ತು. ಆ ಸಮಯದಲ್ಲಿ ಆಸ್ಟ್ರೇಲಿಯಾ ತಂಡವು ಐಸಿಸಿ ಶ್ರೇಯಾಂಕದಲ್ಲಿ ನಂಬರ್-1 ತಂಡವಾಗಿತ್ತು. ಇದರ ನಂತರ, 2019 ರಲ್ಲಿ ಕಪ್ ಗೆದ್ದ ಇಂಗ್ಲೆಂಡ್ ಐಸಿಸಿ ಶ್ರೇಯಾಂಕದಲ್ಲಿ ನಂಬರ್-1 ODI ತಂಡವಾಗಿತ್ತು. ಉಭಯ ತಂಡಗಳು ನ್ಯೂಜಿಲೆಂಡ್ ತಂಡವನ್ನು ಸೋಲಿಸಿ ಪ್ರಶಸ್ತಿ ಗೆದ್ದವು. ಹೀಗಾಗಿ ಈ ಬಾರಿ ಭಾರತ ತಂಡ ವಿಶ್ವ ಕಪ್ ಗೆದ್ದು ಬೀಗಲಿದೆ ಎನ್ನುವ ನಂಬಿಕೆ ಅಭಿಮಾನಿಗಳದ್ದು. 


ICC ಶ್ರೇಯಾಂಕಗಳು ಪ್ರಾರಂಭವಾದಾಗಿನಿಂದ, ICC  ರ್‍ಯಾಂಕಿಂಗ್‌ನಲ್ಲಿ ಮೊದಲ ಸ್ಥಾನದಲ್ಲಿದ್ದ ತಂಡಗಳು 4 ಬಾರಿ ಪ್ರಶಸ್ತಿಯನ್ನು ಗೆದ್ದಿವೆ.  ಇದರಲ್ಲಿ ಆಸ್ಟ್ರೇಲಿಯಾ ಮೂರು ಬಾರಿ ಟ್ರೋಫಿ ಗೆದ್ದಿದೆ. ಆಸ್ಟ್ರೇಲಿಯಾ ತಂಡವು 2003, 2007 ಮತ್ತು 2015 ರಲ್ಲಿ ಚಾಂಪಿಯನ್ ಆಗಿದ್ದರೆ, 2019 ರಲ್ಲಿ ಒಮ್ಮೆ ಇಂಗ್ಲೆಂಡ್ ನಂಬರ್-1 ಆಗಿ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. 


ಇದನ್ನೂ ಓದಿ : ಮೂರು ಮಾದರಿಯಲ್ಲಿ ಟೀಂ ಇಂಡಿಯಾ ಮೋಡಿ : ಕೋಚ್ ದ್ರಾವಿಡ್ ನೇತೃತ್ವದಲ್ಲಿ ಭಾರತ ನಂ1.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=q9auZ2eqeZo
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.