71 ವರ್ಷಗಳ ಬಳಿಕ ಇದೆ ಮೊದಲ US Open 2020ಯಲ್ಲಿ ವಿಶಿಷ್ಠ ದಾಖಲೆ ಬರೆದ Dominic Thiem
71 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ US Openನ ಫೈನಲ್ ಪಂದ್ಯದಲ್ಲಿ ಆರಂಭಿಕ ಎರಡೂ ಸೆಟ್ ಗಳನ್ನೂ ಸೋತ ಬಳಿಕವೂ ಕೂಡ ಆಟಗಾರನೊಬ್ಬ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ.
ನ್ಯೂಯಾರ್ಕ್: ಆಸ್ಟ್ರಿಯಾದ ಡೊಮಿನಿಕ್ ಥೀಮ್ ಕೊನೆಗೂ ತನ್ನ ವೃತ್ತಿಜೀವನದ ಮೊದಲ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಯುಎಸ್ ಓಪನ್ 2020(US Open 2020) ರ ಫೈನಲ್‌ನಲ್ಲಿ ಥೀಮ್ ಜರ್ಮನಿಯ ಅಲೆಕ್ಸಾಂಡ್ರಾ ಜ್ವೆರೆವ್ ಅವರನ್ನು 2-6, 4-6, 6-4, 6-3, 7-6 (6) ಅಂತರದಿಂದ ಸೋಲಿಸಿದ್ದಾರೆ.
71 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ US Openನ ಫೈನಲ್ ಪಂದ್ಯವೊಂದರಲ್ಲಿ ಆರಂಭಿಕ ಎರಡೂ ಸೆಟ್ ಗಳನ್ನೂ ಸೋತ ಬಳಿಕವೂ ಕೂಡ ಆಟಗಾರನೊಬ್ಬ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ. ಇದಕ್ಕೂ ಮೊದಲು 1949 ರಲ್ಲಿ ಪಾಂಚೊ ಗೊನ್ಜಾಲೆಜ್ ಅವರು ಈ ಸಾಧನೆಯನ್ನು ಮಾಡಿದ್ದರು. ಅಲ್ಲದೆ, 2016 ರಲ್ಲಿ ಮೊದಲ ಬಾರಿಗೆ ಬಿಗ್ ತ್ರೀ (ರೋಜರ್ ಫೆಡರರ್, ರಾಫೆಲ್ ನಡಾಲ್ ಮತ್ತು ನೊವಾಕ್ ಜೊಕೊವಿಕ್) ಹೊರತುಪಡಿಸಿ ಬೇರೆ ಯಾವುದೇ ಆಟಗಾರ ಗ್ರ್ಯಾಂಡ್ ಸ್ಲ್ಯಾಮ್ ಗೆದ್ದಿಲ್ಲ. ಆ ವರ್ಷ, ಸ್ವಿಟ್ಜರ್ಲೆಂಡ್‌ನ ಸ್ಟಾನಿಸ್ಲಾಸ್ ವಾವ್ರಿಂಕಾ ಯುಎಸ್ ಓಪನ್ ಗೆದ್ದಿದ್ದರು. 'ಇಂದು 2 ವಿಜೇತರು ಇರಬಹುದೆಂದು ನಾನು ಬಯಸುತ್ತೇನೆ. ನಾವಿಬ್ಬರೂ ಗೆಲ್ಲಲು ಬಯಸಿದ್ದೆವು ಎಂದು ನಾನು ಭಾವಿಸುತ್ತೇನೆ. ' ಎಂದು ಥೀಮ್ ಹೇಳಿದ್ದಾರೆ.
27 ವರ್ಷದ ಥೀಮ್ ಇದಕ್ಕೂ ಮುನ್ನ 3 ಗ್ಯಾಂಡ್ ಸ್ಲ್ಯಾಮ್ ಫೈನಲ್ ಗಳನ್ನೂ ಸೋತಿದ್ದಾರೆ. ಈ ವರ್ಷ, ಆಸ್ಟ್ರೇಲಿಯನ್ ಓಪನ್ ಫೈನಲ್‌ನಲ್ಲಿ ನೊವಾಕ್ ಜೊಕೊವಿಕ್ ಅವರನ್ನು ಸೋಲಿಸಿದ್ದರು. 2018 ಮತ್ತು 2019 ರಲ್ಲಿ ಫ್ರೆಂಚ್ ಓಪನ್ ಫೈನಲ್ ನಲ್ಲಿ ಥೀಮ್, ರಾಫೆಲ್ ನಡಾಲ್ ವಿರುದ್ಧ ಸೋಲನ್ನು ಅನುಭವಿಸಿದ್ದರು. ಈ ಗೆಲುವಿನೊಂದಿಗೆ 90 ರ ದಶಕದಲ್ಲಿ ಜನಿಸಿದ ಮೊದಲ ಗ್ರ್ಯಾಂಡ್ ಸ್ಲ್ಯಾಮ್ ವಿಜೇತ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ. ಇಬ್ಬರು ಫೈನಲಿಸ್ಟ್‌ಗಳಲ್ಲಿ ಯಾರೇ ಒಬ್ಬರೂ ಗೆದ್ದರೂ ಕೂಡ ಈ ದಾಖಲೆ ನಿರ್ಮಾಣವಾಗುತ್ತಿತ್ತು ಇದಕ್ಕೂ ಮೊದಲು, 63 ಗ್ರ್ಯಾಂಡ್ ಸ್ಲ್ಯಾಮ್ ಗಳಲ್ಲಿ ವಿಜೇತ ಆಟಗಾರರು ಎಂಭತ್ತರ ದಶಕದಲ್ಲಿ ಜನಿಸಿದ್ದಾರೆ.