ಐಸಿಸಿಯ ಆರ್ಮ್‌ಬ್ಯಾಂಡ್ ಚಾರ್ಜ್‌ಗೆ ಸಿಧ್ದಾ! ` ಉಸ್ಮಾನ್ ಖವಾಜಾ` ಹೇಳಿಕೆ
Usman khawaja : ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ಮೊದಲ ಟೆಸ್ಟ್ ಪಂದ್ಯ ಪರ್ತ್ ಮೈದಾನದಲ್ಲಿ ನಡೆದಿದ್ದು, ಈ ಪಂದ್ಯದಲ್ಲಿ ಆಸ್ಟ್ರೇಲಿಯಾವು ಪಾಕಿಸ್ತಾನ ವಿರುದ್ದದ 360 ರನ್‌ಗಳ ಭರ್ಜರಿ ಗಳಿಸಿದೆ. ಈ ಪಂದ್ಯದಲ್ಲಿ ಕಪ್ಪು ಪಟ್ಟಿ ಧರಿಸಿದ್ದ ಆಸ್ಟ್ರೇಲಿಯಾ ಆಟಗಾರ ಉಸ್ಮಾನ್ ಖವಾಜ ಗೆ ಐಸಿಸಿಯು ವಾಗ್ದಂಡನೆ ನೀಡಿದೆ.
Usman khawaja Arm band : ಪರ್ತ್ ಮೈದಾನದಲ್ಲಿ ನಡೆದಿದ್ದ ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಟೆಸ್ಟ್ ಪಂದ್ಯ ಅಂತ್ಯಗೊಂಡಿದೆ. ಈ ಪಂದ್ಯದಲ್ಲಿ ಆಸ್ಟ್ರೇಲಿಯಾವು ಪಾಕಿಸ್ತಾನ ವಿರುದ್ದದ 360 ರನ್‌ಗಳ ಭರ್ಜರಿ ಜಯಗಳಿಸಿತ್ತು. ಆದರೆ ಪರ್ತ್‌ನಲ್ಲಿ ನಡೆದೆ ಪಂದ್ಯದಲ್ಲಿ ಆಸ್ಟ್ರೇಲಿಯಾ ಆಟಗಾರ ಉಸ್ಮಾನ್ ಖವಾಜ ಅವರಿಗೆ ಐಸಿಸಿ ಇಂದ ವಾಗ್ದಂಡನೆ ನೀಡಲಾಯಿತು.
ಈ ಬಗ್ಗೆ ಪ್ರತಿಕ್ರಿಯಿಸದ ಉಸ್ಮಾನ್ ಖವಾಜ ಅವರು ಐಸಿಸಿ ಕ್ರಿಕೇಟ್ ನಿಯಮಗಳ ಬಗ್ಗೆ ಪ್ರಶ್ನೆ ಮಾಡಿದ್ಧಾರೆ. ಪಾಕಿಸ್ತಾನದ ವಿರುಧ್ದದ ಮೊದಲ ಪಂದ್ಯದಲ್ಲಿ ಉಸ್ಮಾನ್ ಖವಾಜ ಅವರು ಕಪ್ಪು ಪಟ್ಟಿಯನ್ನು ಧರಿಸಿದ್ದರು, ಇದು ಗಾಝಾದಲ್ಲಿರುವ ಪ್ಯಾಲೆಸ್ಟೀನಿಯರನ್ನು ಬೆಂಬಲಿಸುವ ಸಂದೇಶವನ್ನು ಸೂಚಿಸುತ್ತಿತ್ತು. ಐಸಿಸಿ ಇಂದ ಯಾವುದೇ ಅನುಮತಿ ಇಲ್ಲದೇ ಇದ್ದರು ಇವರು ಐಸಿಸಿ ನಿಯಮಗಳಿಗೆ ವಿರುಧ್ದವಾಗಿ ಕಪ್ಪು ಪಟ್ಟಿಯನ್ನು ಧರಿಸಿದ್ದರು.
ಇದನ್ನು ಓದಿ- ಭಾರತಕ್ಕೆ ಅನೇಕ ಪದಕ ಗೆದ್ದುಕೊಟ್ಟ ಕುಸ್ತಿಪಟು "ಸಾಕ್ಷಿ ಮಲಿಕ್ " ನಿವೃತ್ತಿ ಘೋಷಣೆ !
ಮೊದಲ ಟೆಸ್ಟ್‌ನಲ್ಲಿ "ಎಲ್ಲಾ ಜೀವಗಳು ಸಮಾನ" ಮತ್ತು "ಸ್ವಾತಂತ್ರ್ಯವು ಮಾನವ ಹಕ್ಕು" ಎಂಬ ಘೋಷಣೆಗಳೊಂದಿಗೆ ಬ್ಯಾಟಿಂಗ್ ಸ್ಪೈಕ್‌ಗಳನ್ನು ಧರಿಸಲು ಖವಾಜಾ ಆರಂಭದಲ್ಲಿ ಯೋಜಿಸಿದ್ದರು. ಇದು ಪ್ಯಾಲೆಸ್ಟೀನಿಯರನ್ನು ಬೆಂಬಲಿಸುವ ಸಂದೇಶಗಳಾಗಿದ್ದು, ಮೊದಲ ಟೆಸ್ಟ್‌ಗೂ ಮುನ್ನ ನಡೆದ ತರಬೇತಿ ಅವಧಿಯಲ್ಲಿ ಅವರು ಆ ಸಂದೇಶಗಳನ್ನು ಪ್ರದರ್ಶಿಸಿದ್ದರು. ಆದಾಗ್ಯೂ, ಕ್ರಿಕೆಟ್ ಆಸ್ಟ್ರೇಲಿಯಾ ಮತ್ತು ಐಸಿಸಿ ಅವರು ರಾಜಕೀಯ ಸಂದೇಶವೆಂದು ಭಾವಿಸುವುದರ ವಿರುದ್ಧ ಎಚ್ಚರಿಕೆ ನೀಡಲು ಅವರನ್ನು ಸಂಪರ್ಕಿಸಿದ್ದರು. ಖವಾಜಾ ತನ್ನ ಸ್ಪೈಕ್‌ಗಳಲ್ಲಿ ಸಂದೇಶಗಳನ್ನು ಹೊಂದುವ ಯೋಜನೆಯನ್ನು ಕೈಬಿಟ್ಟಿದ್ದರು, ಆದರೆ ಬದಲಿಗೆ ಕಪ್ಪು ತೋಳಿನ ಪಟ್ಟಿಯನ್ನು ಧರಿಸಿದ್ದರು.
ಉಸ್ಮಾನ್ ಖವಾಜ ಕಪ್ಪು ಪಟ್ಟಿಯನ್ನು ಧರಿಸಿರುವುದನ್ನು ಐಸಿಸಿ ಪ್ರಶ್ನಿಸಿತು. ಅದಕ್ಕೆ ಪ್ರತಿಕ್ರಿಯಿಸಿದ ಖವಾಜ ಅವರು ವೈಯಕ್ತಿಕ ದುಃಖಕ್ಕಾಗಿ ಕಪ್ಪುಪಟ್ಟಿ ಧರಿಸಿರುವುದಾಗಿ ತಿಳಿಸಿದರು. ನಿಯಮಗಳನ್ನು ಉಲ್ಲಂಘಿಸಿದ್ದರಿಂದ ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಅವರಿಗೆ ವಾಗ್ದಂಡನೆ ನೀಡಿತ್ತು. ಇದರಿಂದ ಅಸಮದಾನಗೊಂಡ ಖವಾಜ ಮುಂದಿನ ಪಂದ್ಯದಲ್ಲಿ ಕಪ್ಪುಪಟ್ಟಿ ಧರಿಸುವುದಿಲ್ಲ ಆದರೆ ಐಸಿಸಿಯನ್ನು ಪ್ರಶ್ನೆ ಮಾಡುತ್ತೇನೆ ಎಂದು ಶುಕ್ರವಾರ ಪತ್ರಿಕೆ ಗೋಷ್ಠಿಯಲ್ಲಿ ತಿಳಿಸಿದರು.
ಇದನ್ನು ಓದಿ-RCB ಸೌರವ್ ಚೌಹಾಣ್ ಅವರನ್ನೇ ಟಾರ್ಗೇಟ್ ಮಾಡಿದ್ದು ಯಾಕೇ ಗೊತ್ತಾ ? ಇಲ್ಲಿದೇ ಚೌಹಾಣ್ T20ಯ ಅಬ್ಬರದ ದಾಖಲೆ!
ಐಸಿಸಿ ಮತ್ತು ಅದರ ಎಲ್ಲಾ ನಿಯಮಗಳಿಗೆ ಗೌರವವನ್ನು ನೀಡುವುದಾಗಿ ಹಾಗೂ ಆರ್ಮ್‌ಬ್ಯಾಂಡ್ ಚಾರ್ಜ್‌ಗೆ ಸ್ಪರ್ಧಿಸುವುದಾಗಿ ತಿಳಿಸಿದ ಅವರು ಐಸಿಸಿಯನ್ನು ಪ್ರಶ್ನೆ ಮಾಡುವುದಾಗಿ ಹೇಳಿದರು. ಬೂಟುಗಳ ಮೇಲೆ ಉಲೇಖಗಳ ಉಲೇಖವನ್ನು ನೀಡಲು ಐಸಿಸಿ ಅನುಮತಿ ನೀಡಿದೆ ಅದರ ಬಗ್ಗೆ ತಮಗೆ ಸಂತೋಷವಾಗಿದ್ದು, ಆದರೆ ತೋಳಿನ ಪಟ್ಟಿಯ ಖಂಡನೆ ಬಗ್ಗೆ ಅರ್ಥವಾಗಲಿಲ್ಲ ಎಂದು ಹೇಳಿದ್ಧಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.