ಭಾರತಕ್ಕೆ ಅನೇಕ ಪದಕ ಗೆದ್ದುಕೊಟ್ಟ ಕುಸ್ತಿಪಟು "ಸಾಕ್ಷಿ ಮಲಿಕ್ " ನಿವೃತ್ತಿ ಘೋಷಣೆ !

Sakshi Malik: ಭಾರತದ ಸ್ಟಾರ್‌ ಮಹಿಳಾ ಕುಸ್ತಿಪಟು ಸಾಕ್ಷಿ ಮಲಿಕ್ ತಮ್ಮ ಕುಸ್ತಿ ಜೀವನಕ್ಕೆ ನಿವೃತ್ತಿ ನೀಡಿದ್ಧಾರೆ. ಡಿಸೆಂಬರ್‌ 21 ಗುರುವಾರದಂದು ನಿವೃತ್ತಿ ಘೋಷಣೆ ಮಾಡಿದ್ಧಾರೆ.ಒಲಂಪಿಕ್‌ ಸೇರಿದಂತೆ  ಕಾಮನ್ವೆಲ್ತ್ ಗೇಮ್ಸ್‌ , ಕಾಮನ್‌ವೆಲ್ತ್ ಚಾಂಪಿಯನ್‌ಶಿಪ್, ಏಷ್ಯನ್ ಚಾಂಪಿಯನ್‌ಶಿಪ್‌ ನಲ್ಲಿ ಭಾಗಿಯಾಗಿ ಅನೇಕ ಪದಕಗಳನ್ನು ಭಾರತಕ್ಕೆ ತಂದು ಕೊಟ್ಟಿದ್ಧಾರೆ.

Written by - Zee Kannada News Desk | Last Updated : Dec 22, 2023, 04:35 PM IST
  • ಕುಸ್ತಿ ಜೀವನಕ್ಕೆ ನಿವೃತ್ತಿ ಘೋಷಣೆ ಮಾಡಿದ ಸಾಕ್ಷಿ ಮಲ್ಲಿಕ್
  • 2016ರ ಒಲಂಪಿಕ್‌ನ ಕಂಚಿನ ಪದಕ ವಿಜೇತೆ "ಸಾಕ್ಷಿ"
  • ಒಲಂಪಿಕ್‌ನಲ್ಲಿ ಕಂಚಿನ ಪದಕ ಗೆದ್ದ ಭಾರತದ ಮೊದಲ ಮಹಿಳಾ ಕುಸ್ತಿಪಟು
ಭಾರತಕ್ಕೆ ಅನೇಕ ಪದಕ ಗೆದ್ದುಕೊಟ್ಟ ಕುಸ್ತಿಪಟು "ಸಾಕ್ಷಿ ಮಲಿಕ್ " ನಿವೃತ್ತಿ ಘೋಷಣೆ ! title=

Wrestling Career: ಭಾರತದ ಹೆಸರಾಂತ ಕುಸ್ತಿಪಟು ಸಾಕ್ಷಿ ಮಲ್ಲಿಕ್‌ ಒಲಂಪಿಕ್‌ ಸೇರಿದಂತೆ ಅನೇಕ ಕಾಮನ್‌ ವೆಲ್ತ್‌ ಹಾಗೂ ಏಷ್ಯನ್ ಚಾಂಪಿಯನ್‌ಶಿಪ್ ನಲ್ಲಿ ಭಾಗವಹಿಸಿದ್ಧಾರೆ. ಇದೀಗ ಅವರು ದಿಢೀರನೆ ನಿವೃತ್ತಿ ಘೋಷಣೆ ಮಾಡಿದ್ಧಾರೆ. ಡಿಸೆಂಬರ್‌ 21 ಗುರುವಾರದಂದು ತಮ್ಮ ಕುಸ್ತಿ ವೃತ್ತಿಗೆ ನಿವೃತ್ತಿ ಕೊಟ್ಟಿರುವುದು ಅಭಿಮಾನಿಗಳಿಗೆ ಆತಂಕ ಉಂಟುಮಾಡಿದೆ.ಭಾರತದ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್‌ಐ) ಚುನಾವಣೆಯಲ್ಲಿ ಆಪ್ತ ಸ್ನೇಹಿತ  ಸಂಜಯ್ ಸಿಂಗ್ ಗೆಲುವು ಸಾಧಿಸಿದ ಬೆನ್ನಲ್ಲೇ ಸಾಕ್ಷಿ ತಮ್ಮ ಕುಸ್ತಿ ಜೀವನಕ್ಕೆ ನಿವೃತ್ತಿ ಘೋಷಣೆ ಮಾಡಿದ್ಧಾರೆ.

ಸಾಕ್ಷಿ ಈ ಹಿಂದೆ  ಭಾರತ ಕುಸ್ತಿ ಒಕ್ಕೂಟದ ಮಾಜಿ ಅಧ್ಯಕ್ಷ ರಾಗಿದ್ದ ಬ್ರಿಜ್ ಭೂಷಣ್ ಅವರ ವಿರುದ್ಧ ಪ್ರತಿಭಟನೆಯನ್ನು ಮಾಡಿದ್ದರು.ಈ ಪ್ರತಿಭಟನೆಯಲ್ಲಿ ಬಜರಂಗ್ ಪುನಿಯಾ ಮತ್ತು ವಿನೇಶ್ ಫೋಗಟ್ ಸೇರಿದಂತೆ ಹಲವು ಕುಸ್ತಿಪಟುಗಳು ಭಾಗಿಯಾಗಿದ್ದರು. ಇದು ರಾಷ್ಟ್ರ ಮಟ್ಟದಲ್ಲಿ ಭಾರಿ ಸಂಚಲನವನ್ನ ಸೃಷ್ಟಿಸಿತ್ತು. ಅದರಂತೆ ಭೂಷಣ್‌ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲಾಯಿತು. ಅಷ್ಟೇ ಅಲ್ಲದೇ ಭೂಷಣ್‌ ಕುಟುಂಬಸ್ತರು ಮತ್ತು ಆಪ್ತ ಸ್ನೇಹಿತರಾದವರು ಭಾರತದ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್‌ಐ) ಚುನಾವಣೆಗಳಲ್ಲಿ ಭಾಗಿಯಾಗದಂತೆ ತಿಳಿಸಿತ್ತು. ಆದರೆ ಸಂಜಯ್‌ ಸಿಂಗ್‌ ಭೂಷಣ್‌ ಅವರ ಆಪ್ತ ಸ್ನೇಹಿತನಾಗಿದ್ದು, ಸಾಕ್ಷಿ ಮಲ್ಲಿಕ್‌ ಅವರು ನಿವೃತ್ತಿಗೆ ಕಾರಣವಾಯಿತು.

ಇದನ್ನು ಓದಿ-ಬ್ಯಾಟಿಂಗ್‌ನಲ್ಲಿ ನಂ.1, ಫಿಲ್ಡಿಂಗ್‌ ನಲ್ಲೂ ನಂ.1 ! 2023ರಲ್ಲಿ ಅತೀ ಹೆಚ್ಚು ಕ್ಯಾಚ್‌ ಹಿಡಿದ ದಾಖಲೆ ಭಾರತದ ಈ ಆಟಗರಾನ ಪಾಲಾಯತ್ತು.

ಗುರುವಾರ ನಡೆದ ಡಬ್ಲ್ಯುಎಫ್‌ಐ ಚುನಾವಣೆ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಕಣ್ಣೀರಿಟ್ಟ ಸಾಕ್ಷಿ, ಇಡೀ ದಿನ ಹೋರಾಟ ನಡೆಸಿದ್ದರು ಯಾವುದೇ ಪ್ರಯೋಜನವಾಗಿಲ್ಲ ತಾವು ಮತ್ತೆಂದಿಗೂ ಕುಸ್ತಿ ಕಡೆ ತಿರುಗಿ ನೋಡುವುದಿಲ್ಲ ಎಂದು ಹೇಳಿ ತಮ್ಮನ್ನು  ಬೆಂಬಲಿಸಿದ ಎಲ್ಲಾ ದೇಶವಾಸಿಗಳಿಗೆ ಧನ್ಯವಾದಗಳನ್ನು ತಿಳಿಸಿದರು. ಅಷ್ಟೇ ಅಲ್ಲದೇ ಸಾಕ್ಷಿ ಮಲಿಕ್, 'ನಾವು ಭರವಸೆ ಇಟ್ಟಿದ್ದ ಮಹಿಳಾ ಅಧ್ಯಕ್ಷೆ ಬೇಡಿಕೆ ಈಡೇರಿಲ್ಲ. ಮಹಿಳೆ ಅಧ್ಯಕ್ಷರಾದರೆ ಶೋಷಣೆ ಆಗುವುದಿಲ್ಲ. ಇಂದು ಸಂಪೂರ್ಣ ಪಟ್ಟಿಯನ್ನು ನೋಡಿದರೆ ಮಹಿಳೆಯರಿಗೆ ಸ್ಥಾನ ನೀಡುತ್ತಿಲ್ಲ. ನಾವು ಪೂರ್ಣ ಧೈರ್ಯದಿಂದ ಈ ಯುದ್ಧವನ್ನು ಮಾಡಿದ್ದೇವೆ ಎಂದು ನಾನು ಹೇಳಲು ಬಯಸುತ್ತೇನೆ. ಈ ಹೋರಾಟ ಮುಂದುವರಿಯುತ್ತದೆ, ಏಕೆಂದರೆ ಮುಂಬರುವ ಪೀಳಿಗೆಗಳು, ಪುತ್ರರು ಮತ್ತು ಪುತ್ರಿಯರು ಈ ಯುದ್ಧದಲ್ಲಿ ಹೋರಾಡಬೇಕಾಗುತ್ತದೆʼ. ಎಂದು ಹೇಳಿ ತಮ್ಮ ನಿವೃತ್ತಿಯನ್ನು ಘೋಷಿಸಿದರು.

ಸಾಕ್ಷಿ ಮಲ್ಲಿಕ್ ಕುಸ್ತಿ ಜೀವನ:

ಸಾಕ್ಷಿ ಅವರು 3 ಸೆಪ್ಟೆಂಬರ್ 1992 ರಂದು ಹರಿಯಾಣದ ರೋಹ್ಟಕ್ ಜಿಲ್ಲೆಯ ಮೊಖರಾ ಗ್ರಾಮದಲ್ಲಿ ಜನಿಸಿದರು. ಅವರ ತಂದೆ ಸುಖಬೀರ್ ದೆಹಲಿ ಸಾರಿಗೆ ಸಂಸ್ಥೆಯ ಬಸ್ ಕಂಡಕ್ಟರ್ ಆಗಿದ್ದರು. ತಾಯಿ ಸುದೇಶ್ ಮಲಿಕ್ ಸ್ಥಳೀಯ ಆರೋಗ್ಯ ಚಿಕಿತ್ಸಾಲಯದಲ್ಲಿ ಮೇಲ್ವಿಚಾರಕರಾಗಿದ್ದರು.ಭಾರತದ ಸ್ಟಾರ್ ಕುಸ್ತಿಪಟು ಸಾಕ್ಷಿ 12 ನೇ ವಯಸ್ಸಿನಲ್ಲಿ ರೋಹ್ಟಕ್‌ನ ಅಖಾಡವಾದ ಛೋಟು ರಾಮ್ ಸ್ಟೇಡಿಯಂನಲ್ಲಿ ಕೋಚ್ ಈಶ್ವರ್ ದಹಿಯಾ ಅವರೊಂದಿಗೆ ಕುಸ್ತಿ ತರಬೇತಿ ಪಡೆದರು. ಆದರೆ ಈ ಸಮಯದಲ್ಲಿ ಸಾಕ್ಷಿ ರೋಹ್ಟಕ್‌ನ ಮಹರ್ಷಿ ದಯಾನಂದ ವಿಶ್ವವಿದ್ಯಾಲಯದಲ್ಲಿ ದೈಹಿಕ ಶಿಕ್ಷಣದಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದರು.

ಇದನ್ನು ಓದಿ-ಆಸ್ಟ್ರೇಲಿಯಾವನ್ನು 219 ಕ್ಕೆ ಆಲೌಟ್ ಮಾಡಿದ ಭಾರಿತೀಯ ವನಿತೆಯರು !

ಸೆಪ್ಟೆಂಬರ್ 2016 ರಲ್ಲಿ ವಿಶ್ವವಿದ್ಯಾಲಯದ ಕುಸ್ತಿ ನಿರ್ದೇಶಕರಾಗಿ ಸಾಕ್ಷಿ ನೇಮಕಗೊಂಡರು. ಸಾಕ್ಷಿ ಪ್ರಸ್ತುತ ಭಾರತೀಯ ರೈಲ್ವೆಯ ದೆಹಲಿ ವಿಭಾಗದ ಉತ್ತರ ರೈಲ್ವೆ ವಲಯದ ವಾಣಿಜ್ಯ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ. 2016 ರ ರಿಯೊ ಒಲಿಂಪಿಕ್ಸ್‌ನಿಂದ 58 ಕೆಜಿ ವಿಭಾಗದಲ್ಲಿ ಕಂಚಿನ ಪದಕವನ್ನು ಗೆದ್ದು ಇತಿಹಾಸವನ್ನು ಸೃಷ್ಟಿಸಿದ್ಧಾರೆ.  ಈ ಪದಕ ಗೆದ್ದ ಮೊದಲ ಭಾರತೀಯ ಮಹಿಳಾ ಕುಸ್ತಿಪಟು ಎನಿಸಿಕೊಂಡರು ಹೆಮ್ಮೆಯ ವಿಷಯವಾಗಿದೆ. ಭಾರತಕ್ಕೆ ಕೀರ್ತಿ ತರುವ ಕಾರ್ಯದಲ್ಲಿ ತೊಡಗಿದ್ದ ಓರ್ವ ಆಟಗಾರ್ತಿ ಇಷ್ಟು ಬೇಗ ತಮ್ಮ ವೃತ್ತಿ ಜೀವನಕ್ಕೆ ನಿವೃತ್ತಿ ಹೇಳಿರುವುದು ದೇಶ ಬೇಸರ ಪಡುವ ವಿಷಯವಾಗಿದೆ. 

ಸಾಕ್ಷಿ 2022 ರ ಬರ್ಮಿಂಗ್ಹ್ಯಾಮ್ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕವನ್ನು ಗೆದ್ದಿದ್ದಾರೆ. 2022 ರಲ್ಲಿ ಟರ್ಕಿಯ ಇಸ್ತಾನ್‌ಬುಲ್‌ನಲ್ಲಿ ನಡೆಯಲಿರುವ ಯಾಸರ್ ಡೋಗು ಟೂರ್ನಮೆಂಟ್‌ನಲ್ಲಿ ಭಾಗವಹಿಸಿದ್ದಾರೆ. ಟುನೀಶಿಯಾದಲ್ಲಿ ನಡೆದ 2022 ರ ಟ್ಯೂನಿಸ್ ಶ್ರೇಯಾಂಕದ ಸರಣಿಯ ಈವೆಂಟ್‌ನಲ್ಲಿ ಅವರು ಕಂಚಿನ ಪದಕವನ್ನು ಗೆದ್ದರು. ಸಾಕ್ಷಿ ಈ ಹಿಂದೆ 2014ರಲ್ಲಿ ಗ್ಲಾಸ್ಗೋದಲ್ಲಿ ನಡೆದ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಹಾಗೂ 2015ರಲ್ಲಿ ದೋಹಾದಲ್ಲಿ ನಡೆದ ಏಷ್ಯನ್‌ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆದ್ದಿದ್ದರು. ಒಲಂಪಿಕ್‌ , ಕಾಮನ್‌ ವೆಲ್ತ್‌ ಹಾಗೂ ಏಷ್ಯನ್ ಚಾಂಪಿಯನ್‌ಶಿಪ್ ಸೇರಿದಂತೆ ಒಟ್ಟು 10 ಪದಕಗಳನ್ನು ಗೆದ್ದು ಭಾರತಕ್ಕೆ ಕೊಡುಗೆ ನೀಡಿದ್ಧಾರೆ.

ಸಾಕ್ಷಿ ಮಲ್ಲಿಕ್‌ರವರ ಪದಕ ಭೇಟೆಗಳು :

ಒಲಿಂಪಿಕ್ಸ್ 2016 - ಕಂಚಿನ ಪದಕ

ಕಾಮನ್ವೆಲ್ತ್ ಗೇಮ್ಸ್ 2014 - ಬೆಳ್ಳಿ ಪದಕ
ಕಾಮನ್ವೆಲ್ತ್ ಗೇಮ್ಸ್ 2018 - ಕಂಚಿನ ಪದಕ
ಕಾಮನ್‌ವೆಲ್ತ್ ಗೇಮ್ಸ್ 2022 - ಚಿನ್ನದ ಪದಕ

ಕಾಮನ್‌ವೆಲ್ತ್ ಚಾಂಪಿಯನ್‌ಶಿಪ್ 2013 - ಕಂಚಿನ ಪದಕ
ಕಾಮನ್‌ವೆಲ್ತ್ ಚಾಂಪಿಯನ್‌ಶಿಪ್ 2017 - ಚಿನ್ನದ ಪದಕ

ಏಷ್ಯನ್ ಚಾಂಪಿಯನ್‌ಶಿಪ್ 2015 - ಕಂಚಿನ ಪದಕ
ಏಷ್ಯನ್ ಚಾಂಪಿಯನ್‌ಶಿಪ್ 2017 - ಬೆಳ್ಳಿ ಪದಕ
ಏಷ್ಯನ್ ಚಾಂಪಿಯನ್‌ಶಿಪ್ 2018 - ಕಂಚಿನ ಪದಕ
ಏಷ್ಯನ್ ಚಾಂಪಿಯನ್‌ಶಿಪ್ 2019 - ಕಂಚಿನ ಪದಕ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News